ಜಲಾಶಯಗಳ ನೀರಿನ ಮಟ್ಟ; ಹಾರಂಗಿ ಭರ್ತಿಗೆ ಕೆಲವೇ ಅಡಿ ಬಾಕಿ

ಬೆಂಗಳೂರು, ಜುಲೈ 15; ಕರ್ನಾಟಕದಲ್ಲಿ ಮಳೆ ಬಿರುಸುಗೊಂಡಿದ್ದು ನದಿಗಳು ತುಂಬಿ ಹರಿಯುತ್ತಿವೆ. ಜಲಾಶಯಗಳಿಗೆ ಒಳಹರಿವು ಏರಿಕೆಯಾಗುತ್ತಿದೆ. ಕೊಡಗು ಜಿಲ್ಲೆಯ ಹಾರಂಗಿ ಜಲಾಶಯ ಭರ್ತಿಯಾಗಲು ಕೆಲವೇ ಅಡಿಗಳು ಬಾಕಿ ಇದೆ.

ಲಿಂಗನಮಕ್ಕಿ ಜಲಾಶಯಕ್ಕೆ 33,331 ಕ್ಯುಸೆಕ್, ಭದ್ರಾ ಜಲಾಶಯಕ್ಕೆ 7,646, ತುಂಗಾ ಜಲಾಶಯಕ್ಕೆ 11,456, ಮಾಣಿ ಜಲಾಶಯಕ್ಕೆ 4095 ಕ್ಯುಸೆಕ್ ಒಳಹರಿವು ಇದೆ. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1786.05 ಅಡಿಗೆ ತಲುಪಿದೆ.

ಕಾರವಾರದ ಕದ್ರಾ ಜಲಾಶಯಕ್ಕೆ 22,111 ಕ್ಯುಸೆಕ್ ಒಳಹರಿವು ಇದೆ. 10,050 ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ. ಕಾವೇರಿ ಮತ್ತು ಉಪ ನದಿಗಳಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ, ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.

ಜುಲೈ 18ರ ತನಕ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ. ಜಲಾಶಯದ ನೀರಿನ ಮಟ್ಟ ಇಲ್ಲಿದೆ...

ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ನೀರಿನ ಮಟ್ಟ

ಕೊಡಗಿನಲ್ಲಿರುವ ಹಾರಂಗಿ ಜಲಾಶಯಕ್ಕೆ 14091 ಕ್ಯುಸೆಕ್ ಒಳಹರಿವು ಇದೆ. ನಾಲ್ಕು ಕ್ರೆಸ್ಟ್ ಗೇಟ್ ಮೂಲಕ 3394 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯದ ಪೂರ್ಣಮಟ್ಟ 871.38 ಮೀಟರ್. ಈಗ ಜಲಾಶಯದಲ್ಲಿ 869.76 ಮೀಟರ್ ನೀರಿದೆ. ಹೇಮಾವತಿ ಮತ್ತು ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಕೆಆರ್‌ಎಸ್ ನೀರಿನ ಮಟ್ಟ

ಕೆಆರ್‌ಎಸ್ ನೀರಿನ ಮಟ್ಟ

ಶ್ರೀರಂಗಪಟ್ಟಣದ ಕೆಆರ್‌ಎಸ್ ಜಲಾಶಯಕ್ಕೆ 6039 ಕ್ಯುಸೆಕ್ ನೀರು ಹರಿದುಬರುತ್ತಿದೆ. 1476 ಕ್ಯುಸೆಕ್ ಹೊರಹರಿವು ಇದೆ. ಕೆಆರ್‌ಎಸ್ ಪೂರ್ಣಮಟ್ಟ 38.04 ಮೀಟರ್. ಪ್ರಸ್ತುತ ಜಲಾಶಯದಲ್ಲಿ 27.31 ಮೀಟರ್ ನೀರಿದೆ. ಕಬಿನಿ ಮತ್ತು ಭದ್ರಾ ಜಲಾಶಯದ ನೀರಿನ ಮಟ್ಟವೂ ಇಲ್ಲಿದೆ.

ತುಂಗಭದ್ರಾ ನೀರಿನ ಮಟ್ಟ

ತುಂಗಭದ್ರಾ ನೀರಿನ ಮಟ್ಟ

ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ 6717 ಕ್ಯುಸೆಕ್ ನೀರು ಹರಿದುಬರುತ್ತಿದೆ. 404 ಕ್ಯುಸೆಕ್ ಹೊರಹರಿವು ಇದೆ. ಜಲಾಶಯದ ಪೂರ್ಣ ಮಟ್ಟ 497.71 ಮೀಟರ್. ಇಂದಿನ ಮಟ್ಟ 490.97 ಮೀಟರ್. ಆಲಮಟ್ಟಿ, ನಾರಾಯಣಪುರ ಡ್ಯಾಂ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಮಲಪ್ರಭಾ ನೀರಿನ ಮಟ್ಟ

ಮಲಪ್ರಭಾ ನೀರಿನ ಮಟ್ಟ

ಮಲಪ್ರಭಾ ಜಲಾಶಯಕ್ಕೆ 1224 ಕ್ಯುಸೆಕ್ ಒಳಹರಿವು ಇದೆ. ಜಲಾಶಯದ ಪೂರ್ಣ ಮಟ್ಟ 633.80 ಮೀಟರ್. ಇಂದಿನ ಮಟ್ಟ 629.08 ಮೀಟರ್. ಸೂಪಾ ಮತ್ತು ಘಟಪ್ರಭಾ ಜಲಾಶಯದ ನೀರಿನ ಮಟ್ಟವೂ ಚಿತ್ರದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+