ವಿವಿಧ ಜಿಲ್ಲೆಗಳಲ್ಲಿ ಮಳೆ; ಡಿ.3ರಂದು ಡ್ಯಾಂಗಳ ನೀರಿನ ಮಟ್ಟ
ಬೆಂಗಳೂರು, ಡಿಸೆಂಬರ್ 03; 'ಜವಾದ್' ಚಂಡಮಾರುತ ಹಲವು ರಾಜ್ಯಗಳಿಗೆ ಶನಿವಾರ ಅಪ್ಪಳಿಸಲಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗುರುವಾರ ಮಳೆಯಾಗಿದ್ದು, ಶುಕ್ರವಾರ ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ತುಂತುರು ಮಳೆಯಾಗಿದೆ.
ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಗುರುವಾರ ಮಳೆಯಾಗಿದೆ. ಕಳೆದ ಒಂದು ವಾರದಿಂದ ಬಿಡುವುಕೊಟ್ಟಿದ್ದ ಮಳೆ ಮತ್ತೆ ಆರಂಭವಾಗಿದ್ದು, ರೈತರ ನೆಮ್ಮದಿ ಕೆಡಿಸಿದೆ.
ಶಿರಸಿ, ಕಾರವಾರ, ಹಳಿಯಾಳ, ಗೋಕರ್ಣ, ಜೊಯಿಡಾ ಮುಂತಾದ ಕಡೆ ಮಳೆಯಾಗಿದೆ. ಈಗ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅಡಕೆ, ಕಾಫಿ, ಭತ್ತ ಮುಂತಾದ ಬೆಳೆಗಳನ್ನು ಬೆಳೆದವರು ಕಂಗಾಲಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ಗುಂಡಾಲ್ ಜಲಾಶಯ ಭರ್ತಿಯಾಗಿದೆ. ಜಲಾಶಯ ಉದ್ಘಾಟನೆಗೊಂಡ 43 ವರ್ಷಗಳ ಬಳಿಕ ಮೊದಲ ಬಾರಿ ತುಂಬಿದೆ. 0.97 ಟಿಎಂಸಿ ಅಡಿ ನೀರನ್ನು ಡ್ಯಾಂನಲ್ಲಿ ಸಂಗ್ರಹಿಸಬಹುದಾಗಿದೆ.

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ
ಲಿಂಗನಮಕ್ಕಿ ಜಲಾಶಯದ ಶುಕ್ರವಾರದ ನೀರಿನ ಮಟ್ಟ 552.33 ಮೀಟರ್. ಡ್ಯಾಂನ ಪೂರ್ಣ ಮಟ್ಟ 554.44 ಮೀಟರ್. ಜಲಾಶಯಕ್ಕೆ ಒಳಹರಿವು 2117 ಕ್ಯುಸೆಕ್. ಡ್ಯಾಂನಿಂದ ಹೊರ ಹರಿವು 5470 ಕ್ಯುಸೆಕ್ ದಾಖಲಾಗಿದೆ.
ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಶುಕ್ರವಾರ ಜಲಾಶಯದಲ್ಲಿ 870.66 ಮೀಟರ್ ನೀರಿನ ಸಂಗ್ರಹವಿದೆ. 191 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹೊರ ಹರಿವು 1066 ಕ್ಯುಸೆಕ್ ಆಗಿದೆ.
ಹೇಮಾವತಿ ಜಲಾಶಯದ ಶುಕ್ರವಾರದ ನೀರಿನ ಮಟ್ಟ 888.12 ಮೀಟರ್ ಆಗಿದೆ. ಜಲಾಶಯದ ಪೂರ್ಣ ಮಟ್ಟ 890.58 ಮೀಟರ್. 2484 ಕ್ಯುಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ. ಹೊರ ಹರಿವು 2020 ಕ್ಯುಸೆಕ್.

