ಮತ್ತೆ ಮಳೆ ಆರಂಭ; ಜಲಾಶಯಗಳ ನೀರಿನ ಮಟ್ಟ ತಿಳಿಯಿರಿ

ಬೆಂಗಳೂರು, ಜುಲೈ 12; ಕರ್ನಾಟಕದ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದೆ. ಮಳೆ ಹೆಚ್ಚಾಗಿದ್ದು, ನದಿಗಳ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ. ಇದರಿಂದಾಗಿ ಜಲಾಶಯಗಳ ಒಳಹರಿವು ಸಹ ಹೆಚ್ಚುತ್ತಿದೆ.

ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಜುಲೈ 12ರಿಂದ 16ರ ತನಕ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬರುವ ನಿರೀಕ್ಷೆ ಇದೆ.

ಮಲೆನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಜುಲೈ 16ರ ತನಕ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂಗಾರು ಚುರುಕುಗೊಂಡಿದ್ದರಿಂದ ರೈತರು ಸಹ ಸಂತಸಗೊಂಡಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಜೂನ್ ಮೊದಲ ವಾರದಲ್ಲಿ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿತ್ತು. ಬಳಿಕ ಮಳೆ ಕೈಕೊಟ್ಟಿದ್ದರಿಂದ ನದಿಗಳ ನೀರಿನ ಮಟ್ಟವೂ ಇಳಿಕೆಯಾಗಿದೆ. ಜುಲೈ 10 ಕಳೆದರೂ ಮಳೆಗಾಲ ಸರಿಯಾಗಿ ಆರಂಭವಾಗಿಲ್ಲ. ಇದು ರೈತರಲ್ಲಿ ಚಿಂತೆಗೆ ಕಾರಣವಾಗಿದೆ.

ಲಿಂಗನಮಕ್ಕಿ ಒಳಹರಿವು ಎಷ್ಟು?

ಲಿಂಗನಮಕ್ಕಿ ಒಳಹರಿವು ಎಷ್ಟು?

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ಲಿಂಗನಮಕ್ಕಿ ಜಲಾಶಯದ ಒಳ ಹರಿವು 7083 ಕ್ಯುಸೆಕ್. ಹೊರ ಹರಿವು 2301. 544.44 ಮೀಟರ್ ಎತ್ತರದ ಜಲಾಶಯದ ಇಂದಿನ ಮಟ್ಟ 543.83. ಹಾರಾಂಗಿ ಮತ್ತು ಹೇಮಾವತಿ ನದಿಗಳ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಕೆಆರ್‌ಎಸ್ ಒಳಹರಿವು ಎಷ್ಟು?

ಕೆಆರ್‌ಎಸ್ ಒಳಹರಿವು ಎಷ್ಟು?

ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಜಲಾಶಯದ ಒಳ ಹರಿವು 1618 ಕ್ಯುಸೆಕ್. ಹೊರಹರಿವು 1402 ಕ್ಯುಸೆಕ್. 38.04 ಮೀಟರ್ ಜಲಾಶಯದಲ್ಲಿ 26.94 ಇಂದಿನ ನೀರಿನ ಮಟ್ಟ. ಕಬಿನಿ ಮತ್ತು ಭದ್ರಾ ಅಣೆಕಟ್ಟಿನ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಆಲಮಟ್ಟಿ ನೀರಿನ ಮಟ್ಟ

ಆಲಮಟ್ಟಿ ನೀರಿನ ಮಟ್ಟ

ಆಲಮಟ್ಟಿ ಜಲಾಶಯಕ್ಕೆ 9469 ಕ್ಯುಸೆಕ್ ಒಳಹರಿವು ಇದ್ದು, 11008 ಕ್ಯುಸೆಕ್ ಹೊರ ಹರಿವು ದಾಖಲಾಗಿದೆ. 519.60 ಮೀಟರ್ ಪೂರ್ಣಮಟ್ಟದ ಜಲಾಶಯದಲ್ಲಿ 517.47 ಮೀಟರ್ ಇಂದಿನ ನೀರಿನ ಮಟ್ಟವಾಗಿದೆ. ನಾರಾಯಣಪುರ ಮತ್ತು ತುಂಗಭದ್ರಾ ಜಲಾಶಯದ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಸೂಪ ಜಲಾಶಯದ ಒಳಹರಿವು

ಸೂಪ ಜಲಾಶಯದ ಒಳಹರಿವು

ಸೂಪ ಜಲಾಶಯದ ಒಳ ಹರಿವು 6582 ಕ್ಯುಸೆಕ್. ಹೊರಹರಿವು 531 ಕ್ಯುಸೆಕ್. ಸೂಪ ಜಲಾಶಯದ ಪೂರ್ಣ ಮಟ್ಟ 564.00 ಮೀಟರ್. ಇಂದಿನ ಮಟ್ಟ 537.86 ಮೀಟರ್. ಘಟಪ್ರಭಾ ಮತ್ತು ಮಲಪ್ರಭಾ ಜಲಾಶಯದ ನೀರಿನ ಮಟ್ಟವೂ ಚಿತ್ರದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+