ಕರ್ನಾಟಕದಲ್ಲಿ ಧಾರಾಕಾರ ಮಳೆ; ಡ್ಯಾಂಗಳ ನೀರಿನ ಮಟ್ಟ
ಬೆಂಗಳೂರು, ಜುಲೈ 19; ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಿದ್ದು, ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಹವಾಮಾನ ಇಲಾಖೆ ಜುಲೈ 20ರಂದು ಸಹ ರಾಜ್ಯದ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. 5 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಈ ವಾರವೂ ಸಹ ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಲಿಂಗನಮಕ್ಕಿ, ಕೆಆರ್‌ಎಸ್, ಭದ್ರಾ, ತುಂಗಭದ್ರಾ ಸೇರಿದಂತೆ ವಿವಿಧ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷ್ಣ ಮತ್ತು ಭೀಮಾ ನದಿಗಳ ನೀರಿನ ಮಟ್ಟವೂ ಏರಿಕೆಯಾಗಿದೆ.
ಕೊಡಗಿನಲ್ಲಿರುವ ಹಾರಂಗಿ ಜಲಾಶಯಕ್ಕೆ 8350 ಕ್ಯುಸೆಕ್ ಒಳಹರಿವು ಇದ್ದು ಜಲಾಶಯ ಭರ್ತಿಯಾಗಿದೆ. ಕಬಿನಿ ಜಲಾಶಯಕ್ಕೆ 11028 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯ ಬಹುತೇಕ ಭರ್ತಿಯಾಗಿದೆ. ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಚಿತ್ರದಲ್ಲಿದೆ....

ಲಿಂಗನಮಕ್ಕಿ ಜಲಾಶಯ
ಸಾಗರದಲ್ಲಿರುವ ಲಿಂಗನಮಕ್ಕಿ ಜಲಾಶಯಕ್ಕೆ ಜುಲೈ 19ರಂದು 51491 ಕ್ಯುಸೆಕ್ ಒಳಹರಿವು ಇದೆ. ಜಲಾಶಯದ ಪೂರ್ಣ ಮಟ್ಟ 554.44 ಮೀಟರ್. ಇಂದಿನ ನೀರಿನ ಮಟ್ಟ 546.53 ಮೀಟರ್ ಆಗಿದೆ. ಹಾರಂಗಿ ಮತ್ತು ಹೇಮಾವತಿ ಜಲಾಶಯಗಳ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಕೆಆರ್‌ಎಸ್ ನೀರಿನ ಮಟ್ಟ
ಕಾವೇರಿ ಕೊಳ್ಳದ ಪ್ರಮುಖ ಜಲಾಶಯ ಕೆಆರ್‌ಎಸ್. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಜಲಾಶಯಕ್ಕೆ 12916 ಕ್ಯುಸೆಕ್ ನೀರು ಹರಿದುಬರುತ್ತಿದೆ. ಜಲಾಶಯದ ಪೂರ್ಣ ಮಟ್ಟ 38.04 ಮೀಟರ್. ಇಂದಿನ ಮಟ್ಟ 29.93 ಮೀಟರ್. ಕಬಿನಿ ಮತ್ತು ಭದ್ರಾ ಜಲಾಶಯದ ನೀರಿನ ಮಟ್ಟವೂ ಚಿತ್ರದಲ್ಲಿದೆ.

ತುಂಗಭದ್ರಾ ಜಲಾಶಯದ ನೀರಿನ ಮಟ್ಟ
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ 44199 ಕ್ಯುಸೆಕ್ ನೀರು ಹರಿದುಬರುತ್ತಿದೆ. ಜಲಾಶಯದ ಪೂರ್ಣ ಮಟ್ಟ 497.71 ಮೀಟರ್. ಇಂದಿನ ಮಟ್ಟ 492.83 ಮೀಟರ್. ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಘಟಪ್ರಭಾ ನೀರಿನ ಮಟ್ಟ
ಘಟಪ್ರಭಾ ಜಲಾಶಯಕ್ಕೆ 9284 ಕ್ಯುಸೆಕ್ ಒಳಹರಿವು ಇದೆ. ಜಲಾಶಯದ ಪೂರ್ಣ ಮಟ್ಟ 662.91 ಮೀಟರ್. ಇಂದಿನ ಮಟ್ಟ 654.12 ಮೀಟರ್. ಮಲಪ್ರಭಾ ಮತ್ತು ಸೂಪಾ ಜಲಾಶಯದ ನೀರಿನ ಮಟ್ಟವೂ ಚಿತ್ರದಲ್ಲಿದೆ.












Click it and Unblock the Notifications