ಕೆಆರ್‌ಎಸ್, ಕಬಿನಿ, ಭದ್ರಾ ಡ್ಯಾಂ
ಕಬಿನಿ ಜಲಾಶಯದಲ್ಲಿ ಶುಕ್ರವಾರ 696.03 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 696.13 ಮೀಟರ್. ಜಲಾಶಯಕ್ಕೆ 1707 ಕ್ಯುಸೆಕ್ ಒಳಹರಿವು ಇದೆ, ಹೊರ ಹರಿವು 1400 ಕ್ಯುಸೆಕ್ ಆಗಿದೆ.
ಮಂಡ್ಯದಲ್ಲಿರುವ ಕೆಆರ್‌ಎಸ್ ಈಗಾಗಲೇ ಭರ್ತಿಯಾಗಿದೆ. ಶುಕ್ರವಾರ ಡ್ಯಾಂನಲ್ಲಿ 37.99 ಮೀಟರ್ ನೀರಿನ ಸಂಗ್ರಹವಿದೆ. ಜಲಾಶಯದ ಪೂರ್ಣ ಮಟ್ಟ 38.04 ಮೀಟರ್ ಆಗಿದೆ. ಒಳಹರಿವು 5966 ಕ್ಯುಸೆಕ್ ಮತ್ತು ಹೊರ ಹರಿವು 5434 ಕ್ಯುಸೆಕ್.
ಭದ್ರಾ ಜಲಾಶಯದಲ್ಲಿ ಶುಕ್ರವಾರ 657.72 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣಮಟ್ಟ 657.73 ಮೀಟರ್. ಜಲಾಶಯಕ್ಕೆ ಒಳಹರಿವು 1507 ಕ್ಯುಸೆಕ್ ಆಗಿದೆ. ಹೊರ ಹರಿವು 1207 ಕ್ಯುಸೆಕ್ ಆಗಿದೆ.

ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ
ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಶುಕ್ರವಾರ ಡ್ಯಾಂನಲ್ಲಿ 497.71 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂನ ಪೂರ್ಣಮಟ್ಟ 497.71 ಮೀಟರ್. ಜಲಾಶಯಕ್ಕೆ 8346 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಶುಕ್ರವಾರ ಜಲಾಶಯದ ನೀರಿನ ಮಟ್ಟ 518.61 ಮೀಟರ್ ಆಗಿದೆ. ಒಳ ಹರಿವು 11332 ಕ್ಯುಸೆಕ್, ಹೊರ ಹರಿವು 580 ಕ್ಯುಸೆಕ್ ಆಗಿದೆ.
ನಾರಾಯಣಪುರ ಜಲಾಶಯದ ಶುಕ್ರವಾರದ ನೀರಿನ ಮಟ್ಟ 492.13 ಮೀಟರ್. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್. ಒಳಹರಿವು 856 ಕ್ಯುಸೆಕ್ ಆಗಿದೆ. ಹೊರ ಹರಿವು 312 ಕ್ಯುಸೆಕ್ ದಾಖಲಾಗಿದೆ.

ಸೂಪ, ಘಟಪ್ರಭಾ, ಮಲಪ್ರಭಾ
ಸೂಪಾ ಜಲಾಶಯದಲ್ಲಿ ಶುಕ್ರವಾರ 554.75 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 564.00 ಮೀಟರ್ ಆಗಿದೆ. ಜಲಾಶಯದ ಒಳ ಹರಿವು 1360 ಕ್ಯುಸೆಕ್ ಮತ್ತು ಹೊರ ಹರಿವು 4374 ಕ್ಯುಸೆಕ್ ಆಗಿದೆ.
ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 660.16 ಮೀಟರ್. ಶುಕ್ರವಾರ ಜಲಾಶಯದಲ್ಲಿ 660.16 ಮೀಟರ್ ನೀರಿದೆ. ಜಲಾಶಯದ ಒಳ ಹರಿವು 1045 ಕ್ಯುಸೆಕ್, ಹೊರ ಹರಿವು 182 ಕ್ಯುಸೆಕ್ ಆಗಿದೆ.
ಮಲಪ್ರಭಾ ಜಲಾಶಯದಲ್ಲಿ ಶುಕ್ರವಾರ 633.10 ಮೀಟರ್ ನೀರಿನ ಸಂಗ್ರಹವಿದೆ. ಪೂರ್ಣ ಮಟ್ಟ 633.80 ಮೀಟರ್. ಒಳಹರಿವು 1356 ಕ್ಯುಸೆಕ್, ಹೊರ ಹರಿವು 569 ಕ್ಯುಸೆಕ್.












Click it and Unblock the Notifications