2013ರಲ್ಲಿ ಮಹಿಳಾ ದರ್ಬಾರ್ : ಗೆದ್ದವರು, ಸೋತವರು
ಬೆಂಗಳೂರು, ಮಾರ್ಚ್ 20 : ಕರ್ನಾಟಕ ಚುನಾವಣೆಯಲ್ಲಿ ಮಹಿಳೆಯರ ದರ್ಬಾರು ಕಡಿಮೆಯೆ. 2013ರ ಚುನಾವಣೆಯಲ್ಲಿ ಒಟ್ಟು 175 ಮಹಿಳೆಯರು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದರು. ಅವರಲ್ಲಿ ಗೆದ್ದವರು ಕೇವಲ 6 ಮಂದಿ ಮಾತ್ರ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಅವರಲ್ಲಿ ಪ್ರಮುಖರು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕಿ, ನಟಿ ಉಮಾಶ್ರೀ ಅವರು ತೇರದಾಳ ಕ್ಷೇತ್ರದಿಂದ ಎರಡನೇ ಪ್ರಯತ್ನದಲ್ಲಿ ಜಯಭೇರಿ ಬಾರಿಸಿದ್ದರು. ಇನ್ನು ನಿಪ್ಪಾಣಿ ಕ್ಷೇತ್ರದಿಂದ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್ ಅವರು, ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು.
ಕಳೆದ ಬಾರಿ ಹಾಗಿರಲಿ, ಈಬಾರಿ 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಲವಾರು ಮಹಿಳೆಯರ ಹೆಸರುಗಳು ಸ್ಪರ್ಧಿಸುವವರ ಪಟ್ಟಿಯಲ್ಲಿ ಈಗಾಗಲೆ ರಾರಾಜಿಸಲು ಆರಂಭಿಸಿವೆ. ಮಾಳವಿಕಾ ಅವಿನಾಶ್, ಅನುಪಮಾ ಶೆಣೈ, ಟಿಕೆಟ್ ಸಿಕ್ಕರೆ ನಾನು ಒಂದು ಕೈ ನೋಡಿಬಿಡುತ್ತೇನೆ ಎಂದು ನಟಿ ಭಾವನಾ ಕೂಡ ಚಿತ್ರದುರ್ಗದಿಂದ ಸಿದ್ಧವಾಗಿದ್ದಾರೆ.
ಚುನಾವಣೆಯಲ್ಲೂ ಮಹಿಳೆಯರು ಇದ್ದರೇನೇ ಸ್ಪರ್ಧೆಗೂ ಒಂದು ಕಳೆ. ಕಳೆದ ಬಾರಿ ಮಹಿಳಾ ಅಭ್ಯರ್ಥಿಗಳಲ್ಲಿ ಪ್ರಮುಖವಾಗಿ ಗೆದ್ದವರು, ಸೋತವರ ಪಟ್ಟಿ ಇಲ್ಲಿದೆ. ಅವರು ಗೆದ್ದ ಅಥವಾ ಸೋತ ಮತಗಳ ಅಂತರವನ್ನೂ ಇನ್‌ಫೋಗ್ರಾಫಿಕ್ಸ್ ನಲ್ಲಿ ನೀಡಲಾಗಿದೆ.













Click it and Unblock the Notifications