ನವೆಂಬರ್ 20: ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಬೆಂಗಳೂರು, ನವೆಂಬರ್ 20: ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳಲ್ಲೂ ಜಿಟಿಜಿಟಿ ಮಳೆ ಮುಂದುವರಿದಿದೆ. ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಮಳೆ ಇನ್ನೂ ಮೂರು ದಿನಗಳ ಕಾಲ ಮಳೆಯ ನರ್ತನ ಮುಂದುವರೆಯುವ ಸಾಧ್ಯತೆಯಿದೆ. ರಾಜ್ಯದಲ್ಲಿ ಮಳೆಯ ನಡುವೆಯೇ ವಿವಿಧ ಜಿಲ್ಲೆಗಳಲ್ಲಿನ ತಾಪಮಾನ ಕುಸಿದಿದೆ. ಶನಿವಾರ ಬೆಳಗ್ಗೆ ಹೊತ್ತಿಗೆ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು, ಶೀತ ವಾತಾವಣದಿಂದ ಚಳಿಯ ಪ್ರಮಾಣ ಹೆಚ್ಚಾಗಿದೆ.
ಕರ್ನಾಟಕದ ವಿವಿಧ ಜಲಾಶಯಗಳು ಕಳೆದ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಭರ್ತಿಯಾಗಿವೆ. ಚಳಿಗಾಲದಲ್ಲಿಯೂ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಜಲಾಶಯಗಳ ಬಹುಪಾಲು ಭರ್ತಿಯಾಗಿವೆ. ನೀರಿನ ಒಳಹರಿವು ಹೆಚ್ಚಾಗಿದೆ. ಕಾವೇರಿಕೊಳ್ಳದ ಪ್ರಮುಖ ಜಲಾಶಯವಾದ ಮಂಡ್ಯದ ಕೆಆರ್‌ಎಸ್ ಅಕ್ಟೋಬರ್‌ನಲ್ಲಿ ಭರ್ತಿಯಾಗಿದೆ. ಕಳೆದ 11 ವರ್ಷಗಳಲ್ಲೇ ಮೊದಲ ಬಾರಿಗೆ ಅಕ್ಟೋಬರ್ ತಿಂಗಳಿನಲ್ಲೇ ಕೆಆರ್ಎಸ್ ಭರ್ತಿ ಆಗಿರುವುದು ಹೊಸ ದಾಖಲೆಯಾಗಿದೆ.
ತಮಿಳುನಾಡಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಮೆಟ್ಟೂರು ಡ್ಯಾಂ ಈಗಾಗಲೇ ಭರ್ತಿಯಾಗಿದೆ. ಈ ಹಿನ್ನೆಲೆ ಕಾವೇರಿ ನದಿ ನೀರಿನ ವಿವಾದ ತಣ್ಣಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳಿಗೆ ಒಳಹರಿವು ಏರಿಕೆಯಾಗುತ್ತಿದೆ. ಶನಿವಾರ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂಬುದನ್ನು ಮುಂದೆ ತಿಳಿಯೋಣ.

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ ಜಲಾಶಯ
ಲಿಂಗನಮಕ್ಕಿ ಜಲಾಶಯದ ಶನಿವಾರದ ನೀರಿನ ಮಟ್ಟ 552.73 ಮೀಟರ್ ಆಗಿದೆ. ಡ್ಯಾಂನ ಪೂರ್ಣ ಮಟ್ಟ 554.44 ಮೀಟರ್. ಜಲಾಶಯಕ್ಕೆ ಒಳಹರಿವು 5877 ಕ್ಯುಸೆಕ್ ಆಗಿದೆ. ಡ್ಯಾಂನಿಂದ ಹೊರ ಹರಿವು 5762 ಕ್ಯುಸೆಕ್ ದಾಖಲಾಗಿದೆ.
ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್ ಆಗಿದ್ದು, ಶನಿವಾರ ಜಲಾಶಯದಲ್ಲಿ 870.95 ಮೀಟರ್ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 450 ಕ್ಯುಸೆಕ್ ನೀರು ಹರಿದು ಬರುತ್ತಿದ್ದರೆ, 1162 ಕ್ಯುಸೆಕ್ ನೀರನ್ನು ಹೊರ ಬೀಡಲಾಗುತ್ತಿದೆ.
ಹೇಮಾವತಿ ಜಲಾಶಯದ ಶನಿವಾರದ ನೀರಿನ ಮಟ್ಟ 887.04 ಮೀಟರ್ ಆಗಿದ್ದು, ಜಲಾಶಯದ ಪೂರ್ಣ ಮಟ್ಟ 890.58 ಮೀಟರ್ ಆಗಿದೆ. 4254 ಕ್ಯುಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದ್ದು, ಹೊರ ಹರಿವು 1410 ಕ್ಯುಸೆಕ್ ಆಗಿದೆ.

