Infographics: ಅ.9ರಂದು ಯಾವ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?

ಬೆಂಗಳೂರು, ಅಕ್ಟೋಬರ್ 09: ದೇಶದಲ್ಲಿ ದಿನೇ ದಿನೇ ಪೆಟ್ರೋಲ್, ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಸತತ ಐದನೇ ದಿನವೂ ಬೆಲೆ ಏರಿಕೆಯಾಗಿದೆ.

ಅಕ್ಟೋಬರ್‌ 9ನೆಯ ದಿನವಾದ ಇಂದು (ಶನಿವಾರ) ಕೂಡ ತೈಲ ದರ ಏರಿಕೆಯಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತೀ ಒಂದು ಲೀಟರ್ ಪೆಟ್ರೋಲ್‌ಗೆ 32 ಪೈಸೆ ಏರಿದರೆ, ಪ್ರತೀ ಒಂದು ಲೀಟರ್‌ ಡೀಸೆಲ್‌ ದರದಲ್ಲಿ 38 ಪೈಸೆ ಏರಿಕೆ ಕಂಡಿದೆ.

ಇಂದು ಕೂಡ ಏರಿಕೆಯಾಗುವ ಮೂಲಕ ಕಳೆದ ಅನೇಕ ಸಮಯದಿಂದ ಪ್ರತಿ ನಿತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಕಂಡಂತೆ ಆಗಿದೆ. ಇನ್ನು ಜನರ ಅತ್ಯವಶ್ಯಕ ವಸ್ತುವಾಗಿರುವ ಇಂಧನದ ದರ ಏರಿಕೆಯಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇನ್ನೊಂದೆಡೆ ರಾಜ್ಯ ಹಾಗೂ ಕೇಂದ್ರಗಳು ಪೆಟ್ರೋಲ್‌, ಡೀಸೆಲ್‌ ಮೇಲೆ ವಿಧಿಸಿರುವ ಸುಂಕವನ್ನು ಕಡಿತಗೊಳಿಸುವಂತೆ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಸುಂಕ ಕಡಿತಗೊಳಿಸುವುದಿಲ್ಲ ಎಂದು ಈಗಾಗಲೇ ಕೇಂದ್ರ ಸ್ಪಷ್ಟನೆ ನೀಡಿದೆ.

Petrol Price And Diesel Rate Hiked On October 09 2021 Across Karnataka

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ.

ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ

Petrol Price And Diesel Rate Hiked On October 09 2021 Across Karnataka

ಬೆಂಗಳೂರು: ಪೆಟ್ರೋಲ್: 107.46 ರೂ.,ಡೀಸೆಲ್: 98.15ರೂ. ಇದೆ.

ಮಂಗಳೂರು: ಪೆಟ್ರೋಲ್: 106.96 ರೂ., ಡೀಸೆಲ್: 97.65 ರೂ.
ಮೈಸೂರು: ಪೆಟ್ರೋಲ್: 107.39, ರೂ. ಡೀಸೆಲ್: 98.08 ರೂ. ಇದೆ.

ನವದೆಹಲಿ: ಪೆಟ್ರೋಲ್: 103.84 ರೂ. ಡೀಸೆಲ್-92.47 ರೂ.

ಕೋಲ್ಕತ್ತಾ: ಪೆಟ್ರೋಲ್ 104.52 ರೂ. ಡೀಸೆಲ್ - 95.58 ರೂ.

ಮಹಾರಾಷ್ಟ್ರ: ಪೆಟ್ರೋಲ್ - 109.83 ರೂ. ಡೀಸೆಲ್ -100.29 ರೂ.

ಚೆನ್ನೈ: ಪೆಟ್ರೋಲ್ -101.37 ರೂ., ಡೀಸೆಲ್ - 97.03ರೂ. ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+