ಏರ್‌ಪೋರ್ಟ್ ಪ್ರಾಧಿಕಾರದಲ್ಲಿ 400 ಹುದ್ದೆಗೆ ನೇಮಕಾತಿ, ಬಿಎಸ್ಸಿ ಓದಿರಬೇಕು
ನವದೆಹಲಿ, ಜೂನ್ 8: ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ (AAI- Airports Authority of India) ಏರ್ ಟ್ರಾಫಿಕ್ ಕಂಟ್ರೋಲ್ ಜೂನಿಯರ್ ಎಕ್ಸಿಕ್ಯೂಟಿವ್ (Junior Executive- Air Traffic Control) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 400 ಹುದ್ದೆಗಳು ಖಾಲಿ ಇದ್ದು ಜೂನ್ 15ರಂದು ಅರ್ಜಿಗಳು ಲಭ್ಯ ಇರಲಿವೆ. ಜುಲೈ 14 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಎಎನ್‌ಐ ಸುದ್ದಿ ಸಂಸ್ಥೆ ನೀಡಿರುವ ವರದಿ ಪ್ರಕಾರ, 27 ವರ್ಷದೊಳಗಿನವರು ಈ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದು. ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ಪದವಿಯಲ್ಲಿ ಕಲಿತಿರಬೇಕು ಎನ್ನಲಾಗಿದೆ. ಹೆಚ್ಚಿನ ಮಾಹಿತಿಗೆ ಏರ್‌ಪೋರ್ಟ್‌ಗಳ ಪ್ರಾಧಿಕಾರದ ವೆಬ್‌ಸೈಟ್ ಸಂಪರ್ಕಿಸಬಹುದಾಗಿದೆ.
ವಿವರ:
ಸಂಸ್ಥೆ: ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ
ಹುದ್ದೆ ಹೆಸರು: ಜೂನಿಯರ್ ಎಕ್ಸಿಕ್ಯೂಟಿವ್ (ಏರ್ ಟ್ರಾಫಿಕ್ ಕಂಟ್ರೋಲ್)
ಒಟ್ಟು ಹುದ್ದೆ: 400
ಅರ್ಜಿ ಸಲ್ಲಿಕೆ: ಜೂನ್ 15ರಂದು ಆರಂಭ
ಕೊನೆಯ ದಿನ: ಜುಲೈ 14, 2022

ವಿದ್ಯಾರ್ಹತೆ:
* ಮೂರು ವರ್ಷದ ಬಿಎಸ್ಸಿ ಪದವಿಯಲ್ಲಿ ಶೇ. 60 ಅಂಕ ಪಡೆದಿರಬೇಕು. ಈ ಪದವಿಯ ಐಚ್ಛಿಕ ವಿಷಯಗಳಲ್ಲಿ ಭೌತಶಾಸ್ತ್ರ (Physics) ಮತ್ತು ಗಣಿತ (Mathematics) ಒಳಗೊಂಡಿರಬೇಕು.
* ಅಥವಾ ಯಾವುದೇ ಎಂಜಿನಿಯರಿಂಗ್ ಪದವಿ (ಬಿಇ ಅಥವಾ ಬಿಟಿ) ಆಗಿರಬೇಕು. ಎಂಜಿನಿಯರಿಂಗ್‌ನ ಯಾವುದೇ ಸೆಮಿಸ್ಟರ್‌ನಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯ ಒಳಗೊಂಡಿರಬೇಕು.
ಅನುಭವ: ಯಾವ ಪೂರ್ವಭಾವಿ ಅನುಭವದ ಅಗತ್ಯ ಇಲ್ಲ
ಕೌಶಲ್ಯ: ಅಭ್ಯರ್ಥಿಗಳು ಹತ್ತು ಮತ್ತು ಹನ್ನೆರಡನೇ ತರಗತಿಯಲ್ಲಿ ಇಂಗ್ಲೀಷ್ ಭಾಷೆಯನ್ನು ಒಂದು ವಿಷಯವಾಗಿ ಕಲಿತಿರಬೇಕು. ಇಂಗ್ಲೀಷ್ ಓದಲು, ಬರೆಯಲು ಮತ್ತು ಮಾತನಾಡಲು ತಕ್ಕಮಟ್ಟಿಗಾದರೂ ಬರಬೇಕು.
ವಯಸ್ಸಿನ ಮಿತಿ: 2022, ಜುಲೈ 14ರ ಸಮಯಕ್ಕೆ ಅಭ್ಯರ್ಥಿಯ ವಯಸ್ಸು 27 ವರ್ಷ ದಾಟಿರಬಾರದು. ಮೀಸಲು ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಹೆಚ್ಚಿಸಲಾಗಿದೆ.
ಸಂಬಳ: ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ ವಾರ್ಷಿಕವಾಗಿ 12 ಲಕ್ಷ ರೂ ಸಂಬಳ ಸಾಧ್ಯತೆ.
ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಬಳಿಕ ಅರ್ಹ ಅಭ್ಯರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಉತ್ತಮವಾಗಿ ಮಾಡಿದವರನ್ನು ಮೀಸಲಾತಿಗೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ನಂತರ ದಾಖಲೆಗಳ ಪರಿಶೀಲನೆ, ಧ್ವನಿ ಪರೀಕ್ಷೆ, ಹಿನ್ನೆಲೆ ಪರಿಶೀಲನೆ ಇತ್ಯಾದಿ ನಡೆಯಲಿದೆ.

ಮೀಸಲಾತಿ ಎಷ್ಟೆಷ್ಟು?
ಒಟ್ಟು ಹುದ್ದೆ: 400
ಜನರಲ್ ಕೆಟಗರಿ: 163
ಆರ್ಥಿಕವಾಗಿ ಹಿಂದುಳಿದವರು: 40
ಓಬಿಸಿ: 108
ಎಸ್‌ಸಿ: 59
ಎಸ್‌ಟಿ: 30
ಅಂಗವೈಕಲ್ಯತೆಯವರು: 4
ಸಂಪರ್ಕ ಕೊಂಡಿ: https://www.aai.aero
(ಒನ್ಇಂಡಿಯಾ ಸುದ್ದಿ)












Click it and Unblock the Notifications