KIMS Hubli Recruitment : ಹುಬ್ಬಳ್ಳಿ ವೈದ್ಯಕೀಯ ಸಂಸ್ಥೆಯಲ್ಲಿ ಹುದ್ದೆಗಳ ಭರ್ತಿ

ಹುಬ್ಬಳ್ಳಿ, ಜುಲೈ. 26: ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದು ನೇರ ಸಂದರ್ಶನ ಮಾದರಿಯ ನೇಮಕಾತಿ ಪ್ರಕ್ರಿಯೆ ಆಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿದ್ದು, ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು 29.7.2022ರಂದು ನಿರ್ದೇಶಕರು, ಆಡಳಿತ ವಿಭಾಗ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಇಲ್ಲಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಬರುವಾಗ ತಮ್ಮ ಎಲ್ಲ ಮೂಲ ದಾಖಲಾತಿಗಳು ಹಾಗೂ 2 ಫೋಟೋಗಳನ್ನು ತರಬೇಕು ಎಂದು ಪ್ರಕಟಣೆ ತಿಳಿಸಿದೆ.

Application Invited for Vacancy in Hubballi Medical Institute

ಹುದ್ದೆಗಳ ವಿವರ ಇಂತಿದೆ; ಮನೋವೈದ್ಯಶಾಸ್ತ್ರ ವಿಭಾಗಕ್ಕೆ ಸಹ ಪ್ರಾಧ್ಯಾಪಕ (ಅಸೋಸಿಯೇಟ್‌ ಪ್ರೋಫೆಸರ್‌) 1 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ವೇತನ ತಿಂಗಳಿಗೆ 65,000 ರು.ಗಳಾಗಿದ್ದು, ರಾಷ್ಟ್ರೀಯ ವೈದ್ಯಕೀಯ ಮಂಡಳಿಯ ನಿಯಮಾನುಸಾರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಮನೋವೈದ್ಯಶಾಸ್ತ್ರ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕ (ಅಸಿಸ್ಟೆಂಟ್‌ ಪ್ರೋಫೆಸರ್) 1 ಹುದ್ದೆ, ವೇತನ ತಿಂಗಳಿಗೆ 55,000. ಇದು ರಾಷ್ಟ್ರೀಯ ವೈದ್ಯಕೀಯ ಮಂಡಳಿ ನಿಯಮಾನುಸಾರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಪ್ರತಿವರ್ಷ ಶೇ.5ರಷ್ಟು ವೇತನ ಹೆಚ್ಚಳವಾಗುತ್ತದೆ.

ತುರ್ತು, ಅಪಘಾತ ಔಷಧ ವಿಭಾಗಕ್ಕೆ 3 ಹುದ್ದೆಗಳು ಖಾಲಿ ಇವೆ. 1. ಪ್ರಾಧ್ಯಾಪಕ, 1 ಹುದ್ದೆ, ತಿಂಗಳಿಗೆ 1 ಲಕ್ಷ ರುಪಾಯಿ ಮಾಸಿಕ ಸಂಬಳ, 2. ಸಹ ಪ್ರಾಧ್ಯಾಪಕ 1 ಹುದ್ದೆ 70,000 ಮಾಸಿಕ ಸಂಬಳ, 3. ಸಹಾಯಕ ಪ್ರಾಧ್ಯಾಪಕ, 1 ಹುದ್ದೆ, ತಿಂಗಳಿಗೆ 60,000 ರುಪಾಯಿ ಮಾಸಿಕ ಸಂಬಳ ಇರುತ್ತದೆ.

Application Invited for Vacancy in Hubballi Medical Institute

ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳಿಗೆ ಸೂಚನೆಗಳು

1. ಅರ್ಹ ಅಭ್ಯರ್ಥಿಗಳು 500 ರುಪಾಯಿ ಡಿಡಿಯನ್ನು ನಿರ್ದೇಶಕರು, ಕಿಮ್ಸ್‌ ಹುಬ್ಬಳ್ಳಿ ಇವರ ಹೆಸರಿನಲ್ಲಿ ತೆಗೆದು ಮೂಲ ದಾಖಲಾತಿಗಳೊಂದಿಗೆ ಸಂದರ್ಶನದ ಸಮಯಕ್ಕೆ ಹಾಜರಾಗಬೇಕು. ಈ ಡಿಡಿಯು ಮರುಪಾವತಿ ಮಾಡಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

2. ಅಭ್ಯರ್ಥಿಗಳು ಬೆಳಗ್ಗೆ 12 ಒಳಗೆ ಕಚೇರಿಯಲ್ಲಿ ಹಾಜರಿರಬೇಕು. ನಂತರ ಬಂದವರನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ.

3. ಅರ್ಜಿ ನಮೂನೆಯನ್ನು ಸಂದರ್ಶನಕ್ಕೆ ಬಂದ ವೇಳೆಯೇ ನೀಡಲಾಗುತ್ತದೆ. ಅಭ್ಯರ್ಥಿಗಳು ಅಲ್ಲಿಯೇ ಅರ್ಜಿಯನ್ನು ತುಂಬಬೇಕಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+