ಕ್ಷೇತ್ರ ಪರಿಚಯ : ಶಿವರಾಜ್ ಸ್ಪರ್ಧಿಸಿರುವ ಬುಧ್ನಿಯಲ್ಲೇನು ವಿಶೇಷ?
ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಕ್ಷೇತ್ರಗಳಲ್ಲಿ ಒಂದೆನಿಸಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸ್ಪರ್ಧಿಸಿರುವ ಬುಧ್ನಿ ಕ್ಷೇತ್ರದ ಪರಿಚಯ ಇಲ್ಲಿದೆ.
ಬೆಟುಲ್ ವಿಧಾನಸಭಾ ಕ್ಷೇತ್ರದ ನಂತರ ಬುಧ್ನಿ ಕ್ಷೇತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 1957ರಿಂದ ಇಲ್ಲಿ ತನಕದ 13 ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 5 ಬಾರಿ, ಬಿಜೆಪಿ 4 ಹಾಗೂ ಇತರೆ ಪಕ್ಷಗಳು 4 ಬಾರಿ ಗೆಲುವು ಸಾಧಿಸಿವೆ.
ಶೇ94ರಷ್ಟು ಹಿಂದುಗಳನ್ನು ಹೊಂದಿರುವ ಈ ಕ್ಷೇತ್ರದ ಸಾಕ್ಷರತಾ ಪ್ರಮಾಣ ಶೇ 71ರಷ್ಟಿದೆ.

35 ರಿಂದ 60 ವಯೋಮಿತಿ ಅವರು ಶೇ 41.75ರಷ್ಟಿದ್ದಾರೆ. 2,44,755 ಮತದಾರರು ನೀಡುವ ಫಲಿತಾಂಶ ಡಿಸೆಂಬರ್ 11ರಂದು ತಿಳಿಯಲಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಬಿಜೆಪಿಯ ಶಿವರಾಜ್ ಎಸ್ ಚೌಹಾಣ್ ಅವರು ಹಾಲಿ ಶಾಸಕರಾಗಿದ್ದಾರೆ. ಇವರ ವಿರುದ್ಧ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಮುಖ್ಯಸ್ಥ ಅರುಣ್ ಯಾದವ್ ಅವರು ಸ್ಪರ್ಧಿಸುತ್ತಿದ್ದಾರೆ.
2003ರಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶೇ 69.99ರಷ್ಟು ಮತಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿದ್ದರು. ಮಹೇಂದ್ರ ಸಿಂಗ್ ಚೌಹಾಣ್ ಅವರನ್ನು 84,805 ಮತಗಳ ಅಂತರದಿಂದ ಶಿವರಾಜ್ ಸಿಂಗ್ ಸೋಲಿಸಿದ್ದರು. 15 ವರ್ಷಗಳಿಂದ ಬಿಜೆಪಿ ಈ ರಾಜ್ಯವನ್ನು ಆಳುತ್ತಿದೆ. ಡಿಸೆಂಬರ್ 11ರಂದು ಈ ಕ್ಷೇತ್ರವನ್ನು ಯಾರು ಗೆಲ್ಲುತ್ತಾರೆ ಎಂಬುದು ತಿಳಿದು ಬರಲಿದೆ.













Click it and Unblock the Notifications