ರಾಜಸ್ಥಾನದ ಟೋಂಕ್ ಗೆ 'ಪೈಲಟ್' ಆಗ್ತಾರಾ ಸಚಿನ್!
ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಮಹತ್ವದ ಕ್ಷೇತ್ರಗಳಲ್ಲಿ ಟೋಂಕ್ ಸಹ ಒಂದು. ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲೆಟ್ ಪ್ರತಿನಿಧಿಸುತ್ತಿರುವ ಕಾರಣಕ್ಕೆ ಈ ಕ್ಷೇತ್ರ ತನ್ನದೇ ಆದ ಮಹತ್ವ ಪಡೆದುಕೊಂಡಿದೆ.
ಈ ಕ್ಷೇತ್ರದಲ್ಲಿ ಒಟ್ಟು 330606 ಜನಸಂಖ್ಯೆ ಇದ್ದು, ಶೇ.75 ರಷ್ಟು ಹಿಂದುಗಳಿದ್ದರೆ, ಶೇ.24 ರಷ್ಟು ಮುಸ್ಲಿಮರಿದ್ದಾರೆ.
ಒಟ್ಟು 51.65 ಪ್ರತಿಶತ ಪುರುಷ ಮತ್ತು ಶೇ.48.35 ರಷ್ಟು ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ.
2013 ರ ಚುನಾವಣೆಯಲ್ಲಿ ಬಿಜೆಪಿಯ ಅಜಿತ್ ಸಿಂಗ್ ಅವರು 66845 ಮತಗಳನ್ನು ಪಡೆದು, ಕಾಂಗ್ರೆಸ್ಸಿನ ಸೌದ್ ಸೈದಿ ಅವರನ್ನು ಸೋಲಿಸಿದ್ದರು. ಸೌದ್ ಸೈದಿ ಅವರು 36502 ಮತಗಳನ್ನು ಗಳಿಸಿದ್ದರು.
ಈ ವರ್ಷ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಸಚಿನ್ ಪೈಲಟ್ ವಿರುದ್ಧ ಬಿಜೆಪಿಯ ಏಕೈಕ ಮುಸ್ಲಿಂ ಅಭ್ಯರ್ಥಿ ಯುನಸ್ ಖಾನ್ ಅವರು ಸ್ಪರ್ಧಿಸಿದ್ದು, ಫಲಿತಾಂಶ ಕುತೂಹಲ ಕೆರಳಿಸಲಿದೆ. ಚುನಾವಣೆ ಡಿ.7 ರಂದು ನಡೆಯಲಿದ್ದು, ಫಲಿತಾಂಶ ಡಿ.11 ರಂದು ಹೊರಬೀಳಲಿದೆ.













Click it and Unblock the Notifications