ಅರೆ ವೈದ್ಯಕೀಯ ತರಬೇತಿ, ತಾತ್ಕಾಲಿಕ ಸೇವೆಗೆ ನಿಯೋಜನೆ
ಧಾರವಾಡ, ಮೇ 25; ಕೋವಿಡ್ ನಿಯಂತ್ರಿಸಲು ಹೆಚ್ಚುವರಿ ಅರೆ ವೈದ್ಯಕೀಯ ಸಿಬ್ಬಂದಿ ಅಗತ್ಯವಿರುವ ಹಿನ್ನೆಲೆಯಲ್ಲಿ ಆಸಕ್ತರಿಗೆ ತರಬೇತಿ ನೀಡಲಾಗುತ್ತಿದೆ. ಒಂದು ತಿಂಗಳ ತರಬೇತಿ ನೀಡಿ, ಜಿಲ್ಲಾ ಆಸ್ಪತ್ರೆಗಳಲ್ಲಿ ಆನ್‍ಜಾಬ್ ತಾತ್ಕಾಲಿಕ ಸೇವೆಗೆ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಕೌಶಲ್ಯಾಭಿವೃದ್ಧಿ ಮಿಷನ್ ಹಾಗೂ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಆಸಕ್ತರಿಂದ ಅರ್ಜಿ ಕರೆಯಲಾಗಿದೆ. ತುರ್ತು ವೈದ್ಯಕೀಯ ಸೇವೆಗಳ ಬೇಸಿಕ್, ಸಾಮಾನ್ಯ ಸೇವೆಗಳ ಸಹಾಯಕರು, ತುರ್ತು ವಿಭಾಗಲ್ಲಿ ಕೇರ್, ವೈದ್ಯಕೀಯ ಉಪಕರಣಗಳ ತಾಂತ್ರಿಕ ಸಹಾಯಕರು, ಫ್ಲೆಬೋಟೋಮಿಸ್ಟ್, ವೈದ್ಯಕೀಯ ದಾಖಲೆಗಳ ನಿರ್ವಹಣೆ ಕುರಿತು ತರಬೇತಿ ನೀಡಲಾಗುತ್ತದೆ.
ತರಬೇತಿ ಬಳಿಕ ತಾತ್ಕಾಲಿಕ ಉದ್ಯೋಗ ಒದಗಿಸಲಾಗುವುದು. ಆಸಕ್ತರು https://tinyurl.com/skillDwd ಲಿಂಕ್ ಮೂಲಕ ರಾಯಾಪುರದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿಗೆ ಅಥವ [email protected] ವಿಳಾಸಕ್ಕೆ ವಿವರ ಕಳಿಸಬಹುದಾಗಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ರಾಯಾಪುರದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ಮೊಬೈಲ್ ಸಂಖ್ಯೆ 9845437056 ಕರೆ ಮಾಡಬಹುದಾಗಿದೆ.
1,763 ವೈದ್ಯರ ನೇಮಕಾತಿ ಪೂರ್ಣ; ಕೋವಿಡ್ ಸಂದರ್ಭದಲ್ಲಿ ಕಾರ್ಯ ನಿರ್ವಹಣೆ ಮಾಡಲು ರಾಜ್ಯದ ತಾಲೂಕು ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ 1,763 ವೈದ್ಯರ ನೇಮಕಾತಿಯನ್ನು ಪೂರ್ಣಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.












Click it and Unblock the Notifications