ಆ.24ರಂದು ಕರ್ನಾಟಕದ ಅಣೆಕಟ್ಟುಗಳಲ್ಲಿನ ನೀರಿನ ಮಟ್ಟ

ಮುಂಗಾರು ಮಳೆ ಅಬ್ಬರಕ್ಕೆ ತತ್ತರಿಸಿದ್ದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಇನ್ನೆರಡು ದಿನಗಳ ಮಳೆ ಸುರಿಯಲಿದೆ. ರಾಜ್ಯದ ಬಹುತೇಕ ಎಲ್ಲೆಡೆ ಮೋಡ ಕವಿದ ವಾತಾವರಣ, ಗಾಳಿ ಮುಂದುವರೆದಿದೆ ಜೊತೆಗೆ ದಕ್ಷಿಣ ಒಳನಾಡು ಭಾಗದಲ್ಲಿ ಅಲ್ಲಲ್ಲಿ ಭಾಗಶಃ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಪ್ರಮುಖ ಜಲಾಶಯಗಳ ಜಲಾನಯನ ಭಾಗಗಳಲ್ಲಿ ಅಧಿಕ ಪ್ರಮಾಣದ ಮಳೆಯಾಗುತ್ತಿಲ್ಲ. ಇದರಿಂದ ಜಲಾಶಯಗಳ ಒಳ ಹರಿವಿನ ಪ್ರಮಾಣ ಕಡಿಮೆ ಇದೆ. ಜುಲೈನಲ್ಲಿ ಭಾರೀ ಮಳೆಯಿಂದಾಗಿ ಗಣನೀಯ ಪ್ರಮಾಣದಲ್ಲಿ ಜಲಾಶಯಗಳಿಗೆ ನೀರು ಹರಿದು ಬಂದಿತ್ತು. ಇದರಿಂದ ಬಹುತೇಕ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿದ್ದವು.

ಕಳೆದ 24 ಗಂಟೆಗಳಲ್ಲಿ ತುಮಕೂರು ಜಿಲ್ಲೆಯ ತಿಪಟೂರಿನ ಕರಡಿ ಎಂಬಲ್ಲಿ ಅತ್ಯಧಿಕ 138 ಮಿ.ಮೀ ಮಳೆ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿವೃತ್ತ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ. ನಿನ್ನೆ ತುಮಕೂರಿನ ತುರುವೇಕೆರೆಯ ತೊರವಿನಹಳ್ಳಿಯಲ್ಲಿ 155 ಮಿ.ಮೀ ಮಳೆ ದಾಖಲಾಗಿತ್ತು.

ಶರಾವತಿಗೆ ಅಡ್ಡಲಾಗಿ ಕಟ್ಟಿರುವ ಲಿಂಗನಮಕ್ಕಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಯಾವುದೇ ಸಂದರ್ಭದಲ್ಲಿ ನೀರನ್ನು ಹೊರಬಿಡುವ ಸಾಧ್ಯತೆ ಇದೆ. ಈ ನಡುವೆ ಕರ್ನಾಟಕದಲ್ಲಿ ಇಂದಿನ (ಆಗಸ್ಟ್ 24) ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಮಳೆ ಮುನ್ಸೂಚನೆ ಬಗ್ಗೆ ಮುಂದೆ ವಿವರವಾಗಿ ತಿಳಿಯಿರಿ. (ಅಂಕಿ ಅಂಶ ಕೃಪೆ: KSNMDC); ವಿನ್ಯಾಸ: ಭರತ್ ಎಚ್. ಸಿ.

ಕರ್ನಾಟಕದ ಹವಾಮಾನ ವರದಿ, ಅಣೆಕಟ್ಟುಗಳ ವಿವರ

ಕರ್ನಾಟಕದ ಹವಾಮಾನ ವರದಿ, ಅಣೆಕಟ್ಟುಗಳ ವಿವರ

ಮಳೆ ಮುನ್ಸೂಚನೆ
ಮಳೆ ಮುನ್ಸೂಚನೆ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಇನ್ನೆರಡು ದಿನ ಚದುರಿದಂತೆ ಕೆಲವೆಡೆ ಸಾಧಾರಣ ಮಳೆಯಾಗಲಿದೆ.ಆ.25 ಮತ್ತು 26ರಂದು ದಕ್ಷಿಣ ಒಳನಾಡಿನಲ್ಲಿ ಮಳೆ ಹೆಚ್ಚಾಗುವ ಮುನ್ಸೂಚನೆಗಳಿವೆ. ರಾಜ್ಯದ 9 ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಬಹುತೇಕ 28-29 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದ್ದು, ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಹೇಮಾವತಿ, ಲಿಂಗನಮಕ್ಕಿ, ಹಾರಂಗಿ

