ಈ ಬಾರಿಯೂ ಝಲ್ರಾಪಠಾಣ್ ನಲ್ಲಿ ವಸುಂಧರಾ ರಾಜೆ ಹವಾ?!
ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಮಹತ್ವದ ಕ್ಷೇತ್ರಗಳಲ್ಲಿ ಝಲ್ರಾಪಠಾಣ್ ಸಹ ಒಂದು. ಹಾಲಿ ಮುಖ್ಯಮಂತ್ರಿ ಬಿಜೆಪಿಯ ವಸುಂಧರಾ ರಾಜೆ ಅವರು ಪ್ರತಿನಿಧಿಸುತ್ತಿರುವ ಈ ಕ್ಷೇತ್ರದಲ್ಲಿ 1957 ರಿಂದ ತಲಾ 6 ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಗೆದ್ದಿದ್ದರೆ, ಎರಡು ಬಾರಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ.
ಈ ಕ್ಷೇತ್ರದಲ್ಲಿ ಒಟ್ಟು 391746 ಜನಸಂಖ್ಯೆ ಇದ್ದು, ಶೇ.89 ರಷ್ಟು ಹಿಂದುಗಳಿದ್ದರೆ, ಶೇ.10 ರಷ್ಟು ಮುಸ್ಲಿಮರಿದ್ದಾರೆ.
ಒಟ್ಟು 51.23 ಪ್ರತಿಶತ ಪುರುಷ ಮತ್ತು ಶೇ.48.77 ರಷ್ಟು ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ.
2013 ರ ಚುನಾವಣೆಯಲ್ಲಿ ಬಿಜೆಪಿಯ ವಸುಂಧರಾ ರಾಜೆ ಅವರು 114384 ಮತಗಳನ್ನು ಪಡೆದು, ಕಾಂಗ್ರೆಸ್ಸಿನ ಮೀನಾಕ್ಷಿ ಸಿ ರಾವತ್ ಅವರನ್ನು ಸೋಲಿಸಿದ್ದರು. ಮೀನಾಕ್ಷಿ ಅವರು 53488 ಮತಗಳನ್ನು ಗಳಿಸಿದ್ದರು.
ಈ ವರ್ಷ ಈ ಕ್ಷೇತ್ರದಲ್ಲಿ ವಸುಂಧರಾ ರಾಜೆ ಅವರ ವಿರುದ್ಧ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮನ್ವೇಂದ್ರ ಸಿಂಗ್ ಅವರು ಸ್ಪರ್ಧಿಸಿದ್ದು, ಫಲಿತಾಂಶ ಕುತೂಹಲ ಕೆರಳಿಸಲಿದೆ. ಚುನಾವಣೆ ಡಿ.7 ರಂದು ನಡೆಯಲಿದ್ದು, ಫಲಿತಾಂಶ ಡಿ.11 ರಂದು ಹೊರಬೀಳಲಿದೆ.













Click it and Unblock the Notifications