AAI Recruitment: 200ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ, ಮಾಸಿಕ ₹1.10 ಲಕ್ಷ ವೇತನ, ವಿವರ
ಬೆಂಗಳೂರು, ಫೆಬ್ರವರಿ 11: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಯಾರೆಲ್ಲ ಏರ್‌ಪೋರ್ಟ್ ವಲಯದಲ್ಲಿ ಕೆಲಸ ಮಾಡಲು ಇಚ್ಚೆ ಇರುತ್ತದೆ ಅಂಥವರು ಕೂಡಲೇ ಅರ್ಜಿ ಸಲ್ಲಿಸಬಹುದು. SSLC ಹಾಗೂ ಪಿಯುಸಿ 12ನೇ ತರಗತಿ (PUC) ಉತ್ತೀರ್ಣ ಆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಬಸಬಹುದು.
ಎಎಐ ನೇಮಕಾತಿ ಅಧಿಸೂಚನೆ ಪ್ರಕಾರ, ನೀವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಮುಂದಿನ ಮಾಚ್ 5 ರೊಳಗೆ ಅರ್ಜಿ ಸಲ್ಲಿಸಬೇಕು. ಈ ಎಎಐ ನಲ್ಲಿ ಒಟ್ಟು 200ಕ್ಕೂ ಹೆಚ್ಚು ಹಿರಿಯ ಸಹಾಯಕರು ಮತ್ತು ಕಿರಿಯ ಸಹಾಯಕರ ಹುದ್ದೆಗಳು ಇವೆ. ಇವುಗಳಿಗೆ ಆಸಕ್ತರ ಕೂಡಲೇ ಅರ್ಜಿ ಸಲ್ಲಿಸಬಹುದು.

ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI)\
ಒಟ್ಟು ಹುದ್ದೆಗಳೂ 200+
ಹೆದ್ದೆಗಳ ಹೆಸರು: ಹಿರಿಯ & ಕಿರಿಯ ಸಹಾಯಕ
ಪೋಸ್ಟಿಂಗ್: ಭಾರತದಲ್ಲಿ
ಮಾಸಿಕ ವೇತನ: 1.10ಲಕ್ಷ ರೂ.
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಆನ್‌ಲೈನ್ ಲಿಂಕ್: https://aai.aero/
ಹುದ್ದೆಗಳ ಇತರ ವಿವರ
ಜೂನಿಯರ್ ಅಸಿಸ್ಟೆಂಟ್ ಫೈರ್ ಸರ್ವಿಸ್ ಹುದ್ದೆ: 152
ಹಿರಿಯ ಸಹಾಯಕರು (ಎಲೆಕ್ಟ್ರಾನಿಕ್ಸ್): 47
ಹಿರಿಯ ಸಹಾಯಕರು (ಅಕೌಂಟ್ಸ್) 21
ಹಿರಿಯ ಸಹಾಯಕರು ಅಫೀಶಿಯಲ್ ಲ್ಯಾಂಗ್ವೇಜ್ ಹುದ್ದೆ: 4

ಈ ಹುದ್ದೆಗಳು ದೇಶದ ಚಂಡೀಗಢ, ದೆಹಲಿ, ಲಡಾಖ್, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಎಎಐ ನೇಮಕಾತಿ ನಡೆಯುತ್ತಿದ್ದು, ಇಲ್ಲಿ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದೆ. ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು.
ಶೈಕ್ಷಣಿಕ ಅರ್ಹತೆ
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಹಿರಿಯ ಸಹಾಯಕ (ಅಧಿಕೃತ ಭಾಷೆ) ಹುದ್ದೆಗೆ ಅರ್ಜಿ ಸಲ್ಲಿಸಲು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. 2 ವರ್ಷದ ಕಾರ್ಯಾನುಭವ ಇರಬೇಕು. ಹಿರಿಯ ಸಹಾಯಕ (ಅಕೌಂಟ್ಸ್) ಹುದ್ದೆಗೆ ಕಂಪ್ಯೂಟರ್ ಪ್ರಾವೀಣ್ಯತೆ ಇರುವ ಜೊತೆಗೆ 2 ವರ್ಷ ಕಾರ್ಯಾನುಭವ ಹೊಂದಿರುವುದು ಖಡ್ಡಾಯ ಎಂದು ನೇಮಕಾತಿ ಅಧಿಸೂಚನೆ ತಿಳಿಸಿದೆ.
ಇನ್ನೂ ಹಿರಿಯ ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್), ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್, ಟೆಲಿಕಮ್ಯುನಿಕೇಷನ್, ರೇಡಿಯೋ ಎಂಜಿನಿಯರಿಂಗ್, ಕಿರಿಯ ಸಹಾಯಕ (ಫೈರ್ ಸರ್ವಿಸ್) ಹುದ್ದೆಗೆ 10ನೇ ತರಗತಿ ತೇರ್ಗಡೆ, ಆಟೋಮೊಬೈಲ್, ಮೆಕ್ಯಾನಿಕಲ್, ಫೈರ್ ನಲ್ಲಿ ಡಿಪ್ಲೊಮಾ ಅಥವಾ ಚಾಲನಾ ಪರವಾನಗಿ ಹೊಂದಿರಬೇಕು. ದ್ವಿತೀಯ ಪಿಯುಸಿ ಉತ್ತೀರ್ಣವಾಗಿರಬೇಕು ಎಂದು ತಿಳಿಸಲಾಗಿದೆ.
ವಯೋಮಿತಿ ವಿವರ
ಈ ಎಎಐ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ವರ್ಷ ಆಗಿರಬೇಕು. ಜಾತಿ ಆಧಾರದಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ, ಮಾಸಿಕ ವೇತನ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ. ನಂತರ ಅಲ್ಲಿ ಆಯ್ಕೆ ಆದವರಿಗೆ ಸಂದರ್ಶನ ನಡೆಸಿ ದೇಶದ ಯಾವುದೇ ಭಾಗದಲ್ಲಾದರೂ ಪೋಸ್ಟಿಂಗ್ ನೀಡಲಾಗುತ್ತದೆ. ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ 36,000-1,10,000 ರೂಪಾಯಿವರೆಗೆ ಮಾಸಿಕ ವೇತನ ನೀಡಲಾಗುತ್ತದೆ. ಅರ್ಜಿಯನ್ನು ಈ ಅಧಿಕೃತ https://aai.aero/ ಲಿಂಕ್ ಮೇಲೆ ಕ್ಲಿಕ್ ಮಾಡಿ ಸೂಕ್ತ ದಾಖಲೆ, ವಿವರ ನಮೂದಿಸಿ ಮಾರ್ಚ್ 5ರೊಳಗೆ ಸಲ್ಲಿಸುವಂತೆ ತಿಳಿಸಲಾಗಿದೆ.












Click it and Unblock the Notifications