ಕರ್ನಾಟಕದಲ್ಲಿ ಮತ್ತೆ ಮಳೆ; ಜಲಾಶಯಗಳ ನೀರಿನ ಮಟ್ಟ

ಬೆಂಗಳೂರು, ಸೆಪ್ಟೆಂಬರ್ 03; ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾಗ ಕುಸಿತದ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಗುರುವಾರ ರಾತ್ರಿ ಸಾಧಾರಣ ಮಳೆಸುರಿದಿದೆ. ಶನಿವಾರದ ತನಕ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಶುಕ್ರವಾರವೂ ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದೆ.

ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ರಾಯಚೂರು, ಯಾದಗಿರಿ, ವಿಜಯಪುರ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿಯೂ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 6 ರಿಂದ 8ರ ತನಕ ಕರ್ನಾಟಕದಲ್ಲಿ ಮತ್ತೆ ಮಳೆಯಾಗುವ ನಿರೀಕ್ಷೆ ಇದೆ. ರಾಜ್ಯದ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ.

 ಲಿಂಗನಮಕ್ಕಿ, ಹಾರಂಗಿ, ಹೇಮಾವತಿ

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ

ಲಿಂಗನಮಕ್ಕಿ ಜಲಾಶಯದ ಪೂರ್ಣ ಮಟ್ಟ 554.44 ಮೀಟರ್ ಆಗಿದೆ. ಶುಕ್ರವಾರ ಜಲಾಶಯದಲ್ಲಿ 552.51 ಮೀಟರ್ ನೀರಿನ ಸಂಗ್ರಹವಿದೆ. 7745 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, 7751 ಕ್ಯುಸೆಕ್ ಹೊರ ಹರಿವು ಇದೆ.

ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಶುಕ್ರವಾರದ ನೀರಿನ ಮಟ್ಟ 871.10 ಮೀಟರ್ ಆಗಿದೆ. ಜಲಾಶಯಕ್ಕೆ 2604 ಕ್ಯುಸೆಕ್ ಒಳಹರಿವು, ಡ್ಯಾಂನಿಂದ 2725 ಕ್ಯುಸೆಕ್ ಹೊರ ಹರಿವು ದಾಖಲಾಗಿದೆ.

ಹಾಸನದಲ್ಲಿರುವ ಹೇಮಾವತಿ ಜಲಾಶಯದ ಪೂರ್ಣ ಮಟ್ಟ 890.58 ಮೀಟರ್. ಶುಕ್ರವಾರ ಜಲಾಶಯದಲ್ಲಿ 888.79 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂಗೆ 1829 ಕ್ಯುಸೆಕ್ ಒಳಹರಿವು ಮತ್ತು 5272 ಕ್ಯುಸೆಕ್ ಹೊರ ಹರಿವು ಇದೆ.

 ಕೆಆರ್‌ಎಸ್, ಕಬಿನಿ, ಭದ್ರಾ ಜಲಾಶಯ

ಕೆಆರ್‌ಎಸ್, ಕಬಿನಿ, ಭದ್ರಾ ಜಲಾಶಯ

ಕಬಿನಿ ಜಲಾಶಯದ ಶುಕ್ರವಾರದ ನೀರಿನ ಮಟ್ಟ 694.84 ಮೀಟರ್. ಡ್ಯಾಂ ಪೂರ್ಣ ಮಟ್ಟ 696.13 ಮೀಟರ್ ಆಗಿದೆ. ಜಲಾಶಯಕ್ಕೆ 4111 ಕ್ಯುಸೆಕ್ ಒಳಹರಿವು ಇದೆ. 6750 ಕ್ಯುಸೆಕ್ ನೀರನ್ನು ಡ್ಯಾಂನಿಂದ ಹೊರಬಿಡಲಾಗುತ್ತದೆ.

ಕೆಆರ್‌ಎಸ್ ಜಲಾಶಯದ ಶುಕ್ರವಾರದ ನೀರಿನ ಮಟ್ಟ 35.51 ಮೀಟರ್. ಜಲಾಶಯದ ಪೂರ್ಣ ಮಟ್ಟ 38.04 ಮೀಟರ್. ಜಲಾಶಯಕ್ಕೆ ಒಳಹರಿವು 5721 ಕ್ಯುಸೆಕ್ ಮತ್ತು ಹೊರ ಹರಿವು 9609 ಕ್ಯುಸೆಕ್ ಇದೆ.

