Get Updates
Get notified of breaking news, exclusive insights, and must-see stories!

ರಾಜಸ್ಥಾನದ ಬರ್ಮೇರ್ ನಲ್ಲಿ ಈ ಬಾರಿ ಗೆಲ್ಲುವವರು ಯಾರು?

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಮಹತ್ವದ ಕ್ಷೇತ್ರಗಳಲ್ಲಿ ಬರ್ಮೇರ್ ಸಹ ಒಂದು. ಕಾಂಗ್ರೆಸ್ ನ ಭದ್ರಕೋಟೆ ಎಂಬ ಕಾರಣಕ್ಕೆ ಈ ಕ್ಷೇತ್ರ ತನ್ನದೇ ಆದ ಮಹತ್ವ ಪಡೆದುಕೊಂಡಿದೆ.

ಇಲ್ಲಿ ಇದುವರೆಗೆ ನಡೆದ 13 ವಿಧಾನಸಭೆ ಚುನಾವಣೆಗಳಲ್ಲಿ 7 ರಲ್ಲಿ ಕಾಂಗ್ರೆಸ್, 1 ರಲ್ಲಿ ಬಿಜೆಪಿ ಮತ್ತು 5 ಬಾರಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಈ ಕ್ಷೇತ್ರದಲ್ಲಿ ಒಟ್ಟು 370721 ಜನಸಂಖ್ಯೆ ಇದ್ದು, ಶೇ.88 ರಷ್ಟು ಹಿಂದುಗಳಿದ್ದರೆ, ಶೇ.7 ರಷ್ಟು ಮುಸ್ಲಿಮರಿದ್ದಾರೆ.

ಒಟ್ಟು 53.13 ಪ್ರತಿಶತ ಪುರುಷ ಮತ್ತು ಶೇ.46.87 ರಷ್ಟು ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ.

2013 ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮೆವರಾಮ್ ಜೈನ್ ಅವರು 63,955 ಮತಗಳನ್ನು ಪಡೆದು, ಬಿಜೆಪಿಯ ಡಾ.ಪ್ರಿಯಾಂಕಾ ಸಿಎಚ್ ಅವರನ್ನು ಸೋಲಿಸಿದ್ದರು. ಡಾ.ಪ್ರಿಯಾಂಕಾ ಅವರು 58,042 ಮತಗಳನ್ನು ಗಳಿಸಿದ್ದರು.

ಈ ವರ್ಷ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಮತ್ತೆ ಮೆವರಾಮ್ ಜೈನ್ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಕರ್ನಲ್ ಸೊನಾರಾಮ್ ಚೌಧರಿ ಕಣಕ್ಕಿಳಿದಿದ್ದಾರೆ. ಚುನಾವಣೆ ಡಿ.7 ರಂದು ನಡೆಯಲಿದ್ದು, ಫಲಿತಾಂಶ ಡಿ.11 ರಂದು ಹೊರಬೀಳಲಿದೆ.

Rajasthan election 2018: Know Your Constituency Barmer
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+