ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರ ಕರ್ನಾಟಕದ ಡ್ಯಾಂಗಳ ನೀರಿನ ಮಟ್ಟ

|
Google Oneindia Kannada News

ಬೆಂಗಳೂರು, ನವೆಂಬರ್ 25; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೆ ನವೆಂಬರ್ 26ರಿಂದ ಮತ್ತೊಂದು ವಾಯುಭಾರ ಕುಸಿತದ ಪರಿಣಾಮದಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.

ಬುಧವಾರ ರಾತ್ರಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಳೆದ ವಾರ ಸುರಿದ ಮಳೆ ಅವಾಂತರವನ್ನು ಸೃಷ್ಟಿ ಮಾಡಿದೆ.

ಅನ್ನದಾತನ ಅನ್ನ ಕಿತ್ತುಕೊಂಡ ಮಳೆ; ಚಿತ್ರದುರ್ಗ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿಅನ್ನದಾತನ ಅನ್ನ ಕಿತ್ತುಕೊಂಡ ಮಳೆ; ಚಿತ್ರದುರ್ಗ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿ

ಬಹುತೇಕ ಕೆರೆ, ಕಟ್ಟೆ, ಚೆಕ್ ಡ್ಯಾಂ, ಹಳ್ಳಗಳು ತುಂಬಿ ಹರಿಯುತ್ತಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಬೆಂಗಳೂರು ನಗರದಲ್ಲಿ ತರಕಾರಿಗಳ ದರ ಗಗನಕ್ಕೇ ಏರಿಕೆ. ಇನ್ನೂ ಒಂದು ವಾರ ಬೆಲೆ ಕಡಿಮೆ ಆಗುವುದಿಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ನವೆಂಬರ್ 29ರವರೆಗೂ ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆನವೆಂಬರ್ 29ರವರೆಗೂ ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ

ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದಾಗಿಯೇ ಕರ್ನಾಟಕದ ವಿವಿಧ ಜಲಾಶಯಗಳು ಭರ್ತಿಯಾಗಿವೆ. ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯ ಅಕ್ಟೋಬರ್ ತಿಂಗಳಿನಲ್ಲಿ ಭರ್ತಿಯಾಗಿದೆ. ಈಗ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾದರೂ ನೀರನ್ನು ನದಿಗೆ ಬಿಡಲಾಗುತ್ತಿದೆ. ರಾಜ್ಯದ ಜಲಾಯಶಗಳ ನೀರಿನ ಮಟ್ಟದ ವಿವರ ಇಲ್ಲಿದೆ...

ಅಕಾಲಿಕ ಮಳೆ; ಬೆಳೆ ಹಾನಿ ಪರಿಹಾರ ನೇರ ರೈತರ ಖಾತೆಗೆ ಅಕಾಲಿಕ ಮಳೆ; ಬೆಳೆ ಹಾನಿ ಪರಿಹಾರ ನೇರ ರೈತರ ಖಾತೆಗೆ

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ

ಲಿಂಗನಮಕ್ಕಿ ಜಲಾಶಯದ ಗುರುವಾರ ನೀರಿನ ಮಟ್ಟ 552.59 ಮೀಟರ್. ಡ್ಯಾಂನ ಪೂರ್ಣ ಮಟ್ಟ 554.44 ಮೀಟರ್. ಜಲಾಶಯಕ್ಕೆ ಒಳಹರಿವು 311 ಕ್ಯುಸೆಕ್. ಡ್ಯಾಂನಿಂದ ಹೊರ ಹರಿವು 4810 ಕ್ಯುಸೆಕ್ ದಾಖಲಾಗಿದೆ.

ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಗುರುವಾರ ಜಲಾಶಯದಲ್ಲಿ 870.93 ಮೀಟರ್ ನೀರಿನ ಸಂಗ್ರಹವಿದೆ. 680 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹೊರ ಹರಿವು 1000 ಕ್ಯುಸೆಕ್ ಆಗಿದೆ.

ಹೇಮಾವತಿ ಜಲಾಶಯದ ಗುರುವಾರದ ನೀರಿನ ಮಟ್ಟ 887.85 ಮೀಟರ್ ಆಗಿದೆ. ಜಲಾಶಯದ ಪೂರ್ಣ ಮಟ್ಟ 890.58 ಮೀಟರ್. 4670 ಕ್ಯುಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ. ಹೊರ ಹರಿವು 450 ಕ್ಯುಸೆಕ್.

