ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳ ಹಂಚಿಕೆ; ಏಪ್ರಿಲ್‌ನಿಂದ ನೇಮಕಾತಿ
ಬೆಂಗಳೂರು, ಮಾರ್ಚ್ 09: ಕರ್ನಾಟಕ ಸರ್ಕಾರ 2022-23ನೇ ಸಾಲಿನಲ್ಲಿ ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳ ಹಂಚಿಕೆ ಕುರಿತು ಆದೇಶ ಹೊರಡಿಸಿದೆ. 1/4/2022ರಿಂದ ನೇಮಕಾತಿ ಆರಂಭಿಸಲು ಸೂಚನೆ ನೀಡಲಾಗಿದೆ.
ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು (ನೇಮಕಾತಿ) ಇವರಿಗೆ ಈ ಕುರಿತು ಪತ್ರ ಬರೆಯಲಾಗಿದೆ. 2022-23ನೇ ಸಾಲಿನಲ್ಲಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಮಾಡುವ ಸಲುವಾಗಿ ಕಮೀಷನರೇಟ್/ ಘಟಕಗಳಿಗೆ ಈ ಕೆಳಕಂಡಂತೆ ಹಂಚಿಕೆ ಮಾಡಿ ಆದೇಶ ನೀಡಲಾಗಿದೆ.
ಹುದ್ದೆಗಳ ಹಂಚಿಕೆ ಕಲ್ಯಾಣ ಕರ್ನಾಟಕ ಬೆಂಗಳೂರು ನಗರ 73, ರೈಲ್ವೇಸ್ ಬೆಂಗಳೂರು 17, ಕಲಬುರಗಿ ನಗರ 20, ಕಲಬುರಗಿ ಜಿಲ್ಲೆ 10, ಬೀದರ್ 79, ಯಾದಗಿರಿ 25, ಬಳ್ಳಾರಿ/ ವಿಜಯನಗರ 107, ರಾಯಚೂರು 63, ಕೊಪ್ಪಳ 38 ಒಟ್ಟು ಹುದ್ದೆಗಳು 432.

ಕಲ್ಯಾಣ ಕರ್ನಾಟಕ ಹೊರತುಪಡಿಸಿ ಇತರ ಹುದ್ದೆಗಳು. ಬೆಂಗಳೂರು ನಗರ 520, ಮೈಸೂರು ನಗರ 25, ಮಂಗಳೂರು ನಗರ 50, ಹುಬ್ಬಳ್ಳಿ-ಧಾರವಾಡ ನಗರ 45, ಬೆಳಗಾವಿ ನಗರ 75, ಬೆಂಗಳೂರು ಜಿಲ್ಲೆ 60, ತುಮಕೂರು 45, ರಾಮನಗರ 30, ಮೈಸೂರು 40, ಹಾಸನ 30, ಮಂಡ್ಯ 30, ಶಿವಮೊಗ್ಗ 25, ದಕ್ಷಿಣ ಕನ್ನಡ (ಮಂಗಳೂರು) 45, ಬೆಳಗಾವಿ 30, ರೈಲ್ವೇಸ್ ಬೆಂಗಳೂರು 18. ಒಟ್ಟು ಹುದ್ದೆಗಳು 1068.
ಕಲ್ಯಾಣ ಕರ್ನಾಟಕ ಮತ್ತು ಪರಸ್ಥಳೀಯ ವೃಂದಗಳ ಒಟ್ಟು 1500 ರಿಕ್ತ ಸ್ಥಾನಗಳನ್ನು ಮೇಲ್ಕಂಡಂತೆ ಹಂಚಿಕೆ ಮಾಡಿ ಆದೇಶಿಸಿದ್ದು, ಈ ಹುದ್ದೆಗಳಿಗೆ ಸಂಬಂಧಪಟ್ಟ ಕಮೀಷನರೇಟ್/ ಘಟಕಗಳಿಂದ ವರ್ಗೀಕರಣದ ಮಾಹಿತಿ ಪಡೆದು 1/4/2022ರಿಂದ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಲಾಗಿದೆ.
ಗೃಹರಕ್ಷಕ ಸ್ವಯಂ ಸೇವಕರ ಕರ್ತವ್ಯ ಭತ್ಯೆ ಹೆಚ್ಚಳ; ಕರ್ನಾಟಕ ಸರ್ಕಾರ ಗೃಹರಕ್ಷಕ ಸ್ವಯಂ ಸೇವಕರಿಗೆ ನೀಡಲಾಗುತ್ತಿರುವ ಕರ್ತವ್ಯ ಭತ್ಯೆಯನ್ನುಏರಿಕೆ ಮಾಡಿದೆ. ಸದ್ಯ ಬೆಂಗಳೂರು ನಗರದಲ್ಲಿ ದಿನವೊಂದಕ್ಕೆ ನೀಡುತ್ತಿದ್ದ 400 ರೂ.ಗಳನ್ನು 455 ರೂ.ಗಳಿಗೆ ಮತ್ತು ಇತರ ಸ್ಥಳಗಳಲ್ಲಿ ನೀಡುತ್ತಿದ್ದ 325 ರೂ. ಗಳನ್ನು 380 ರೂ.ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಿದೆ.
ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ಸಮಾದ್ವೇಷ್ಟರು, ಗೃಹ ರಕ್ಷಕದಳ ಹಾಗೂ ಪೌರ ರಕ್ಷಣಾ ಇಲಾಖೆ ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪ್ರಸ್ತುತ ಪೊಲೀಸ್ ಇಲಾಖೆಗೆ ನಿಯೋಜಿಸಲಾದ 6142 ಗೃಹ ರಕ್ಷಕರನ್ನು ಹೊರತುಪಡಿಸಿ ಉಳಿದಂತೆ ಸಾರಿಗೆ, ಅಬಕಾರಿ ಇತ್ಯಾದಿ ಇಲಾಖೆಗಳ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಸದರಿಯವರುಗಳಿಗೆ ನೀಡಬೇಕಾದ ದಿನಭತ್ಯೆಯನ್ನು ಆಯಾ ಇಲಾಖೆಗಳಿಂದಲೇ ನೀಡಲಾಗುತ್ತಿದೆ ಎಂದು ತಿಳಿಸಿರುತ್ತಾರೆ.
ಸದರಿ ಗೃಹರಕ್ಷಕರನ್ನು ವರ್ಷದಲ್ಲಿ 353 ದಿನಗಳ ಕಾಲ ಕರ್ತವ್ಯಕ್ಕೆ ನಿಯೋಜಿಸುತ್ತಿದೆ. ಗೃಹರಕ್ಷಕರ ಭತ್ಯೆಯನ್ನು ನಗರದಲ್ಲಿ 455 ರೂ.ಗಳಿಂದ 600 ರೂ. ಮತ್ತು ರಾಜ್ಯದ ಇತರೆ ಸ್ಥಳಗಳಲ್ಲಿ 380 ರೂ. ನಿಂದ 600ಕ್ಕೆ ಹೆಚ್ಚಳ ಮಾಡುವಂತೆ ಕೋರಿದ್ದರು.
ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರದ ಆದೇಶ ಸಂಖ್ಯೆ ಒಇ 47 ಕಗೃಸೇ 2019, ಬೆಂಗಳೂರು, ದಿನಾಂಕ 8/3/2022ರಂದು ಈ ಆದೇಶ ಹೊರಡಿಸಲಾಗಿರುತ್ತದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ ಆಇ 03 ವೆಚ್ಚ 11/2022 ದಿನಾಂಕ 3/3/2022ರಲ್ಲಿ ನೀಡಿರುವ ಸಹಮತಿಯೊಂದಿಗೆ ಹೊರಡಿಸಲಾಗಿದೆ ಎಂದು ಸರ್ಕಾರದ ಉಪ ಕಾರ್ಯದರ್ಶಿ ಒಳಾಡಳಿತ ಇಲಾಖೆ (ಪೊಲೀಸ್ ಸಹಾಯಕ ಸೇವೆಗಳು ಮತ್ತು ಸಮನ್ವಯ) ಆದೇಶ ಹೊರಡಿಸಿದ್ದಾರೆ
ಗೃಹರಕ್ಷಕ ಮತ್ತು ಪೌರರಕ್ಷಣಾ ಇಲಾಖೆಯ ಗೃಹ ರಕ್ಷಕ ಸ್ವಯಂ ಸೇವಕರು ಆಯಾ ಇಲಾಖೆಗಳಿಗೆ ಮಂಜೂರಾಗಿರುವ ಖಾಲಿ ಹುದ್ದೆಗಳ ಎದುರಾಗಿ ಕರ್ತವ್ಯ ನಿರ್ವಹಿಸುವ 3025 ಗೃಹರಕ್ಷಕರಿಗೆ ಮಾತ್ರ ಸೀಮಿತಗೊಳಿಸಿ ಕರ್ತವ್ಯ ಭತ್ಯೆಯನ್ನು ದಿನವೊಂದಕ್ಕೆ ರೂ. 600ಗಳಿಗೆ ಹೆಚ್ಚಿಸಲು ಸರ್ಕಾರವು ಮಂಜೂರಾತಿ ನೀಡಿದೆ.












Click it and Unblock the Notifications