ಬೆಂಗಳೂರು ಶಾಲೆಯಲ್ಲಿ ಶಿಕ್ಷಕ ವೃತ್ತಿ ಖಾಲಿ: ಫೆ. 18ರೊಳಗೆ ಅರ್ಜಿ ಸಲ್ಲಿಸಿ, ವಿವಿರ ತಿಳಿಯಿರಿ

ಬಿಎಡ್ ಮುಗಿಸಿ ಉದ್ಯೋಗ ಹುಡುಕುತ್ತಿರುವವರು '515 ಆರ್ಮಿ ಬೇಸ್ ವರ್ಕ್​ಶಾಪ್​​ ಹೈ ಸ್ಕೂಲ್' ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ಕೂಡಲೇ ಅರ್ಜಿ ಸಲ್ಲಿಸಿ. ಹುದ್ದೆಗಳ ವಿವಿರ, ಅರ್ಜಿ ಸಲ್ಲಿಕೆ ಪೂರ್ತಿ ವಿವಿರ ತಿಳಿಯಿರಿ.

ಬೆಂಗಳೂರು, ಫೆಬ್ರವರಿ 09: ಬಿಎಡ್ (B.Ed) ಮುಗಿಸಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಸವರ್ಣ ಅವಕಾಶ ಒದಗಿ ಬಂದಿದೆ. '515 ಆರ್ಮಿ ಬೇಸ್ ವರ್ಕ್​ಶಾಪ್​​ ಹೈ ಸ್ಕೂಲ್' ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ಕೂಡಲೇ ಅರ್ಜಿ ಸಲ್ಲಿಸುವ ಮೂಲಕ ಬೆಂಗಳೂರಿನಲ್ಲೇ ಕೆಲಸ ಮಾಡಬಹುದು.

515 ಆರ್ಮಿ ಬೇಸ್ ವರ್ಕ್​ಶಾಪ್​​ ಹೈ ಸ್ಕೂಲ್ ತನ್ನಲ್ಲಿ ಖಾಲಿ ಇರುವ ಶಿಕ್ಷರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಈ ಕುರಿತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು ಖಾಲಿ ಇರುವ 4 ಶಿಕ್ಷಕ ಹುದ್ದೆಗಳಿಗೆ ಆಸಕ್ತರು ಫೆಬ್ರುವರಿ 18 ರೊಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಮುನ್ನ ಅರ್ಹತೆ ಏನಿರಬೇಕು, ವೇತನ, ಅರ್ಜಿ ಸಲ್ಲಿಕೆಯ ಶುಲ್ಕ ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿ ತಿಳಿದುಕೊಳ್ಳಲು ಇಲ್ಲಿಗೆ ಮಾಹಿತಿ.

515 Army Base Workshop High School Recruitment 2023: Apply For 4 Teacher Post Before Feb 18

ಹುದ್ದೆಗಳ ಸಂಪೂರ್ಣ ವಿವಿರ

ಸಂಸ್ಥೆ ಹೆಸರು - 515 ಆರ್ಮಿ ಬೇಸ್ ವರ್ಕ್​ಶಾಪ್​​ ಹೈ ಸ್ಕೂಲ್

ಹುದ್ದೆ ಹೆಸರು- ಶಿಕ್ಷಕರು

ಖಾಲಿ ಹುದ್ದೆ - ಒಟ್ಟು 4

ವಿದ್ಯಾರ್ಹತೆ- ಬಿ.ಎಡ್

ಉದ್ಯೋಗ ಸ್ಥಳ - ಬೆಂಗಳೂರು

ಒಟ್ಟು ಹುದ್ದೆಗಳ ಮಾಹಿತಿ

ಪಾಥಮಿಕ ಶಿಕ್ಷಕ- 1 (ಎಲ್ಲಾ ವಿಷಯ)

ಕಂಪ್ಯೂಟರ್ ಟೀಚರ್ - 1

ದೈಹಿಕ ಶಿಕ್ಷಕ - 1

ಅಟೆಂಡೆಂಟ್- 1

ಶೈಕ್ಷಣಿಕ ಅರ್ಹತೆ

ಪ್ರಾಥಮಿಕ ಶಿಕ್ಷಕರಾಗಲು ಕಡ್ಡಾಯವಾಗಿ ಬಿ.ಎಡ್ ಮತ್ತು ಪದವಿ ಆಗಿರಬೇಕು. ಕಂಪ್ಯೂಟರ್ ಟೀಚರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿಸಿಎ, ಬಿ.ಎಡ್​, ಬಿಎಸ್ಸಿ, ಪದವಿ ಪಡೆದಿರಬೇಕು. ದೈಹಿಕ ಶಿಕ್ಷಕರು (TET) ಪದವಿ, ಬಿ.ಪಿಎಡ್, ಎಂ.ಪಿಎಡ್, ಡಿ.ಪಿಎಡ್ ಆಗಿರಬೇಕು ಹಾಗೂ ಅಟೆಂಡೆಂಟ್ ಹುದ್ದೆ 10ನೇ ತರಗತಿ ಉತ್ತೀರ್ಣರಾದವರು ಅರ್ಜೀ ಸಲ್ಲಿಸಬೇಕು ಎಂದು ಶಾಲೆ ತಿಳಿಸಿದೆ. ಅಭ್ಯರ್ಥಿಗಳು ಸಿಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

515 Army Base Workshop High School Recruitment 2023: Apply For 4 Teacher Post Before Feb 18

ವಯಸ್ಸಿನ ಮಿತಿ- ಆಯ್ಕೆ ಪ್ರಕ್ರಿಯೆ

ಅರ್ಜಿ ಸಲ್ಲಿಸಲು ಬಯಸು ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕೆಂದು ಶಾಲೆಯು ಅಧಿಸೂಚನೆಯಲ್ಲಿ ತಿಳಿಸಿಲ್ಲ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ಇನ್ನೂ ಆಯ್ಕೆ ಪ್ರಕ್ರಿಯೆ ಕುರಿತು ನೋಡುವುದಾದರೆ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಜೊತೆಗೆ ಕಂಪ್ಯೂಟರ್ ನಲ್ಲಿನ ಪ್ರಾವೀಣ್ಯತೆ ಕುರಿತು ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ಪಾಸಾದವರಿಗೆ ಸಂದರ್ಶನ ಇರಲಿದೆ. ಗಮನಿಸಬೇಕಾದ ಅಂಶವೆಂದರೆ ಲಿಖಿತ ಪರೀಕ್ಷೆ ಮತ್ತು ಕಂಪ್ಯೂಟರ್ ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು ಸ್ವವಿವರ ಅವಶ್ಯಕ ದಾಖಲೆಗಳು ಮತ್ತು ಪಾಸ್​​ಪೋರ್ಟ್​ ಸೈಜ್‌ನ ಫೋಟೋ ಅನ್ನು 'ಪ್ರಾಂಶುಪಾಲರು, 515 ಆರ್ಮಿ ಬೇಸ್ ವರ್ಕ್‌ಶಾಪ್ ಹೈಸ್ಕೂಲ್ ಕೇಂಬ್ರಿಡ್ಜ್ ರೋಡ್ ಕ್ರಾಸ್, ಹಲಸೂರು, ಬೆಂಗಳೂರು - 08 ಗೆ ಫೆಬ್ರವರಿ 18ರೊಳಗೆ ಕಳುಹಿಸಬೇಕು.

ಲಿಖಿತ ಪರೀಕ್ಷೆ ಮತ್ತು ಕಂಪ್ಯೂಟರ್ ಪ್ರಾವೀಣ್ಯತೆ ಪರೀಕ್ಷೆ ನಡೆಯುವ ದಿನ ಫೆಬ್ರವರಿ 23 ದಂದು ನಿಗದಿ ಮಾಡಿರುವದಾಗಿ ಶಾಲೆ ತಿಳಿಸಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಇ-ಮೇಲ್ ಐಡಿ [email protected] ಗೆ ಸಂಪರ್ಕಿಸಬಹದುಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+