ಅಲಹಾಬಾದ್ ಬ್ಯಾಂಕಿನಲ್ಲಿ 72 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಏಪ್ರಿಲ್ 12: ಅಲಹಾಬಾದ್ ಬ್ಯಾಂಕ್ 2019ನೇ ಸಾಲಿನ ನೇಮಕಾತಿ ಕುರಿತಂತೆ ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಅಧಿಸೂಚನೆ ಪ್ರಕಟಿಸಿದೆ. ಸುಮಾರು 92ಕ್ಕೂ ಅಧಿಕ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 29ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು : ಅಲಹಾಬಾದ್ ಬ್ಯಾಂಕ್
ಹುದ್ದೆ ಹೆಸರು : ಸೆಕ್ಯುರಿಟಿ ಆಫೀಸರ್, ಸಿವಿಲ್ ಇಂಜಿನಿಯರ್, ಮ್ಯಾನೇಜರ್(ಕಾನೂನು, ಫೈರ್ ಸೆಫ್ಟಿ, ಐಟಿ, ಈಕ್ವಿಟಿ. ಇತ್ಯಾದಿ), ಕಂಪನಿ ಸೆಕ್ರೆಟರಿ, ಫೈನಾನ್ಸ್ ಅನಾಲಿಸ್ಟ್
ಒಟ್ಟು ಹುದ್ದೆ : 92
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಏಪ್ರಿಲ್ 29, 2019
ವಿದ್ಯಾರ್ಹತೆ : ಪದವಿ ಪೂರ್ವ, ಸ್ನಾತಕೋತ್ತರ ಪದವಿ, ಬಿ.ಇ/ಬಿಟೆಕ್, ಎಂಬಿಎ ಹುದ್ದೆಗೆ ತಕ್ಕ ಅರ್ಹತೆಯನ್ನು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪಡೆದಿರತಕ್ಕದ್ದು.

ವಯೋಮಿತಿ
ಕನಿಷ್ಠ ಮಿತಿ: 21 ವರ್ಷ
ಗರಿಷ್ಠ ಮಿತಿ: 35 ವರ್ಷ
ಸಂಬಳ ನಿರೀಕ್ಷೆ: 23,700 ರು ನಿಂದ 45,950 ರು ತನಕ
ನೇಮಕಾತಿ ಪ್ರಕ್ರಿಯೆ : ಆನ್ ಲೈನ್ ಪರೀಕ್ಷೆ ಫಲಿತಾಂಶದ ಆಧಾರ ಹಾಗೂ ವಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನ: 09.04.2019
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 29.04.2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications