ತಿಂಗಳಾಂತ್ಯಕ್ಕೆ ರಾಜ್ಯದಲ್ಲಿ ಎಷ್ಟಾಗಿದೆ ಪೆಟ್ರೋಲ್, ಡೀಸೆಲ್ ದರ
ಬೆಂಗಳೂರು, ಜೂನ್ 30: ದೇಶಾದ್ಯಂತ ಬುಧವಾರ (ಜೂನ್ 30) ಇಂಧನ ದರ ಸ್ಥಿರತೆ ಕಾಯ್ದುಕೊಂಡಿದೆ. ಮಂಗಳವಾರ ದಾಖಲೆ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು, ಇಂದು ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಜೂನ್ 30ರಂದು ಇಂಧನ ದರ ಪರಿಷ್ಕರಣೆ ಮಾಡಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿರುವುದಾಗಿ ತಿಳಿಸಿವೆ.
ಜೂನ್ ತಿಂಗಳಲ್ಲಿ 15 ಬಾರಿ ಇಂಧನ ಬೆಲೆ ಏರಿಕೆಯಾಗಿದ್ದು, ಒಟ್ಟು ಪೆಟ್ರೋಲ್ 7.71ರೂ ಹಾಗೂ ಡೀಸೆಲ್ 7.92 ರೂ ಏರಿಕೆ ಕಂಡಿದೆ. ಜೂನ್ 29ರಂದು ಪೆಟ್ರೋಲೆ ಬೆಲೆ ಸರಾಸರಿ 31 ರಿಂದ 35 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ ಸರಾಸರಿ 26 ರಿಂದ 30 ಪೈಸೆ ಏರಿಕೆ ಕಂಡಿತ್ತು. ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ ಪೆಟ್ರೋಲ್ 104.90 ರೂ ಪ್ರತಿ ಲೀಟರ್, ಡೀಸೆಲ್ 96.72 ರೂ ಪ್ರತಿ ಲೀಟರ್‌ನಷ್ಟಿದೆ ಎಂದು ಇಂಡಿಯನ್ ಆಯಿಲ್ ಸಂಸ್ಥೆ ಪ್ರಕಟಿಸಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 102.11ರೂಪಾಯಿಗೆ ತಲುಪಿದೆ. ಡೀಸೆಲ್ ದರ ಪ್ರತಿ ಲೀಟರ್‌ಗೆ 94.25 ರೂಪಾಯಿಗೆ ಮುಟ್ಟಿದೆ. ಬಳ್ಳಾರಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ಅತ್ಯಧಿಕ 103.84 ರೂ, ದಾವಣಗೆರೆಯಲ್ಲಿ 103.76 ರೂ, ಉತ್ತರ ಕನ್ನಡ ಜಿಲ್ಲೆಯಲ್ಲಿ 103.68 ರೂ, ತುಮಕೂರು 103.61 ರೂ, ಶಿವಮೊಗ್ಗದಲ್ಲಿ 103.59 ರೂ, ಚಿತ್ರದುರ್ಗದಲ್ಲಿ 103.54 ರೂ, ಕೊಡಗು 103.27 ರೂ, ಕೊಪ್ಪಳ 103.01 ರೂಪಾಯಿಯಷ್ಟಿದೆ.
ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಾಮರಾಜನಗರ, ಧಾರವಾಡ, ಚಿಕ್ಕಮಗಳೂರು, ಗದಗ, ಕಲಬುರಗಿ, ಮೈಸೂರು, ರಾಯಚೂರು, ರಾಮನಗರ, ಉಡುಪಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 102 ಪ್ಲಸ್ ರೂ ದಾಟಿದೆ.
ರಾಜ್ಯದ ವಿವಿಧ ನಗರ, ಪಟ್ಟಣ, ಜಿಲ್ಲಾ ಕೇಂದ್ರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ (ಜೂನ್ 30ರಂತೆ) ಸಚಿತ್ರ ಮಾಹಿತಿ ಇಲ್ಲಿದೆ.
ಚಿತ್ರ ವಿನ್ಯಾಸ: ಭರತ್ ಎಚ್. ಸಿ.

Recommended Video













Click it and Unblock the Notifications