ಹೇಮಾವತಿ, ಲಿಂಗನಮಕ್ಕಿ, ಹಾರಂಗಿ

ಹೇಮಾವತಿ, ಲಿಂಗನಮಕ್ಕಿ, ಹಾರಂಗಿ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ..

ಲಿಂಗನಮಕ್ಕಿ ಜಲಾಶಯದ ಮಂಗಳವಾರದ ನೀರಿನ ಮಟ್ಟ 552.47ಮೀಟರ್ ಆಗಿದೆ. ಡ್ಯಾಂ ಗರಿಷ್ಠ ಮಟ್ಟ 554.44 ಮೀಟರ್(ಸಮುದ್ರ ಮಟ್ಟದಿಂದ). ಜಲಾಶಯಕ್ಕೆ ಒಳಹರಿವು 5,060 ಕ್ಯೂಸೆಕ್. ಹೊರ ಹರಿವು 4,867 ಕ್ಯೂಸೆಕ್.

ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್ ಆಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ 871.00 ಮೀಟರ್. ಡ್ಯಾಂಗೆ 2160 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಹೊರ ಹರಿವು 1850 ಕ್ಯೂಸೆಕ್ ದಾಖಲಾಗಿದೆ.

ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ 889.67 ಮೀಟರ್ ಆಗಿದೆ. ಜಲಾಶಯದ ಪೂರ್ಣ ಮಟ್ಟ 890.58 ಮೀಟರ್ ಆಗಿದೆ. ಡ್ಯಾಂಗೆ ಒಳಹರಿವು 2590 ಕ್ಯೂಸೆಕ್, ಮಂಗಳವಾರದ ಹೊರ ಹರಿವು 4895 ಕ್ಯುಸೆಕ್.

ಕೃಷ್ಣರಾಜಸಾಗರ, ಭದ್ರಾ, ಕಬಿನಿ

ಕೃಷ್ಣರಾಜಸಾಗರ, ಭದ್ರಾ, ಕಬಿನಿ

ಕೃಷ್ಣರಾಜಸಾಗರ, ಭದ್ರಾ, ಕಬಿನಿ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ.

ಕಬಿನಿ ಜಲಾಶಯದ ಮಂಗಳವಾರದ ನೀರಿನ ಮಟ್ಟ 695.88 ಮೀಟರ್. ಜಲಾಶಯದ ಪೂರ್ಣ ಮಟ್ಟ 696.13 ಮೀಟರ್ ಆಗಿದೆ. 2870 ಕ್ಯುಸೆಕ್ ಒಳಹರಿವು ಇದ್ದು, 2750 ಹೊರಹರಿವು ಕ್ಯುಸೆಕ್ ದಾಖಲಾಗಿದೆ.

ಮಂಡ್ಯದ ಕೆಆರ್‌ಎಸ್ ಜಲಾಶಯದ ಮಂಗಳವಾರದ ನೀರಿನ ಮಟ್ಟ 36.63 ಮೀಟರ್. ಡ್ಯಾಂ ಪೂರ್ಣ ಮಟ್ಟ 38.04 ಮೀಟರ್. ಡ್ಯಾಂಗೆ ಒಳಹರಿವು 5723 ಕ್ಯುಸೆಕ್ ಆಗಿದ್ದು, ಹೊರ ಹರಿವು 5545 ಕ್ಯುಸೆಕ್ ದಾಖಲಾಗಿದೆ.

ಭದ್ರಾ ಜಲಾಶಯದ ಮಂಗಳವಾರದ ನೀರಿನ ಮಟ್ಟ 657.44 ಮೀಟರ್. ಜಲಾಶಯದ ಪೂರ್ಣಮಟ್ಟ 657.73 ಮೀಟರ್. ಡ್ಯಾಂ ಒಳಹರಿವು 4740 ಕ್ಯುಸೆಕ್ ಹಾಗೂ 3837 ಕ್ಯುಸೆಕ್ ಹೊರಹರಿವು ಇದೆ.