ಕೆಆರ್‌ಎಸ್, ಕಬಿನಿ, ಭದ್ರಾ ಡ್ಯಾಂ

ಕೆಆರ್‌ಎಸ್, ಕಬಿನಿ, ಭದ್ರಾ ಡ್ಯಾಂ

ಕಬಿನಿ ಜಲಾಶಯದಲ್ಲಿ ಗುರುವಾರ 696.10 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 696.13 ಮೀಟರ್. ಜಲಾಶಯಕ್ಕೆ 2277ಕ್ಯುಸೆಕ್ ಒಳಹರಿವು ಇದೆ, ಹೊರ ಹರಿವು 1400 ಕ್ಯುಸೆಕ್ ಆಗಿದೆ.

ಮಂಡ್ಯದಲ್ಲಿರುವ ಕೆಆರ್‌ಎಸ್ ಈಗಾಗಲೇ ಭರ್ತಿಯಾಗಿದೆ. ಗುರುವಾರ ಡ್ಯಾಂನಲ್ಲಿ 38.04 ಮೀಟರ್ ನೀರಿನ ಸಂಗ್ರಹವಿದೆ. ಜಲಾಶಯದ ಪೂರ್ಣ ಮಟ್ಟ 38.04 ಮೀಟರ್ ಆಗಿದೆ. ಒಳಹರಿವು 6559 ಕ್ಯುಸೆಕ್ ಮತ್ತು ಹೊರ ಹರಿವು 6350 ಕ್ಯುಸೆಕ್.

ಭದ್ರಾ ಜಲಾಶಯದಲ್ಲಿ ಗುರುವಾರ 657.70 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣಮಟ್ಟ 657.73 ಮೀಟರ್. ಜಲಾಶಯಕ್ಕೆ ಒಳಹರಿವು 3903 ಕ್ಯುಸೆಕ್ ಆಗಿದೆ. ಹೊರ ಹರಿವು 2700 ಕ್ಯುಸೆಕ್ ಆಗಿದೆ.

ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ

ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ

ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಗುರುವಾರ ಡ್ಯಾಂನಲ್ಲಿ 497.71 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂನ ಪೂರ್ಣಮಟ್ಟ 497.71 ಮೀಟರ್. ಜಲಾಶಯಕ್ಕೆ 23743 ಕ್ಯುಸೆಕ್ ನೀರು ಹರಿದು ಬರುತ್ತಿದೆ.

ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಗುರುವಾರ ಜಲಾಶಯದ ನೀರಿನ ಮಟ್ಟ 518.41 ಮೀಟರ್ ಆಗಿದೆ. ಒಳ ಹರಿವು 6800 ಕ್ಯುಸೆಕ್, ಹೊರ ಹರಿವು 1580 ಕ್ಯುಸೆಕ್ ಆಗಿದೆ.

ನಾರಾಯಣಪುರ ಜಲಾಶಯದ ಗುರುವಾರದ ನೀರಿನ ಮಟ್ಟ 491.99 ಮೀಟರ್. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್. ಒಳಹರಿವು 741 ಕ್ಯುಸೆಕ್ ಆಗಿದೆ.

ಸೂಪ, ಘಟಪ್ರಭಾ, ಮಲಪ್ರಭಾ

ಸೂಪ, ಘಟಪ್ರಭಾ, ಮಲಪ್ರಭಾ

ಸೂಪಾ ಜಲಾಶಯದಲ್ಲಿ ಗುರುವಾರ 555.08 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 564.00 ಮೀಟರ್ ಆಗಿದೆ. ಜಲಾಶಯದ ಒಳ ಹರಿವು 414 ಕ್ಯುಸೆಕ್ ಮತ್ತು ಹೊರ ಹರಿವು 1713 ಕ್ಯುಸೆಕ್ ಆಗಿದೆ.

ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 662.91 ಮೀಟರ್. ಗುರುವಾರ ಜಲಾಶಯದಲ್ಲಿ 660.05 ಮೀಟರ್ ನೀರಿದೆ. ಜಲಾಶಯದ ಹೊರ ಹರಿವು 183 ಕ್ಯುಸೆಕ್ ಆಗಿದೆ.

ಮಲಪ್ರಭಾ ಜಲಾಶಯದಲ್ಲಿ ಗುರುವಾರ 633.04 ಮೀಟರ್ ನೀರಿನ ಸಂಗ್ರಹವಿದೆ. ಪೂರ್ಣ ಮಟ್ಟ 633.80 ಮೀಟರ್. ಒಳಹರಿವು 269 ಕ್ಯುಸೆಕ್.

English summary
Karnataka's weather report and major Dams Water Level Today November 2: Check complete details on dam water level of KRS Dam, Bhadra, TB Dam, Linganamakki, Harangi, Hemavathi, Alamatti, Narayanapura, Supa, Ghataprabha and Malaprabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X