ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ 311 ಹುದ್ದೆಗಳಿವೆ
ನವದೆಹಲಿ, ಆಗಸ್ಟ್ 30: ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ) ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ 311 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 20, 2019 ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಸಂಸ್ಥೆಯ ಹೆಸರು: ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ)
ಹುದ್ದೆ: ಅಪ್ರೆಂಟಿಸ್
ಒಟ್ಟು ಹುದ್ದೆ: 311
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 20, 2019
ವಯೋಮಿತಿ:
ಸಾಮಾನ್ಯ ಅಭ್ಯರ್ಥಿ/ಮೀಸಲಾತಿ ರಹಿತ ಅಭ್ಯರ್ಥಿ: ಗರಿಷ್ಟ 26 ವರ್ಷಗಳು (01.07.2019ರಂತೆ)
ಎಸ್ ಸಿ/ ಎಸ್ಟಿ/ ಮಾಜಿಯೋಧ: ಗರಿಷ್ಠ ವಯೋಮಿತಿಯಲ್ಲಿ 5 ವರ್ಷ ವಿನಾಯತಿ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ

ನಿರೀಕ್ಷಿತ ಸಂಬಳ: 15,000ರೂ. ಪ್ರತಿ ತಿಂಗಳು
ವಿದ್ಯಾರ್ಹತೆ: ಇಂಜಿನಿಯರಿಂಗ್/ತಂತ್ರಜ್ಞಾನ/ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್/ ಇಲೆಕ್ಟ್ರಿಕಲ್/ ಆರ್ಕಿಟೆಕ್ಚರ್ ಇವುಗಳಲ್ಲಿ ಯಾವುದಾದರೊಂದು ಪದವಿಯನ್ನು ಪ್ರತಿಷ್ಟಿತ ಕಾಲೇಜಿನಲ್ಲಿ ಶೇ.60 ಕ್ಕೂ ಹೆಚ್ಚು ಅಂಕಗಳೊಂದಿಗೆ ಪಡೆದಿರಬೇಕು.
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ.
ಪ್ರಮುಖ ದಿನಾಂಕ
ನೋಟಿಫಿಕೇಷನ್ ದಿನಾಂಕ: 29.08.2019
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 20.09.2019
ಅರ್ಜಿ ಸಲ್ಲಿಸುವುದು ಹೇಗೆ: ಎಎಐ ನ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications