117 ಅಡಿ ತಲುಪಿದ ಕೆಆರ್‌ಎಸ್; ಜಲಾಶಯಗಳ ನೀರಿನ ಮಟ್ಟ
ಬೆಂಗಳೂರು, ಆಗಸ್ಟ್ 30; ಕರ್ನಾಟಕದಲ್ಲಿ ನೈಋತ್ಯ ಮುಂಗಾರು ದುರ್ಬಲವಾಗಿದೆ. ಆದರೆ ಬಂಗಾಳಕೊಲ್ಲಿನ ವಾಯುಭಾರ ಕುಸಿತದಿಂದಾಗಿ ಕರಾವಳಿ, ಮಲೆನಾಡು ಭಾಗದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುತ್ತಿದೆ.
ಆಗಸ್ಟ್ ತಿಂಗಳ ಅಂತ್ಯಕ್ಕೆ ಕರ್ನಾಟಕದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಜುಲೈ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿಯೇ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿತ್ತು. ಈಗ ಆಗಸ್ಟ್ ಅಂತ್ಯದಲ್ಲಿಯೂ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವು ಹೆಚ್ಚಿದೆ.
ಕಾವೇರಿ ಕೊಳ್ಳದ ಪ್ರಮುಖ ಜಲಾಶಯವಾದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆಆರ್‌ಎಸ್ ಇನ್ನೂ ಭರ್ತಿಯಾಗಿಲ್ಲ. ಗರಿಷ್ಠ 124 ಅಡಿ ಎತ್ತರದ ಜಲಾಶಯದಲ್ಲಿ ಸದ್ಯ 117 ಅಡಿ ನೀರಿನ ಸಂಗ್ರಹವಿದೆ. ಬೆಂಗಳೂರು, ಮೈಸೂರು ನಗರಗಳು ಕುಡಿಯುವ ನೀರಿಗಾಗಿ ಕೆಆರ್‌ಎಸ್ ಅವಲಂಬಿಸಿದ್ದು, ಭರ್ತಿಯಾದರೆ ಬೇಸಿಗೆಯಲ್ಲಿ ನೀರಿನ ಕೊರತೆ ಕಾಡುವುದಿಲ್ಲ.
ಬಂಗಾಳಕೊಲ್ಲಿಯನ ವಾಯುಭಾರ ಕುಸಿತದ ಪರಿಣಾಮ ಆಗಸ್ಟ್ 31ರ ತನಕ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ನೈಋತ್ಯ ಮುಂಗಾರು ದುರ್ಬಲಗೊಂಡಿದ್ದು, ಇನ್ನು ಮಳೆ ಬರಬೇಕಾದರೆ ಚಂಡಮಾರುತ ಬರಬೇಕಿದೆ. ಕರ್ನಾಟಕದ ಜಲಾಶಯಗಳ ಸೋಮವಾರದ ನೀರಿನ ಮಟ್ಟದ ವಿವರ ಇಲ್ಲಿದೆ.

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ
ಲಿಂಗನಮಕ್ಕಿ ಜಲಾಶಯದ ಪೂರ್ಣ ಮಟ್ಟ 554.44 ಮೀಟರ್ ಆಗಿದೆ. ಸೋಮವಾರ ಜಲಾಶಯದಲ್ಲಿ 552.47 ಮೀಟರ್ ನೀರಿನ ಸಂಗ್ರಹವಿದೆ. 7112 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, 4632 ಕ್ಯುಸೆಕ್ ಹೊರ ಹರಿವು ಇದೆ.
ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಸೋಮವಾರದ ನೀರಿನ ಮಟ್ಟ 870.94 ಮೀಟರ್ ಆಗಿದೆ. ಜಲಾಶಯಕ್ಕೆ 2537 ಕ್ಯುಸೆಕ್ ಒಳಹರಿವು, ಡ್ಯಾಂನಿಂದ 1600 ಕ್ಯುಸೆಕ್ ಹೊರ ಹರಿವು ದಾಖಲಾಗಿದೆ.
ಹಾಸನದಲ್ಲಿರುವ ಹೇಮಾವತಿ ಜಲಾಶಯದ ಪೂರ್ಣ ಮಟ್ಟ 890.58 ಮೀಟರ್. ಸೋಮವಾರ ಜಲಾಶಯದಲ್ಲಿ 889.13 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂಗೆ 2911 ಕ್ಯುಸೆಕ್ ಒಳಹರಿವು ಮತ್ತು 5120 ಕ್ಯುಸೆಕ್ ಹೊರ ಹರಿವು ಇದೆ.

ಕೆಆರ್‌ಎಸ್, ಕಬಿನಿ, ಭದ್ರಾ ಜಲಾಶಯ
ಕಬಿನಿ ಜಲಾಶಯದ ಸೋಮವಾರದ ನೀರಿನ ಮಟ್ಟ 695.23 ಮೀಟರ್. ಡ್ಯಾಂ ಪೂರ್ಣ ಮಟ್ಟ 696.13 ಮೀಟರ್ ಆಗಿದೆ. ಜಲಾಶಯಕ್ಕೆ 6443 ಕ್ಯುಸೆಕ್ ಒಳಹರಿವು ಇದೆ. 6750 ಕ್ಯುಸೆಕ್ ನೀರನ್ನು ಡ್ಯಾಂನಿಂದ ಹೊರಬಿಡಲಾಗುತ್ತದೆ.
ಕೆಆರ್‌ಎಸ್ ಜಲಾಶಯದ ಸೋಮವಾರದ ನೀರಿನ ಮಟ್ಟ 35.90 ಮೀಟರ್. ಜಲಾಶಯದ ಪೂರ್ಣ ಮಟ್ಟ 38.04 ಮೀಟರ್. ಜಲಾಶಯಕ್ಕೆ ಒಳಹರಿವು 3836 ಕ್ಯುಸೆಕ್ ಮತ್ತು ಹೊರ ಹರಿವು 9552 ಕ್ಯುಸೆಕ್ ಇದೆ.
ಭದ್ರಾ ಜಲಾಶಯದ ಸೋಮವಾರದ ನೀರಿನ ಮಟ್ಟ 657.47 ಮೀಟರ್ ಆಗಿದೆ. ಡ್ಯಾಂ ಪೂರ್ಣಮಟ್ಟ 657.73 ಮೀಟರ್. ಜಲಾಶಯದ ಒಳಹರಿವು 5063 ಕ್ಯುಸೆಕ್ ಹಾಗೂ ಹೊರಹರಿವು 3246 ಕ್ಯುಸೆಕ್ ಆಗಿದೆ.

ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ
ತುಂಗಭದ್ರಾ ಜಲಾಶಯದ ಸೋಮವಾರದ ನೀರಿನ ಮಟ್ಟ 497.53 ಮೀಟರ್. ಡ್ಯಾಂನ ಪೂರ್ಣಮಟ್ಟ 497.71 ಮೀಟರ್ ಆಗಿದೆ. ಜಲಾಶಯಕ್ಕೆ 14690 ಕ್ಯುಸೆಕ್ ಒಳಹರಿವು ಮತ್ತು 10683 ಕ್ಯುಸೆಕ್ ಹೊರಹರಿವು ಇದೆ.
ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್ ಆಗಿದೆ. ಸೋಮವಾರದ ನೀರಿನ ಮಟ್ಟ 519.57 ಮೀಟರ್ ಆಗಿದೆ. ಡ್ಯಾಂಗೆ 13337 ಕ್ಯುಸೆಕ್ ಒಳಹರಿವು ಮತ್ತು ಹೊರ ಹರಿವು 13377 ಕ್ಯುಸೆಕ್ ಆಗಿದೆ.
ನಾರಾಯಣಪುರ ಜಲಾಶಯದ ಸೋಮವಾರದ ನೀರಿನ ಮಟ್ಟ 491.93 ಮೀಟರ್ ಆಗಿದೆ. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್. ಪ್ರಸ್ತುತ ಜಲಾಶಯಕ್ಕೆ 14019 ಕ್ಯುಸೆಕ್ ಒಳಹರಿವು ಮತ್ತು 5089 ಕ್ಯುಸೆಕ್ ಹೊರ ಹರಿವು ಇದೆ.

ಸೂಪ, ಘಟಪ್ರಭಾ, ಮಲಪ್ರಭಾ
ಸೂಪಾ ಜಲಾಶಯದ ಸೋಮವಾರದ ನೀರಿನ ಮಟ್ಟ 554.74 ಮೀಟರ್ ಆಗಿದೆ. ಡ್ಯಾಂ ಪೂರ್ಣ ಮಟ್ಟ 564.00 ಮೀಟರ್. 3400 ಕ್ಯುಸೆಕ್ ಒಳ ಹರಿವು ಇದೆ, ಹೊರ ಹರಿವು 821 ಕ್ಯುಸೆಕ್ ಆಗಿದೆ.
ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 662.91 ಮೀಟರ್. ಸೋಮವಾರದ ನೀರಿನ ಮಟ್ಟ 662.91 ಮೀಟರ್. ಜಲಾಶಯಕ್ಕೆ ಒಳಹರಿವು 1827 ಕ್ಯುಸೆಕ್ ಇದ್ದು, ಡ್ಯಾಂ ಹೊರ ಹರಿವು 1827 ಕ್ಯುಸೆಕ್ ಆಗಿದೆ.
ಮಲಪ್ರಭಾ ಜಲಾಶಯದ ಸೋಮವಾರದ ನೀರಿನ ಮಟ್ಟ 633.47 ಮೀಟರ್. ಪೂರ್ಣ ಮಟ್ಟ 633.80 ಮೀಟರ್. ಜಲಾಶಯಕ್ಕೆ ಒಳಹರಿವು 2491 ಕ್ಯುಸೆಕ್, ಹೊರ ಹರಿವು 894 ಕ್ಯುಸೆಕ್.












Click it and Unblock the Notifications