ನ.17: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಎಲ್ಲಿ ಅಧಿಕ ಬೆಲೆ?

ಬೆಂಗಳೂರು, ನವೆಂಬರ್ 17: ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ನವೆಂಬರ್ 17ರಂದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಿಸಿಲ್ಲ. ಕಳೆದ 13 ದಿನಗಳ ಹಿಂದೆ ಪೆಟ್ರೋಲ್ ಹಾಗೂ ಡೀಸೆಲ್ ಸರಾಸರಿ 35 ಪೈಸೆ ಪ್ರತಿ ಲೀಟರ್‌ನಷ್ಟು ಏರಿಕೆಯಾಗಿತ್ತು. ಕರ್ನಾಟಕದಲ್ಲಿ ಪೆಟ್ರೋಲ್ ಪ್ರತಿ ಲೀಟರ್ 99ರು ನಿಂದ 102 ರು ಗರಿಷ್ಠ ಇದೆ. ದಾವಣಗೆರೆ ಜಿಲ್ಲೆಯಲ್ಲಿ ಪೆಟ್ರೋಲ್ ಗರಿಷ್ಠ 102.79ರು, ಡೀಸೆಲ್ ಗರಿಷ್ಠ 86.88 ರು ದಾಖಲಾಗಿದೆ.

ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 60 ಬಾರಿ ಹಾಗೂ ಡೀಸೆಲ್ 55 ಬಾರಿ ಏರಿಕೆಯಾಗಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ.

ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ ಪೆಟ್ರೋಲ್ 109.98 ರು ಪ್ರತಿ ಲೀಟರ್, ಡೀಸೆಲ್ 94.14 ರು ಪ್ರತಿ ಲೀಟರ್‌ನಷ್ಟಿದೆ ಎಂದು ಇಂಡಿಯನ್ ಆಯಿಲ್ ಸಂಸ್ಥೆ ಪ್ರಕಟಿಸಿದೆ. ಕರ್ನಾಟಕದ ಪ್ರಮುಖ ಪಟ್ಟಣಗಳಲ್ಲಿ ವಿವಿಧ ದರಗಳ ವಿವರ ಮುಂದಿದೆ...

ಪೆಟ್ರೋಲ್ ಪ್ರತಿ ಲೀಟರ್‌ಗೆ 102 ರುಗೆ ಏರಿಕೆ

ಪೆಟ್ರೋಲ್ ಪ್ರತಿ ಲೀಟರ್‌ಗೆ 102 ರುಗೆ ಏರಿಕೆ

ಬೆಂಗಳೂರಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 100.58ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 85.01 ರೂಪಾಯಿಗೆ ಮುಟ್ಟಿದೆ. ದಾವಣಗೆರೆ ಜಿಲ್ಲೆಯಲ್ಲಿ ಪೆಟ್ರೋಲ್ ಗರಿಷ್ಠ 102.79ರು, ರಾಜ್ಯದಲ್ಲೇ ಅತ್ಯಧಿಕ ಎನಿಸಿಕೊಂಡಿದೆ. ಉಳಿದಂತೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಯಲ್ಲಿ 102 ರು ಪ್ಲಸ್ ಇದೆ. ಇತರೆ ಜಿಲ್ಲೆಗಳಲ್ಲಿ 99 ರಿಂದ 101ರು ನಷ್ಟಿದೆ ಎಂದು ಗುಡ್‌ರಿಟರ್ನ್ಸ್.ಇನ್ ವರದಿ ಮಾಡಿದೆ.

ಡೀಸೆಲ್ ಬೆಲೆ ಕಡಿಮೆ ಇರುವ ಜಿಲ್ಲೆ

ಡೀಸೆಲ್ ಬೆಲೆ ಕಡಿಮೆ ಇರುವ ಜಿಲ್ಲೆ

ಬೆಂಗಳೂರಿನಲ್ಲಿ ಕಳೆದ 13 ದಿನಗಳ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಸರಾಸರಿ 30-35 ಪೈಸೆಯಷ್ಟು ಏರಿಕೆಯಾಗಿತ್ತು. ಬೆಂಗಳೂರಲ್ಲಿ 85.01ರು ಪ್ರತಿ ಲೀಟರ್ ನಷ್ಟಿದೆ. ದಾವಣಗೆರೆ ಜಿಲ್ಲೆಯಲ್ಲಿ 86.88 ರು ಪ್ರತಿ ಲೀಟರ್ ನಷ್ಟಿದ್ದು, ರಾಜ್ಯದಲ್ಲೇ ಅತ್ಯಧಿಕ ಬೆಲೆ ಹೊಂದಿದೆ. ಬಳ್ಳಾರಿ, ಚಿತ್ರದುರ್ಗ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ 86 ರು ಪ್ಲಸ್ ದರ ಇದ್ದರೆ, ಉಳಿದ ಜಿಲ್ಲೆಗಳಲ್ಲಿ ಅತ್ಯಧಿಕ 84 ರು ನಿಂದ 85 ರು ಪ್ಲಸ್ ದರ ಇದೆ.

ರಾಜಸ್ಥಾನದಲ್ಲಿ ಇಂದಿಗೂ ಬೆಲೆ ಅತ್ಯಧಿಕ

ರಾಜಸ್ಥಾನದಲ್ಲಿ ಇಂದಿಗೂ ಬೆಲೆ ಅತ್ಯಧಿಕ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನವೆಂಬರ್ 17ರಂದು ಈ ಸಮಯಕ್ಕೆ ಕಚ್ಚಾತೈಲ ಬೆಲೆ ಕೊಂಚ ಇಳಿಕೆ ಕಂಡು 79.88 ಯುಎಸ್ ಡಾಲರ್ (1 USD=74.32 ರೂ) ಪ್ರತಿ ಬ್ಯಾರೆಲ್‌ನಷ್ಟಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 112.11 ರು ನಷ್ಟಿದೆ, ಡೀಸೆಲ್ ಬೆಲೆ 95.26 ರು ಆಗಿದೆ. ಅಲ್ಲದೆ ರಾಜಸ್ಥಾನದ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಬೆಲೆ 106 ರು ಗಡಿ ದಾಟಿದೆ.

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಬೆಳಗಾವಿಯಿಂದ ಕೋಲಾರ ತನಕ ರಾಜ್ಯದ ವಿವಿಧ ನಗರ, ಪಟ್ಟಣ, ಜಿಲ್ಲಾ ಕೇಂದ್ರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ (ನವೆಂಬರ್ 17) ಮಾಹಿತಿ ಇಲ್ಲಿದೆ

Recommended Video

      ಟೀಂ ಇಂಡಿಯಾದಲ್ಲಿ ದ್ರಾವಿಡ್ ಮಾಡೋ ಚೇಂಜಸ್ ಬಗ್ಗೆ ಹೇಳಿದ ರಾಹುಲ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+