ಚಾಮರಾಜನಗರ : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿವೆ

ಚಾಮರಾಜನಗರ, ಏ. 21 : ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿಯ ವ್ಯಾಪ್ತಿಯಲ್ಲಿರುವ ಅಂಗನವಾಡಿಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 15, 2015.

ಕಮರವಾಡಿ-3ನೇ ಕೇಂದ್ರ (ಇತರೆ), ಹಂಡ್ರಕಳ್ಳಿ -1ನೇ ಕೇಂದ್ರ (ಪರಿಶಿಷ್ಟ ಜಾತಿ), ಕಾವುದವಾಡಿ - 1ನೇ ಕೇಂದ್ರ (ಪ.ಜಾ) ಅಂಗನವಾಡಿಯಲ್ಲಿ ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇವೆ.

Chamarajanagar

ಸಹಾಯಕಿಯರ ಹುದ್ದೆ : ಶಿವಪುರ-1ನೇ ಕೇಂದ್ರ (ಪ.ಜಾ), ಉತ್ತುವಳ್ಳಿ-2ನೇ ಕೇಂದ್ರ (ಇತರೆ), ಚಂದಕವಾಡಿ-1ನೇ ಕೇಂದ್ರ (ಇತರೆ), ಚಂದಕವಾಡಿ-5ನೇ ಕೇಂದ್ರ (ಇತರೆ), ಬಸವನಪುರ-1ನೇ ಕೇಂದ್ರ (ಪ.ಜಾ), ಕೋಡಿಮೋಳೆ-1ನೇ ಕೇಂದ್ರ (ಇತರೆ). [ಉದ್ಯೋಗದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ನಾಗವಳ್ಳಿ-3ನೇ ಕೇಂದ್ರ (ಪ.ಜಾ), ನಾಗವಳ್ಳಿ-2ನೇ ಕೇಂದ್ರ (ಇತರೆ), ಕೆಂಪನಪುರ-1ನೇ ಕೇಂದ್ರ (ಇತರೆ), ಸಂತೆಮರಹಳ್ಳಿಮೋಳೆ (ಇತರೆ), ಹಂಡ್ರಕಳ್ಳಿಮೋಳೆ-2ನೇ ಕೇಂದ್ರ (ಇತರೆ), ಜ್ಯೋತಿಗೌಡನಪುರ-4ನೇ ಕೇಂದ್ರ (ಇತರೆ).

ದೊಡ್ಡರಾಯಪೇಟೆ-3ನೇ ಕೇಂದ್ರ (ಪ.ಜಾ), ದೇವಹಳ್ಳಿ ಮೋಳೆ (ಇತರೆ), ಮುಕ್ಕಡಹಳ್ಳಿ-1ನೇ ಕೇಂದ್ರ (ಇತರೆ) ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಆಸಕ್ತ ಮಹಿಳಾ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ಸಂತೆಮರಹಳ್ಳಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಇಡಲಾಗಿರುವ ಟೆಂಡರ್ ಪೆಟ್ಟಿಗೆಯಲ್ಲಿ ಮೇ 15ರ ಸಂಜೆ 5 ಗಂಟೆಯೊಳಗೆ ಹಾಕುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+