ಕರ್ನಾಟಕ; ಶುಕ್ರವಾರ ಜಲಾಶಯಗಳ ನೀರಿನ ಮಟ್ಟ
ಬೆಂಗಳೂರು, ನವೆಂಬರ್ 12; ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಮಳೆ ಇನ್ನೂ ಎರಡು ದಿನ ಮುಂದುವರೆಯುವ ಸಾಧ್ಯತೆ ಇದೆ.
ಮಳೆಯ ನಡುವೆಯೇ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಕುಸಿದಿದೆ. ಶೀತವಾತಾವರಣ ನಿರ್ಮಾಣವಾಗಿದ್ದು, ಶುಕ್ರವಾರ ಮುಂಜಾನೆ ಕೆಲವು ಜಿಲ್ಲೆಗಳಲ್ಲಿ ಮಂಜು ಮುಸುಕಿದ ವಾತಾವರಣವಿತ್ತು. ಬೆಂಗಳೂರು ನಗರದಲ್ಲಿ ನವೆಂಬರ್ 15ರ ತನಕ ಶೀತ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ವಿವಿಧ ಜಲಾಶಯಗಳು ಜುಲೈ, ಆಗಸ್ಟ್ ತಿಂಗಳಿನಲ್ಲಿ ಭರ್ತಿಯಾಗಿವೆ. ಕಾವೇರಿಕೊಳ್ಳದ ಪ್ರಮುಖ ಜಲಾಶಯವಾದ ಮಂಡ್ಯದಲ್ಲಿರುವ ಕೆಆರ್‌ಎಸ್ ಅಕ್ಟೋಬರ್‌ನಲ್ಲಿ ಭರ್ತಿಯಾಗಿದೆ. ನವೆಂಬರ್ 2ರಂದು ಮುಖ್ಯಮಂತ್ರಿಗಳು ಬಾಗಿನ ಸಹ ಸಮರ್ಪಣೆ ಮಾಡಿದ್ದಾರೆ. 11 ವರ್ಷಗಳ ಬಳಿಕ ಕೆಆರ್‌ಎಸ್ ಅಕ್ಟೋಬರ್ ತಿಂಗಳಿನಲ್ಲಿ ಭರ್ತಿಯಾಗಿ ದಾಖಲೆ ಬರೆದಿದೆ.
ಕೆಆರ್‌ಎಸ್ ಮತ್ತು ತಮಿಳುನಾಡಿನ ಮೆಟ್ಟೂರು ಜಲಾಶಯ ಭರ್ತಿಯಾಗಿದೆ. ಇದರಿಂದಾಗಿ ಈ ಬಾರಿ ಕಾವೇರಿ ನದಿ ನೀರಿನ ವಿವಾದ ತಣ್ಣಗಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳಿಗೆ ಒಳಹರಿವು ಏರಿಕೆಯಾಗುತ್ತಿದೆ. ಶುಕ್ರವಾರ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟದ ವಿವರಗಳು ಇಲ್ಲಿವೆ..

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ
ಲಿಂಗನಮಕ್ಕಿ ಜಲಾಶಯದ ಶುಕ್ರವಾರದ ನೀರಿನ ಮಟ್ಟ 552.79 ಮೀಟರ್ ಆಗಿದೆ. ಡ್ಯಾಂನ ಪೂರ್ಣ ಮಟ್ಟ 554.44 ಮೀಟರ್. ಜಲಾಶಯಕ್ಕೆ ಒಳಹರಿವು 2624 ಕ್ಯುಸೆಕ್ ಆಗಿದೆ. ಡ್ಯಾಂನಿಂದ ಹೊರ ಹರಿವು 5958 ಕ್ಯುಸೆಕ್ ದಾಖಲಾಗಿದೆ.
ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಶುಕ್ರವಾರ ಜಲಾಶಯದಲ್ಲಿ 870.94 ಮೀಟರ್ ನೀರಿನ ಸಂಗ್ರಹವಿದೆ. 626 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹೊರ ಹರಿವು 983 ಕ್ಯುಸೆಕ್ ಆಗಿದೆ.
ಹೇಮಾವತಿ ಜಲಾಶಯದ ಶುಕ್ರವಾರದ ನೀರಿನ ಮಟ್ಟ 886.54 ಮೀಟರ್ ಆಗಿದೆ. ಜಲಾಶಯದ ಪೂರ್ಣ ಮಟ್ಟ 890.58 ಮೀಟರ್. 2061 ಕ್ಯುಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ. ಹೊರ ಹರಿವು 3500 ಕ್ಯುಸೆಕ್ ಆಗಿದೆ.

