ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ, ಅಣೆಕಟ್ಟಿನ ನೀರಿನ ಪ್ರಮಾಣ?
ಕರ್ನಾಟಕದ ಮಲೆನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರೆಯಲಿದೆ. ನವೆಂಬರ್ 07ರ ವರೆಗೆ ಬಹುತೇಕ ಆರು ಜಿಲ್ಲೆಗಳಲ್ಲಿ ನಿರಂತರ ಮಳೆ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ಹಿಂಗಾರು ಮಳೆ ಆರಂಭವಾಗಲಿದ್ದು, ನವೆಂಬರ್ 4ರಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿವೃತ್ತ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಅತ್ಯಧಿಕ ಮಳೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನೆರಿಯ ಎಂಬಲ್ಲಿ 84.5 ಮಿ.ಮೀ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
ಈ ನಡುವೆ ಕರ್ನಾಟಕದಲ್ಲಿ ಇಂದಿನ (ನ.2) ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಮಳೆ ಮುನ್ಸೂಚನೆ ಬಗ್ಗೆ ಮುಂದೆ ವಿವರವಾಗಿ ತಿಳಿಯಿರಿ. (ಅಂಕಿ ಅಂಶ ಕೃಪೆ: KSNMDC); ವಿನ್ಯಾಸ: ಭರತ್ ಎಚ್. ಸಿ.
ರಾಜ್ಯದೆಲ್ಲೆಡೆ ಭರ್ಜರಿ ಮಳೆ, ಜಲಾಶಯಗಳ ನೀರಿನ ಪ್ರಮಾಣ
ಕರ್ನಾಟಕದ ಹವಾಮಾನ ವರದಿ, ಅಣೆಕಟ್ಟುಗಳ ವಿವರ
ಮಳೆ ಮುನ್ಸೂಚನೆ
ಮಳೆ ಮುನ್ಸೂಚನೆ: ರಾಜ್ಯದ ಮಲೆನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆ. ಕರಾವಳಿ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಬಿಬಿಎಂಪಿ ಮಳೆ ಮುನ್ಸೂಚನೆ: ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ, ಸಾಧಾರಣ ಮಳೆ ಸಾಧ್ಯತೆಯಿದೆ.

ಹೇಮಾವತಿ, ಲಿಂಗನಮಕ್ಕಿ, ಹಾರಂಗಿ
ಹೇಮಾವತಿ, ಲಿಂಗನಮಕ್ಕಿ, ಹಾರಂಗಿ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ

ಕೃಷ್ಣರಾಜಸಾಗರ, ಭದ್ರಾ, ಕಬಿನಿ
ಕೃಷ್ಣರಾಜಸಾಗರ, ಭದ್ರಾ, ಕಬಿನಿ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ.

ತುಂಗಭದ್ರಾ, ಆಲಮಟ್ಟಿ ಅಣೆಕಟ್ಟಿನ ಪೂರ್ಣ ಮಟ್ಟ
ಬಸವಸಾಗರ(ನಾರಾಯಣಪುರ), ತುಂಗಭದ್ರಾ, ಆಲಮಟ್ಟಿ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ.

ಘಟಪ್ರಭಾ, ಮಲಪ್ರಭಾ ಅಣೆಕಟ್ಟಿನ ಪೂರ್ಣ ಮಟ್ಟ
ಸೂಪಾ, ಘಟಪ್ರಭಾ, ಮಲಪ್ರಭಾ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ.












Click it and Unblock the Notifications