ಬಜೆಟ್: ಪ್ರತಿ ರೂಪಾಯಿಯ ಜಮೆ ಮತ್ತು ಖರ್ಚು
ಬೆಂಗಳೂರು, ಜುಲೈ 5: ಅಂತೂ ಇಂತೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಬಜೆಟ್ ಮಂಡನೆಯಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸದನದಲ್ಲಿ ಬಜೆಟ್ ಮಂಡಿಸಿ ತಮ್ಮ ಹೊರೆ ಇಳಿಸಿಕೊಂಡಿದ್ದಾರೆ.
ಸಾಲ ಮನ್ನಾ ಸೇರಿದಂತೆ ಪ್ರಮುಖ ಘೋಷಣೆಗಳನ್ನು ಅವರು ಬಜೆಟ್ ನಲ್ಲಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೈಸೆಗಳಲ್ಲಿ ರೂಪಾಯಿಯನ್ನು ಹೇಗೆ ಹೊಂದಿಸುತ್ತಾರೆ ಮತ್ತು ಖರ್ಚು ಮಾಡುತ್ತಾರೆ ಎಂಬ ವಿವರಗಳನ್ನೂ ನೀಡಿದ್ದಾರೆ. ಆ ವಿವರಗಳು ಇಲ್ಲಿವೆ.

ಜಮೆ- ರೂಪಾಯಿ ಎಷ್ಟು ಭಾಗ ಯಾವುದರಿಂದ? (ಪೈಸೆಗಳಲ್ಲಿ)
ರಾಜ್ಯ ತೆರಿಗೆಯೇತರ ರಾಜಸ್ವದಿಂದ 4
ಸಾರ್ವಜನಿಕ ಲೆಕ್ಕ (ನಿವ್ವಳ) 2
ರಾಜ್ಯ ತೆರಿಗೆ ಆದಾಯದಿಂದ 49
ಕೇಂದ್ರ ತೆರಿಗೆ ಪಾಲಿನಿಂದ 17
ಕೇಂದ್ರ ಸರಕಾರದ ಅನುದಾನ 7
ಸಾಲದಿಂದ 21

ವೆಚ್ಚ- ರೂಪಾಯಿ ಯಾವ ಭಾಗ ಎಷ್ಟೆಷ್ಟು? (ಪೈಸೆಗಳಲ್ಲಿ)
ನೀರು ಪೂರೈಕೆ ಮತ್ತು ನೈರ್ಮಲ್ಯ - 3
ಇತರ ಸಾಮಾನ್ಯ ಸೇವೆಗಳು - 17
ಕೃಷಿ, ನೀರಾವರಿ ಮತ್ತು ಗ್ರಾಮೀಣ ಅಭಿವೃದ್ಧಿ - 19
ಶಿಕ್ಷಣ - 12
ಇತರ ಆರ್ಥಿಕ ಸೇವೆಗಳು - 14
ಸಾಲ ತೀರಿಕೆ - 13
ಸಮಾಜ ಕಲ್ಯಾಣ - 12
ಇತರ ಸಾಮಾಜಿಕ ಸೇವೆಗಳು - 5
ಆರೋಗ್ಯ - 4












Click it and Unblock the Notifications