ಕೆಆರ್‌ಎಸ್, ಕಬಿನಿ, ಭದ್ರಾ
ಕಬಿನಿ ಜಲಾಶಯದಲ್ಲಿ ಶುಕ್ರವಾರ 696.07 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 696.13 ಮೀಟರ್. ಜಲಾಶಯಕ್ಕೆ 1312 ಕ್ಯುಸೆಕ್ ಒಳಹರಿವು ಇದೆ, ಹೊರ ಹರಿವು 1788 ಕ್ಯುಸೆಕ್ ಆಗಿದೆ.
ಮಂಡ್ಯದಲ್ಲಿರುವ ಕೆಆರ್‌ಎಸ್ ಭರ್ತಿಯಾಗಿದೆ. ಶುಕ್ರವಾರ ಡ್ಯಾಂನಲ್ಲಿ 38.04 ಮೀಟರ್ ನೀರಿನ ಸಂಗ್ರಹವಿದೆ. ಜಲಾಶಯದ ಪೂರ್ಣ ಮಟ್ಟ 38.04 ಮೀಟರ್ ಆಗಿದೆ. ಒಳಹರಿವು 6518 ಕ್ಯುಸೆಕ್ ಮತ್ತು ಹೊರ ಹರಿವು 6308 ಕ್ಯುಸೆಕ್.
ಭದ್ರಾ ಜಲಾಶಯದಲ್ಲಿ ಶುಕ್ರವಾರ 657.52 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣಮಟ್ಟ 657.73 ಮೀಟರ್. ಜಲಾಶಯಕ್ಕೆ ಒಳಹರಿವು 2656 ಕ್ಯುಸೆಕ್ ಆಗಿದೆ. ಹೊರ ಹರಿವು 2969.

ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ
ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಶುಕ್ರವಾರ ಡ್ಯಾಂನಲ್ಲಿ 497.53 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂನ ಪೂರ್ಣಮಟ್ಟ 497.71 ಮೀಟರ್. ಜಲಾಶಯಕ್ಕೆ 8051 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವು 9831 ಕ್ಯುಸೆಕ್.
ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಶುಕ್ರವಾರದ ನೀರಿನ ಮಟ್ಟ 518.71 ಮೀಟರ್ ಆಗಿದೆ. ಹೊರ ಹರಿವು 1817 ಕ್ಯುಸೆಕ್ ಆಗಿದೆ.
ನಾರಾಯಣಪುರ ಜಲಾಶಯದ ಶುಕ್ರವಾರದ ನೀರಿನ ಮಟ್ಟ 491.13 ಮೀಟರ್. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್. ಒಳಹರಿವು 811 ಕ್ಯುಸೆಕ್ ಆಗಿದೆ. ಹೊರ ಹರಿವು 341 ಕ್ಯುಸೆಕ್ ದಾಖಲಾಗಿದೆ.
Recommended Video

ಸೂಪ, ಘಟಪ್ರಭಾ, ಮಲಪ್ರಭಾ
ಸೂಪಾ ಜಲಾಶಯದಲ್ಲಿ ಶುಕ್ರವಾರ 555.60 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 564.00 ಮೀಟರ್ ಆಗಿದೆ. ಜಲಾಶಯದ ಹೊರ ಹರಿವು 2951 ಕ್ಯುಸೆಕ್.
ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 662.91 ಮೀಟರ್. ಶುಕ್ರವಾರ ಜಲಾಶಯದಲ್ಲಿ 660.86 ಮೀಟರ್ ನೀರಿದೆ. ಜಲಾಶಯದ ಹೊರ ಹರಿವು 5427 ಕ್ಯುಸೆಕ್ ಆಗಿದೆ.
ಮಲಪ್ರಭಾ ಜಲಾಶಯದಲ್ಲಿ ಶುಕ್ರವಾರ 632.98 ಮೀಟರ್ ನೀರಿನ ಸಂಗ್ರಹವಿದೆ. ಪೂರ್ಣ ಮಟ್ಟ 633.80 ಮೀಟರ್. ಹೊರ ಹರಿವು 2444 ಕ್ಯುಸೆಕ್.
-
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
ಏಪ್ರಿಲ್ 12ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಏಪ್ರಿಲ್ 11ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ









Click it and Unblock the Notifications