ಏರ್ ಇಂಡಿಯಾ ಹುಬ್ಬಳ್ಳಿ ವಿಭಾಗದಲ್ಲಿ 7 ಹುದ್ದೆಗಳಿವೆ, ಅರ್ಜಿ ಹಾಕಿ
ಹುಬ್ಬಳ್ಳಿ, ಜನವರಿ 29: ಏರ್ ಇಂಡಿಯಾ ಏರ್ ಟ್ರಾನ್ಸ್ ಪೋರ್ಟ್ ಸರ್ವೀಸಸ್ ಲಿಮಿಟೆಡ್(ಎಐಎಟಿಎಸ್ಎಲ್) ತನ್ನ ಅಧಿಕೃತ ವೆಬ್ ಸೈಟಿನಲ್ಲಿ 7 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ ನಲ್ಲಿ ಕಸ್ಟಮರ್ ಏಜೆಂಟ್ ಹಾಗೂ ಹ್ಯಾಂಡಿಮನ್ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಲು ಬಯಸುವ ಆಸಕ್ತ, ಅರ್ಹ ಅಭ್ಯರ್ಥಿಗಳು ಫೆಬ್ರವರಿ 10, 2019ರಂದು ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದು.
ಸಂಸ್ಥೆ ಹೆಸರು: Air India Engineering Services Limited
ಒಟ್ಟು ಹೆಸರು: 7
ಹುದ್ದೆ ಹೆಸರು: ಕಸ್ಟಮರ್ ಏಜೆಂಟ್, ಹ್ಯಾಂಡಿಮನ್/ಹ್ಯಾಂಡಿ ವುಮೆನ್
ಉದ್ಯೋಗ ಸ್ಥಳ : ಹುಬ್ಬಳ್ಳಿ (ಕರ್ನಾಟಕ)
ವಾಕ್ ಇನ್ ದಿನಾಂಕ: 10 ಫೆಬ್ರವರಿ 2019

ವಿದ್ಯಾರ್ಹತೆ :
ಕಸ್ಟಮರ್ ಏಜೆಂಟ್ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 10+2+3 ಮಾದರಿಯಲ್ಲಿ ಪದವಿ ಪಡೆದಿರಬೇಕು. ಕಂಪ್ಯೂಟರ್ ನಿರ್ವಹಣೆ ಗೊತ್ತಿರಬೇಕು.
ಹ್ಯಾಂಡಿಮನ್/ ಹ್ಯಾಂಡಿವುಮೆನ್ : ಎಸ್ಎಸ್ ಸಿ/10ನೇ ತರಗತಿ ಪಾಸ್
ವಯೋಮಿತಿ:
ಜನರಲ್ : 28 ವರ್ಷ
ಒಬಿಸಿ: 31 ವರ್ಷ(ಜನವರಿ 01, 2019)
ಸಂಬಳ ನಿರೀಕ್ಷೆ:
ಕಸ್ಟಮರ್ ಏಜೆಂಟ್ : 17,790 ರು ಪ್ರತಿ ತಿಂಗಳು
ಹ್ಯಾಂಡಿಮನ್/ಹ್ಯಾಂಡಿವುಮೆನ್ : 13,440 ರು ಪ್ರತಿ ತಿಂಗಳು
ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ ಮಾಜಿ ಯೋಧ: ಯಾವುದೇ ಶುಲ್ಕವಿಲ್ಲ.
ಇತರೆ : 500 ರು
ನೇಮಕಾತಿ ಪ್ರಕ್ರಿಯೆ : ಸ್ಕ್ರೀನಿಂಗ್ ಟೆಸ್ಟ್, ಗುಂಪು ಚರ್ಚೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಮೆಡಿಕಲ್ ಪರೀಕ್ಷೆ
ಪ್ರಮುಖ ದಿನಾಂಕ
ವಾಕ್ ಇನ್ ಸಂದರ್ಶನ: ಫೆಬ್ರವರಿ 10, 2019, 9 ಗಂಟೆ
ಸ್ಥಳ: ಪ್ರೊ ಕಮಲ ಶಿವಪ್ಪ ಬಾಳೇಕುಂದ್ರಿ ಹೈಸ್ಕೂಲ್, ಡಾ. ರಾಧಕೃಷ್ಣನ್ ನಗರ, ಗೋಕುಲ ರಸ್ತೆ, ಹುಬ್ಬಳ್ಳಿ- ಧಾರವಾಡ ಜಿಲ್ಲೆ
ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications