ರಾಜಸ್ಥಾನ: ಈ ಬಾರಿ ಹವಾಮಹಲ್ ನಲ್ಲಿ ಯಾರ ಹವಾ..?!
ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಮಹತ್ವದ ಕ್ಷೇತ್ರಗಳಲ್ಲಿ ಹವಾಮಹಲ್ ಸಹ ಒಂದು. ಬಿಜೆಪಿಯ ಭದ್ರಕೋಟೆ ಎಂದು ಕರೆಸಿಕೊಂಡಿರುವ ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳೂ 4 ಬಾರಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರ ತನ್ನದೇ ಆದ ಮಹತ್ವ ಪಡೆದುಕೊಂಡಿದೆ.
ಇಲ್ಲಿ 1957 ರಿಂದ ಇಲ್ಲಿಯವರೆಗೆ ನಡೆದ 13 ವಿಧಾನಸಭೆ ಚುನಾವಣೆಗಳಲ್ಲಿ 2 ರಲ್ಲಿ ಕಾಂಗ್ರೆಸ್, 7 ರಲ್ಲಿ ಬಿಜೆಪಿ ಮತ್ತು 4 ಬಾರಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
ಈ ಕ್ಷೇತ್ರದಲ್ಲಿ ಒಟ್ಟು 405091 ಜನಸಂಖ್ಯೆ ಇದ್ದು, ಶೇ.95 ರಷ್ಟು ಹಿಂದುಗಳಿದ್ದರೆ, ಶೇ.5 ಮುಸ್ಲಿಮರಿದ್ದಾರೆ.
ಒಟ್ಟು 53.47ಪ್ರತಿಶತ ಪುರುಷ ಮತ್ತು ಶೇ.46.53 ರಷ್ಟು ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ.
2013 ರ ಚುನಾವಣೆಯಲ್ಲಿ ಬಿಜೆಪಿಯ ಸುರೇಂದ್ರ ಪಾರೀಕ್ ಅವರು 69924 ಮತಗಳನ್ನು ಪಡೆದು, ಕಾಂಗ್ರೆಸ್ಸಿನ ಬೃಜ್ ಕಿಶೋರ್ ಶರ್ಮಾ ಅವನ್ನು ಸೋಲಿಸಿದ್ದರು. ಬೃಜ್ ಕಿಶೋರ್ ಶರ್ಮಾ ಅವರು 57209 ಮತಗಳನ್ನು ಗಳಿಸಿದ್ದರು.
ಚುನಾವಣೆ ಡಿ.7 ರಂದು ನಡೆಯಲಿದ್ದು, ಫಲಿತಾಂಶ ಡಿ.11 ರಂದು ಹೊರಬೀಳಲಿದೆ.













Click it and Unblock the Notifications