ಕೆಆರ್ಎಸ್, ಕಬಿನಿ, ಭದ್ರಾ ಡ್ಯಾಂ
ಕಬಿನಿ ಜಲಾಶಯದಲ್ಲಿ ಶನಿವಾರ 696.09 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 696.13 ಮೀಟರ್. ಜಲಾಶಯಕ್ಕೆ 2450 ಕ್ಯುಸೆಕ್ ಒಳಹರಿವು ಇದೆ, ಹೊರ ಹರಿವು 3302 ಕ್ಯುಸೆಕ್ ಆಗಿದೆ.
ಮಂಡ್ಯದಲ್ಲಿರುವ ಕೆಆರ್‌ಎಸ್ ಭರ್ತಿಯಾಗಿದೆ. ಶುಕ್ರವಾರ ಡ್ಯಾಂನಲ್ಲಿ 38.04 ಮೀಟರ್ ನೀರಿನ ಸಂಗ್ರಹವಿದೆ. ಜಲಾಶಯದ ಪೂರ್ಣ ಮಟ್ಟ 38.04 ಮೀಟರ್ ಆಗಿದೆ. ಒಳಹರಿವು 18628 ಕ್ಯುಸೆಕ್ ಮತ್ತು ಹೊರ ಹರಿವು 18419 ಕ್ಯುಸೆಕ್.
ಭದ್ರಾ ಜಲಾಶಯದಲ್ಲಿ ಶನಿವಾರ 657.65 ಮೀಟರ್ ನೀರಿನ ಸಂಗ್ರಹವಿದೆ. ಈ ಡ್ಯಾಂ ಪೂರ್ಣಮಟ್ಟವು 657.73 ಮೀಟರ್ ಆಗಿದ್ದು, ಜಲಾಶಯಕ್ಕೆ ಒಳಹರಿವು 5648 ಕ್ಯುಸೆಕ್ ಆಗಿದೆ. ಹೊರ ಹರಿವು 6864ರಷ್ಟಿದೆ.

ಆಲಮಟ್ಟಿ, ತುಂಗಭದ್ರ, ನಾರಾಯಣಪುರ ಡ್ಯಾಂ
ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಶನಿವಾರ ಡ್ಯಾಂನಲ್ಲಿ 497.71 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂನ ಪೂರ್ಣಮಟ್ಟ 497.71 ಮೀಟರ್. ಜಲಾಶಯಕ್ಕೆ 45648 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವು 45648 ಕ್ಯುಸೆಕ್ ಆಗಿದೆ.
ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಶನಿವಾರದ ನೀರಿನ ಮಟ್ಟ 518.27 ಮೀಟರ್ ಆಗಿದೆ. ಆಲಮಟ್ಟಿ ಜಲಾಶಯದ ಒಳಹರಿವಿನ ಪ್ರಮಾಣ 4060 ಆಗಿದ್ದು, ಹೊರ ಹರಿವು 4060 ಕ್ಯುಸೆಕ್ ಆಗಿದೆ.
ನಾರಾಯಣಪುರ ಜಲಾಶಯದ ಶನಿವಾರದ ನೀರಿನ ಮಟ್ಟ 491.53 ಮೀಟರ್. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್. ಒಳಹರಿವು 5642 ಕ್ಯುಸೆಕ್ ಆಗಿದೆ. ಹೊರ ಹರಿವು 4133 ಕ್ಯುಸೆಕ್ ದಾಖಲಾಗಿದೆ.

ಘಟಪ್ರಭಾ, ಸೂಪಾ, ಮಲಪ್ರಭಾ ಡ್ಯಾಂ
ಸೂಪಾ ಜಲಾಶಯದಲ್ಲಿ ಶನಿವಾರ 555.27 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 564.00 ಮೀಟರ್ ಆಗಿದೆ. ಜಲಾಶಯದ ಒಳಹರಿವು 1124 ಕ್ಯುಸೆಕ್ ಆಗಿದ್ದು, ಹೊರ ಹರಿವು 2428 ಕ್ಯುಸೆಕ್ ಆಗಿದೆ.
ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 662.91 ಮೀಟರ್. ಶನಿವಾರ ಜಲಾಶಯದಲ್ಲಿ 660.12 ಮೀಟರ್ ನೀರಿದೆ. ಜಲಾಶಯದ ಒಳಹರಿವು ಶೂನ್ಯವಾಗಿದ್ದು, ಹೊರ ಹರಿವು 2497 ಕ್ಯುಸೆಕ್ ಆಗಿದೆ.
ಮಲಪ್ರಭಾ ಜಲಾಶಯದಲ್ಲಿ ಶನಿವಾರ 632.98 ಮೀಟರ್ ನೀರಿನ ಸಂಗ್ರಹವಿದೆ. ಪೂರ್ಣ ಮಟ್ಟ 633.80 ಮೀಟರ್ ಆಗಿದೆ. ಜಲಾಶಯದ ಒಳಹರಿವು 2597 ಆಗಿದ್ದು, ಹೊರ ಹರಿವಿನ ಪ್ರಮಾಣ 1069 ಕ್ಯುಸೆಕ್ ರಷ್ಟಿದೆ.












Click it and Unblock the Notifications