ತುಂಗಭದ್ರಾ, ಆಲಮಟ್ಟಿ ಅಣೆಕಟ್ಟಿನ ಪೂರ್ಣ ಮಟ್ಟ

ತುಂಗಭದ್ರಾ, ಆಲಮಟ್ಟಿ ಅಣೆಕಟ್ಟಿನ ಪೂರ್ಣ ಮಟ್ಟ

ಬಸವಸಾಗರ(ನಾರಾಯಣಪುರ), ತುಂಗಭದ್ರಾ, ಆಲಮಟ್ಟಿ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ.

ತುಂಗಭದ್ರಾ ಜಲಾಶಯದ ಶನಿವಾರದ ನೀರಿನ ಮಟ್ಟ 497.71 ಮೀಟರ್ ಇದೆ. ಡ್ಯಾಂನ ಪೂರ್ಣಮಟ್ಟ 497.71 ಮೀಟರ್. ಜಲಾಶಯಕ್ಕೆ 14,507 ಕ್ಯುಸೆಕ್ ಒಳಹರಿವು ಇದ್ದು, ಹೊರ ಹರಿವು 14,507 ಕ್ಯುಸೆಕ್ ಆಗಿದೆ.

ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಶನಿವಾರದ ನೀರಿನ ಮಟ್ಟ 519.57 ಮೀಟರ್. ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಜಲಾಶಯಕ್ಕೆ ಒಳಹರಿವು ಕಡಿಮೆಯಾಗುತ್ತಿದೆ. 20,846ಕ್ಯುಸೆಕ್ ನೀರು ಬರುತ್ತಿದ್ದು, ಹೊರ ಹರಿವು 20,846 ಕ್ಯುಸೆಕ್.

ನಾರಾಯಣಪುರ ಜಲಾಶಯದ ಮಂಗಳವಾರದ ನೀರಿನ ಮಟ್ಟ 491.98 ಮೀಟರ್. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್ ಆಗಿದೆ. ಜಲಾಶಯಕ್ಕೆ ಒಳಹರಿವು 16,265 ಕ್ಯುಸೆಕ್, ಹೊರ ಹರಿವು 130, 70ಕ್ಯುಸೆಕ್.

ಘಟಪ್ರಭಾ, ಮಲಪ್ರಭಾ ಅಣೆಕಟ್ಟಿನ ಪೂರ್ಣ ಮಟ್ಟ

ಘಟಪ್ರಭಾ, ಮಲಪ್ರಭಾ ಅಣೆಕಟ್ಟಿನ ಪೂರ್ಣ ಮಟ್ಟ

ಸೂಪಾ, ಘಟಪ್ರಭಾ, ಮಲಪ್ರಭಾ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ.

ಸೂಪಾ ಜಲಾಶಯದ ಮಂಗಳವಾರದ ನೀರಿನ ಮಟ್ಟ 554.74 ಮೀಟರ್. ಪೂರ್ಣ ಮಟ್ಟ 564.00 ಮೀಟರ್ ಆಗಿದೆ. ಜಲಾಶಯಕ್ಕೆ ಒಳಹರಿವು 3171 ಕ್ಯುಸೆಕ್ ಇದ್ದು, ಹೊರ ಹರಿವು 1018 ಕ್ಯುಸೆಕ್.

ಘಟಪ್ರಭಾ ಜಲಾಯಶದ ಮಂಗಳವಾರದ ನೀರಿನ ಮಟ್ಟ 662.91 ಮೀಟರ್. ಡ್ಯಾಂ ಪೂರ್ಣ ಮಟ್ಟ 662.91 ಮೀಟರ್. ಜಲಾಶಯದ ಒಳಹರಿವು 1932ಕ್ಯುಸೆಕ್. ಹೊರ ಹರಿವು 1932 ಕ್ಯುಸೆಕ್.

ಮಲಪ್ರಭಾ ಜಲಾಶಯದ ಇಂದಿನ ನೀರಿನ ಮಟ್ಟ 633.34 ಮೀಟರ್. ಜಲಾಶಯದ ಪೂರ್ಣ ಮಟ್ಟ 633.80 ಮೀಟರ್. ಜಲಾಶಯಕ್ಕೆ 494 ಕ್ಯುಸೆಕ್ ಒಳಹರಿವು, 494ಕ್ಯುಸೆಕ್ ಹೊರಹರಿವು ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+