ನಕ್ಸಲ್ ಪೀಡಿತ ಕ್ಷೇತ್ರದಲ್ಲಿ ಸಿಎಂ ಬಾಮೈದ ಸಂಜಯ್ ಗೆಲ್ಲುವರೇ?
ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಕ್ಷೇತ್ರವೆನಿಸಿರುವ ನಕ್ಸಲ್ ಪೀಡಿತ ವಾರಸೋನಿ(Waraseoni) ಮಹಾರಾಷ್ಟ್ರ ಗಡಿ ಭಾಗಕ್ಕೆ ಹೊಂದಿಕೊಂಡಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತಲೆನೋವಾಗಿ ಪರಿಣಮಿಸಿರುವ ಅವರ ಬಾಮೈದ ಸಂಜಯ್ ಸಿಂಗ್ ಈಗ ಕಾಂಗ್ರೆಸ್ಸಿನಿಂದ ಟಿಕೆಟ್ ಪಡೆದು ಈ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.
ವಾರಾಸೋನಿ ವಿಧಾನಸಭಾ ಕ್ಷೇತ್ರದ ಕದನ ಕುತೂಹಲಕಾರಿಯಾಗುವ ನಿರೀಕ್ಷೆಯಿದೆ. 1952ರಿಂದ ಇಲ್ಲಿ ತನಕದ 14 ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 7 ಬಾರಿ, ಬಿಜೆಪಿ 1 ಹಾಗೂ ಇತರೆ ಪಕ್ಷಗಳು 6 ಬಾರಿ ಗೆಲುವು ಸಾಧಿಸಿವೆ.
ಶೇ90ರಷ್ಟು ಹಿಂದುಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಎಸ್ಟಿ/ಎಸ್ಸಿ ಸಮುದಾಯದವರು ಶೇ 9.94ರಷ್ಟಿದ್ದಾರೆ. ಶೇ 89ರಷ್ಟು ಗ್ರಾಮೀಣ ಪರಿಸರವನ್ನು ಈ ಕ್ಷೇತ್ರ ಹೊಂದಿದೆ.
35 ರಿಂದ 60 ವಯೋಮಿತಿ ಅವರು ಶೇ 45.61ರಷ್ಟಿದ್ದಾರೆ. 1,89,45 ಮತದಾರರು ನೀಡುವ ಫಲಿತಾಂಶ ಡಿಸೆಂಬರ್ 11ರಂದು ತಿಳಿಯಲಿದೆ. ಮಧ್ಯಪ್ರದೇಶ ಬಿಜೆಪಿ ನಾಯಕ ಡಾ. ಯೋಗೇಂದ್ರ ನಿರ್ಮಲ್ ಅವರು ಹಾಲಿ ಶಾಸಕರಾಗಿದ್ದಾರೆ. ಇವರ ವಿರುದ್ಧ ನವೆಂಬರ್ 03ರಂದು ಕಾಂಗ್ರೆಸ್ ಸೇರ್ಪಡೆಗೊಂಡ ಬಿಜೆಪಿಯ ಮಾಜಿ ನಾಯಕ ಸಂಜಯ್ ಸಿಂಗ್ ಮಸಾನಿ ಅವರು ಸ್ಪರ್ಧಿಸಿದ್ದಾರೆ.
ಕಳೆದ ಬಾರಿ ಸೋಲು ಕಂಡಿದ್ದ ಕಾಂಗ್ರೆಸ್ಸಿನ ಪ್ರದೀಪ್ ಅಮೃತ್ ಲಾಲ್ ಜೈಸ್ವಾಲ್ ಅವರು 2003ರಲ್ಲಿ ಬಿಜೆಪಿಯ ಡಾ. ನಿರ್ಮಲ್ ಅವರನ್ನು ಕೇವಲ 1000 ಮತಗಳ ಅಂತರದಿಂದ ಸೋಲಿಸಿದ್ದರು.
ಸಿಎಂ ಶಿವರಾಜ್ ಸಿಂಗ್ ಅವರ ಅನೇಕ ಯೋಜನೆಗಳು, ವ್ಯಾಪಾರ, ವಹಿವಾಟುಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಂಜಯ್ ಸಿಂಗ್ ಪಾಲುದಾರರಾಗಿದ್ದು, ಶಿವರಾಜ್ ಅವರ ವ್ಯವಹಾರದ ಒಳಹೊರಗನ್ನು ಬಲ್ಲವರಾಗಿದ್ದಾರೆ.













Click it and Unblock the Notifications