ಭದ್ರಾ ಜಲಾಶಯದ ಶುಕ್ರವಾರದ ನೀರಿನ ಮಟ್ಟ 657.55 ಮೀಟರ್ ಆಗಿದೆ. ಡ್ಯಾಂ ಪೂರ್ಣಮಟ್ಟ 657.73 ಮೀಟರ್. ಜಲಾಶಯದ ಒಳಹರಿವು 3751 ಕ್ಯುಸೆಕ್ ಹಾಗೂ ಹೊರಹರಿವು 3751 ಕ್ಯುಸೆಕ್ ಆಗಿದೆ.

 ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ

ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ

ತುಂಗಭದ್ರಾ ಜಲಾಶಯದ ಶುಕ್ರವಾರದ ನೀರಿನ ಮಟ್ಟ 497.69 ಮೀಟರ್. ಡ್ಯಾಂನ ಪೂರ್ಣಮಟ್ಟ 497.71 ಮೀಟರ್ ಆಗಿದೆ. ಜಲಾಶಯಕ್ಕೆ 15195 ಕ್ಯುಸೆಕ್ ಒಳಹರಿವು ಮತ್ತು 10742 ಕ್ಯುಸೆಕ್ ಹೊರಹರಿವು ಇದೆ.

ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್ ಆಗಿದೆ. ಶುಕ್ರವಾರದ ನೀರಿನ ಮಟ್ಟ 519.57 ಮೀಟರ್ ಆಗಿದೆ. ಡ್ಯಾಂಗೆ 4119 ಕ್ಯುಸೆಕ್ ಒಳಹರಿವು ಮತ್ತು ಹೊರ ಹರಿವು 4119 ಕ್ಯುಸೆಕ್ ಆಗಿದೆ.

ನಾರಾಯಣಪುರ ಜಲಾಶಯದ ಶುಕ್ರವಾರದ ನೀರಿನ ಮಟ್ಟ 491.93 ಮೀಟರ್ ಆಗಿದೆ. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್. ಪ್ರಸ್ತುತ ಜಲಾಶಯಕ್ಕೆ 1949 ಕ್ಯುಸೆಕ್ ಒಳಹರಿವು ಮತ್ತು 5684 ಕ್ಯುಸೆಕ್ ಹೊರ ಹರಿವು ಇದೆ.

 ಸೂಪ, ಘಟಪ್ರಭಾ, ಮಲಪ್ರಭಾ

ಸೂಪ, ಘಟಪ್ರಭಾ, ಮಲಪ್ರಭಾ

ಸೂಪಾ ಜಲಾಶಯದ ಶುಕ್ರವಾರದ ನೀರಿನ ಮಟ್ಟ 554.77 ಮೀಟರ್ ಆಗಿದೆ. ಡ್ಯಾಂ ಪೂರ್ಣ ಮಟ್ಟ 564.00 ಮೀಟರ್. 3306 ಕ್ಯುಸೆಕ್ ಒಳ ಹರಿವು ಇದೆ, ಹೊರ ಹರಿವು 4598 ಕ್ಯುಸೆಕ್ ಆಗಿದೆ.

ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 662.91 ಮೀಟರ್. ಶುಕ್ರವಾರದ ನೀರಿನ ಮಟ್ಟ 662.91 ಮೀಟರ್. ಜಲಾಶಯಕ್ಕೆ ಒಳಹರಿವು 382 ಕ್ಯುಸೆಕ್ ಇದ್ದು, ಡ್ಯಾಂ ಹೊರ ಹರಿವು 382 ಕ್ಯುಸೆಕ್ ಆಗಿದೆ.

ಮಲಪ್ರಭಾ ಜಲಾಶಯದ ಶುಕ್ರವಾರದ ನೀರಿನ ಮಟ್ಟ 633.56 ಮೀಟರ್. ಪೂರ್ಣ ಮಟ್ಟ 633.80 ಮೀಟರ್. ಜಲಾಶಯಕ್ಕೆ ಒಳಹರಿವು 1294 ಕ್ಯುಸೆಕ್, ಹೊರ ಹರಿವು 1294 ಕ್ಯುಸೆಕ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+