ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲಸಂಪನ್ಮೂಲ ಇಲಾಖೆಯಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಜುಲೈ. 30: ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯಲ್ಲಿ ಗ್ರೂಪ್‌ ಸಿ ವೃಂದದ ಪರಿಶಿಷ್ಟ ಜಾತಿ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜಲಸಂಪನ್ಮೂಲ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಿರಿಸಿದ್ದ ಸುಮಾರು 155 ಹುದ್ದೆಗಳು ಖಾಲಿ ಇವೆ. ಇವಕ್ಕೆ ಅರ್ಹ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಆಹ್ವಾನಿಸಲಾಗಿದೆ. ಈ ನೇಮಕಾತಿಯು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಒಳಗೊಂಡಿರುವುದಿಲ್ಲ. ಇದು ಮೆರಿಟ್‌ ಆಧಾರಿತ ನೇರ ನೇಮಕಾತಿಯಾಗಿರುತ್ತದೆ ಎಂದು ಪ್ರಕರಣ ತಿಳಿಸಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-8-2022 ಸಂಜೆ 5.30 ಗಂಟೆಯೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ: https://waterresources.karnataka.gov.in ಆಗಿರುತ್ತದೆ.

Application for Backlog Posts in Karnataja Water Resources Department


ಖಾಲಿ ಇರುವ ಒಟ್ಟು ಹುದ್ದೆಗಳು: 155

ಇದರಲ್ಲಿ ಇತರೆ 29, ಮಹಿಳಾ ಅಭ್ಯರ್ಥಿಗಳಿಗೆ 47, ಗ್ರಾಮೀಣ ಅಭ್ಯರ್ಥಿಗಳಿಗೆ 39, ಮಾಜಿ ಸೈನಿಕರಿಗೆ 15, ತೃತಿಯ ಲಿಂಗಿಗಳಿಗೆ 2, ಅಂಗವಿಕಲರಿಗೆ 8 ಹುದ್ದೆಗಳು, ಯೋಜನಾ ನಿರಾಶ್ರಿತರಿಗೆ 7 ಹುದ್ದೆಗಳನ್ನು ವರ್ಗಿಕರಿಸಲಾಗಿದೆ.

ನೇಮಕಾತಿಯನ್ನು ಅಭ್ಯರ್ಥಿ ಗಳಿಸಿದ ಒಟ್ಟು ಶೇಕಡಾವಾರು ಅಂಕಗಳು ಹಾಗೂ ವಯೋಮಿತಿ ಆಧಾರದ ಮೇಲೆ ನಡೆಸಲಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಶುಲ್ಕ ಪಾವತಿ ಮಾಡುವ ಅಗತ್ಯವಿರುವುದಿಲ್ಲ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ 18ರಿಂದ 28 ವರ್ಷ ಹಾಗೂ 29 ವರ್ಷದಿಂದ 40 ವರ್ಷ ವಯಸ್ಸಿನ ಆಧಾರದಲ್ಲಿ ಎರಡು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಇಲ್ಲಿ 29 ವರ್ಷದಿಂದ 40 ವರ್ಷ ವಯಸ್ಸಿನವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈ ವಯೋಮಿತಿಯವರು ಲಭ್ಯವಾಗದಿದ್ದಲ್ಲಿ 18ರಿಂದ 28 ವರ್ಷ ವಯೋಮಿತಿಯವರನ್ನು ಪರಿಗಣಿಸಲಾಗುತ್ತದೆ.

Application for Backlog Posts in Karnataja Water Resources Department

ಶೈಕ್ಷಣಿಕ ಅರ್ಹತೆ: ಪಿಯುಸಿ, ಸಿಬಿಎಸ್‌ಸಿ, ಐಎಸ್‌ಸಿ 10 +, ಜೆಒಸಿ, ಜೆಒಡಿಸಿ, ಮೂರು ವರ್ಷಗಳ ಡಿಪ್ಲೋಮೊ, ಐಟಿಐ, ಸದರಿ ಹುದ್ದೆಗೆ ಪಿಯುಸಿ, ತತ್ಸಮಾನ ಅಂಕಗಳನ್ನು ಮಾತ್ರವೇ ಪರಿಗಣಿಸಲಾಗುತ್ತದೆ. ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ.

ವೇತನ: 21,400-500-24400-550-24600-600-27000-650-29600-750-32600-850-3600-950-39800-1100-42000 + ವೇತನ ಇರುತ್ತದೆ. ನಿಯಮಾನುಸಾರ ಕಾಲಕಾಲಕ್ಕೆ ಅನ್ವಯವಾಗುವ ಇತರೆ ಭತ್ಯೆಗಳು ಅನ್ವಯವಾಗುತ್ತವೆ.

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದಿಂದ 40 ವರ್ಷ ಮೀರರಬಾರದು. ಇದರೊಂದಿಗೆ ಎಲ್ಲ ಅರ್ಹತಾ ಪ್ರಮಾಣಪತ್ರಗಳನ್ನು (ಜಾತಿ, ಗ್ರಾಮೀಣ, ಯೋಜನಾ ನಿರಾಶ್ರಿತಾ, ಅಂಗವಿಕಲ) ಹೊಂದಿರತಕ್ಕದ್ದು. ಹೆಚ್ಚಿನ ಮಾಹಿತಿಗೆ ಮೇಲೆ ಕೊಟ್ಟಿರುವ ಜಲಸಂಪನ್ಮೂಲ ಇಲಾಖೆ ವೆಬ್‌ಸೈಟ್‌ ನೋಡಬಹುದು.

English summary
Applications are invited for the backlog posts of Group C Scheduled Caste Second divison Assistant in Water Resources Department, Government of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X