ಹೆಚ್ಚಾದ ಮಳೆ; ಜಲಾಶಯಗಳಲ್ಲಿ ಎಷ್ಟು ನೀರಿದೆ?

ಬೆಂಗಳೂರು, ಜುಲೈ 13; ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದೆ. ನದಿಗಳ ನೀರಿನ ಮಟ್ಟ ಹೆಚ್ಚುತ್ತಿದ್ದು, ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ.

ಜುಲೈ 16ರ ತನಕ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ಜಲಾಶಯಗಳ ನೀರಿನ ಮಟ್ಟವೂ ಏರಿಕೆಯಾಗಲಿದೆ. ಬೆಂಗಳೂರು ನಗರದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಮಳೆಯಾಗುತ್ತಿದ್ದು, ಸಂಪೂರ್ಣ ಮೋಡ ಕವಿದ ವಾತಾವರಣವಿದೆ.

ಜೂನ್ ತಿಂಗಳ ಮೊದಲ ವಾರದಲ್ಲಿ ಅಬ್ಬರಿಸಿದ್ದ ನೈಋತ್ಯ ಮುಂಗಾರು ಬಳಿಕ ಬಿಡುವು ಪಡೆದಿತ್ತು. ಆದ್ದರಿಂದ, ನದಿಗಳ ನೀರಿನ ಮಟ್ಟವೂ ಇಳಿಕೆಯಾಗಿ, ಜಲಾಶಯಗಳಿಗೆ ನೀರಿನ ಒಳಹರಿವು ಕಡಿಮೆಯಾಗಿತ್ತು. ಕೃಷಿ ಚಟುವಟಿಕೆಗಳಿಗೆ ಸಹ ಹಿನ್ನಡೆ ಉಂಟಾಗಿತ್ತು.

ಕಾವೇರಿ ಕೊಳ್ಳದ ಜಲಾಶಯ ಸೇರಿದಂತೆ ಯಾವುದೇ ಜಲಾಶಯಗಳು ಸಹ ಇನ್ನೂ ಭರ್ತಿಯಾಗಿಲ್ಲ. ಜುಲೈ ಮತ್ತು ಆಗಸ್ಟ್‌ನಲ್ಲಿ ಸುರಿಯುವ ಮಳೆ ಕೃಷಿ ಚಟುವಟಿಕೆ ಬೆಂಬಲವಾಗಿ ನಿಲ್ಲಬೇಕು, ಜಲಾಶಯಗಳನ್ನು ತುಂಬಿಸಬೇಕು. ರಾಜ್ಯದ ಜಲಾಶಯಗಳಲ್ಲಿ ಎಷ್ಟು ನೀರಿದೆ? ಎಂಬ ಮಾಹಿತಿ ಇಲ್ಲಿದೆ.

ಲಿಂಗನಮಕ್ಕಿ ಜಲಾಶಯ

ಲಿಂಗನಮಕ್ಕಿ ಜಲಾಶಯ

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ಲಿಂಗನಮಕ್ಕಿ ಜಲಾಶಯದ ಪೂರ್ಣಮಟ್ಟ 554.44 ಮೀಟರ್. ಇಂದಿನ ನೀರಿನ ಮಟ್ಟ 543.95. ಜಲಾಶಯಕ್ಕೆ ಒಳ ಹರಿವು 12769 ಕ್ಯುಸೆಕ್. ಹಾರಂಗಿ ಮತ್ತು ಹೇಮಾವತಿ ಜಲಾಶಯಗಳ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಕಬಿನಿ ಜಲಾಶಯದಲ್ಲಿ ಎಷ್ಟು ನೀರಿದೆ?

ಕಬಿನಿ ಜಲಾಶಯದಲ್ಲಿ ಎಷ್ಟು ನೀರಿದೆ?

ಕಾವೇರಿ ಕೊಳ್ಳದ ಜಲಾಶಯವಾದ ಕಬಿನಿಯ ಪೂರ್ಣಮಟ್ಟ 696.13 ಮೀಟರ್‌ಗಳು. ಇಂದಿನ ನೀರಿನ ಮಟ್ಟ 693.82. ಜಲಾಶಯದ ಒಳಹರಿವು 3984 ಕ್ಯುಸೆಕ್. ಕೆಆರ್‌ಎಸ್ ಮತ್ತು ಭದ್ರಾ ಜಲಾಶಯದ ನೀರಿನ ಮಟ್ಟವೂ ಚಿತ್ರದಲ್ಲಿದೆ.

ತುಂಗಭದ್ರಾ ಜಲಾಶಯದ ನೀರಿನ ಮಟ್ಟ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ 497.71 ಮೀಟರ್‌. ಇಂದಿನ ನೀರಿನ ಮಟ್ಟ 490.87 ಮೀಟರ್. ಜಲಾಶಯಕ್ಕೆ ಒಳ ಹರಿವು 1962 ಕ್ಯುಸೆಕ್. ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಮಲಪ್ರಭಾ ಜಲಾಶಯದಲ್ಲಿ ಎಷ್ಟು ನೀರಿದೆ?

ಮಲಪ್ರಭಾ ಜಲಾಶಯದಲ್ಲಿ ಎಷ್ಟು ನೀರಿದೆ?

ಮಲಪ್ರಭಾ ಜಲಾಶಯದ ಪೂರ್ಣ ಮಟ್ಟ 633.80 ಮೀಟರ್. ಇಂದಿನ ನೀರಿನ ಮಟ್ಟ 629.02 ಮೀಟರ್. ಘಟಪ್ರಭಾ ಮತ್ತು ಸೂಪಾ ಜಲಾಶಯಗಳ ನೀರಿನ ಮಟ್ಟವೂ ಚಿತ್ರದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+