ಕಡಿಮೆಯಾದ ಮಳೆ ಅಬ್ಬರ; ಜಲಾಶಯಗಳ ನೀರಿನ ಮಟ್ಟ

ಬೆಂಗಳೂರು, ಜುಲೈ 27; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೆ ನದಿಗಳ ನೀರಿನ ಮಟ್ಟದಲ್ಲಿ ಇಳಿಕೆಯಾಗಿಲ್ಲ. ಜಲಾಶಯಗಳಿಗೆ ಒಳಹರಿವು ಏರಿಕೆಯಾಗುತ್ತಿದೆ.

ಕಳೆದ ವಾರ ಸುರಿದ ಮಳೆಯಿಂದಾಗಿ ರಾಜ್ಯದಲ್ಲಿ ಅಪಾರವಾದ ನಷ್ಟ ಉಂಟಾಗಿದೆ. ಕೆರೆಗಳು ಒಡೆದಿದ್ದು, ಕೃಷಿ ಜಮೀನುಗಳಿಗೆ ನೀರು ನುಗ್ಗಿದೆ. ನದಿಗಳು ತುಂಬಿ ಹರಿದಿದ್ದು, ಹಲವಾರು ಬೆಳೆಗಳು ಜಲಾವೃತವಾಗಿವೆ. ಜಲಾಶಯದಲ್ಲಿ ನೀರಿನ ಮಟ್ಟವೂ ಹೆಚ್ಚಾಗಿದೆ.

ತುಂಗ, ತುಂಗಭದ್ರಾ, ಆಲಮಟ್ಟಿ ಸೇರಿದಂತೆ ವಿವಿಧ ರಾಜ್ಯದ ಜಲಾಶಯಗಳಿಂದ ನದಿಗಳಿಗೆ ನೀರು ಹರಿಸಲಾಗುತ್ತಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದೆ. ನೆರೆಯಿಂದ ಆದ ಹಾನಿಯ ಅಂದಾಜನ್ನು ಇನ್ನಷ್ಟೇ ಮಾಡಬೇಕಿದೆ.

ಕಾವೇರಿ ಕೊಳ್ಳದ ಜಲಾಶಯವಾದ ಹಾರಂಗಿಗೆ 9087, ಹೇಮಾವತಿಗೆ 12916, ಕೆಆರ್‌ಎಸ್‌ಗೆ 28608, ಕಬಿನಿಗೆ 27280 ಕ್ಯುಸೆಕ್ ಒಳಹರಿವು ಜುಲೈ 27ರಂದು ದಾಖಲಾಗಿದೆ. ಕರ್ನಾಟಕ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ.

ಲಿಂಗನಮಕ್ಕಿ ಡ್ಯಾಂನಲ್ಲಿ ಎಷ್ಟು ನೀರಿದೆ?

ಲಿಂಗನಮಕ್ಕಿ ಡ್ಯಾಂನಲ್ಲಿ ಎಷ್ಟು ನೀರಿದೆ?

ಲಿಂಗನಮಕ್ಕಿ ಜಲಾಶಯದ ಪೂರ್ಣ ಮಟ್ಟ 544.44 ಮೀಟರ್. ಪ್ರಸ್ತುತ ಜಲಾಶಯದಲ್ಲಿ 550.23 ಮೀಟರ್ ನೀರಿನ ಸಂಗ್ರಹವಿದೆ. ಜಲಾಶಯದ ಒಳಹರಿವು 26232 ಕ್ಯುಸೆಕ್ ಆಗಿದೆ. ಹಾರಂಗಿ ಮತ್ತು ಹೇಮಾವತಿ ಡ್ಯಾಂ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಕೆಆರ್‌ಎಸ್ ನೀರಿನ ಮಟ್ಟದ ವಿವರ

ಕೆಆರ್‌ಎಸ್ ನೀರಿನ ಮಟ್ಟದ ವಿವರ

ಕೆಆರ್‌ಎಸ್ ಜಲಾಶಯದ ಪೂರ್ಣ ಮಟ್ಟ 38.04 ಮೀಟರ್. ಇಂದಿನ ನೀರಿನ ಮಟ್ಟ 34.25 ಮೀಟರ್ ಆಗಿದೆ. ಕಬಿನಿ ಮತ್ತು ಭದ್ರಾ ನದಿಗಳ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಆಲಮಟ್ಟಿ ನೀರಿನ ಮಟ್ಟ

ಆಲಮಟ್ಟಿ ನೀರಿನ ಮಟ್ಟ

ಆಲಮಟ್ಟಿ ಜಲಾಶಯಕ್ಕೆ 3,55,396 ಕ್ಯುಸೆಕ್ ಒಳಹರಿವು ಇದೆ. ಜಲಾಶಯದ ಪೂರ್ಣ ಮಟ್ಟ 519.60 ಮೀಟರ್ ಆಗಿದ್ದು, ಪ್ರಸ್ತುತ ಜಲಾಶಯದಲ್ಲಿ 516.21 ಮೀಟರ್ ನೀರಿನ ಸಂಗ್ರಹವಿದೆ. ತುಂಗಭದ್ರಾ ಮತ್ತು ನಾರಾಯಣಪುರ ಜಲಾಶಯಗಳ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಘಟಪ್ರಭಾ ಜಲಾಶಯ

ಘಟಪ್ರಭಾ ಜಲಾಶಯ

ಘಟಪ್ರಭಾ ಜಲಾಶಯಕ್ಕೆ 37,677 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಪೂರ್ಣ ಮಟ್ಟ 662.91 ಮೀಟರ್ ಆಗಿದೆ. ಇಂದಿನ ನೀರಿನ ಮಟ್ಟ 662.04 ಮೀಟರ್. ಮಲಪ್ರಭಾ ಮತ್ತು ಸೂಪಾ ಜಲಾಶಯಗಳ ನೀರಿನ ಮಟ್ಟವೂ ಚಿತ್ರದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+