ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ಚಿಕ್ಕಬಳ್ಳಾಪುರದಲ್ಲಿ ಲಘು ಭೂಕಂಪ, ಮಾಹಿತಿ

|
Google Oneindia Kannada News

ಚಿಕ್ಕಬಳ್ಳಾಪುರ, ಡಿಸೆಂಬರ್ 22: ಚಿಕ್ಕಬಳ್ಳಾಪುರದಲ್ಲಿ ಡಿಸೆಂಬರ್ 22ರಂದು ಬೆಳಗ್ಗೆ ಲಘು ಭೂಕಂಪ ಸಂಭವಿಸಿದೆ. ಮಂಡಿಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2.9 ಮತ್ತು ಭೋಗಪರ್ತಿ ಗ್ರಾಮದ ಬಳಿ 3.0 ತೀವ್ರತೆಯ ಸಣ್ಣ ಪ್ರಮಾಣದ ಭೂಕಂಪವಾಗಿದೆ. "ಜನರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ" ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್. ಹೇಳಿದ್ದಾರೆ.

ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್‌ಸಿಎಸ್‌) ಈ ಕುರಿತು ಟ್ವೀಟ್ ಮಾಡಿದೆ, 3.1 ತೀವ್ರತೆಯ ಭೂಕಂಪನ ಡಿಸೆಂಬರ್ 22ರಂದು ಬೆಳಗ್ಗೆ 7.09ರ ವೇಳೆಗೆ ಸಂಭವಿಸಿದೆ. ಬೆಂಗಳೂರಿನ ಉತ್ತರ ಈಶಾನ್ಯ ಭಾಗದ 70 ಕಿ. ಮೀ. ದೂರದಲ್ಲಿ 11 ಕಿ. ಮೀ. ಆಳದಲ್ಲಿ ಭೂಕಂಪ ಉಂಟಾಗಿದೆ ಎಂದು ಹೇಳಿದೆ.

7.14ರ ವೇಳೆಗೆ ಸಂಭವಿಸಿದ ಭೂಕಂಪನದ ಕೇಂದ್ರ ಬಿಂದು ಅಡ್ಡಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೋಗಪರ್ತಿ ಗ್ರಾಮವಾಗಿದೆ. ಕೆಎಸ್‌ಎನ್‌ಡಿಎಂಸಿ ವರದಿ ಪ್ರಕಾರ ಇಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ. ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಯ ಬಂಡಹಳ್ಳಿ ಗ್ರಾಮ ಮತ್ತು ಆರೂರು ಗ್ರಾಮ ಪಂಚಾಯತಿಯ ಭಾಗದಲ್ಲಿ ಭೂಕಂಪನ ಉಂಟಾಗಿದೆ.

 Infographics: Earthquakes Of Magnitude 3 Hit Chikkaballapura Near Bengaluru

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಗ್ರಾಮ ಪಂಚಾಯಿತಿ ಮೊದಲ ಭೂಕಂಪನದ ಕೇಂದ್ರ ಬಿಂದುವಾಗಿದೆ. ಕರ್ನಾಟಕದ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರ (KSNDMC) ಬಿಡುಗಡೆ ಮಾಡಿರುವ ವರದಿ ಪ್ರಕಾರ 2.9 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಮಂಡಿಕಲ್ ಗ್ರಾಮ ಪಂಚಾಯಿತಿಯ ಹೊಸಹಳ್ಳಿ ಗ್ರಾಮ ಹಾಗೂ ಅಡ್ಡಗಲ್ಲು ಗ್ರಾಮ ಪಂಚಾಯಿತಿಯ ದೊಡ್ಡಿಹಳ್ಳಿ ಗ್ರಾಮಗಳಲ್ಲಿ ಭೂಕಂಪ ಉಂಟಾಗಿದೆ.

ಭೂಕಂಪನದ ಕೇಂದ್ರ ಬಿಂದುವಿನಲ್ಲಿ ಕಂಪನದ ತೀವ್ರತೆಯು ಲಘು ಪ್ರಮಾಣದಲ್ಲಿತ್ತು. ಇದು ಗರಿಷ್ಠ 10-15 ಕಿಮೀ ದೂರದವರೆಗೂ ಕಂಪನದ ಅನುಭವ ಉಂಟುಮಾಡುತ್ತದೆ.

 Infographics: Earthquakes Of Magnitude 3 Hit Chikkaballapura Near Bengaluru

ಈ ಮಾದರಿಯ ಭೂಕಂಪನದಿಂದ ಲಘು ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವ ಆದರೂ, ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ಹೀಗಾಗಿ ತೀವ್ರತೆ ಕಡಿಮೆ ಪ್ರಮಾಣದಲ್ಲಿದ್ದು, ಅಪಾಯಕಾರಿಯಾಗಿಲ್ಲದೆ ಇರುವುದರಿಂದ ಸ್ಥಳೀಯರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.

ಪಾತ್ರೆಗಳು ಅಲುಗಾಡಿದವು ಎಂದು ದೊಡ್ಡಹಳ್ಳಿ ಗ್ರಾಮಸ್ಥರು ಹೇಳಿದ್ದಾರೆ. ಬಂಡಹಳ್ಳಿಯಲ್ಲಿ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ತಾಲೂಕಿನ ಶೆಟ್ಟಿಗೆರೆ, ಪಿಲ್ಲಗುಂಡ್ಲಹಳ್ಳಿ, ಬೈಯಪ್ಪನಹಳ್ಳಿ, ಆದನ್ನಗಾರಹಳ್ಳಿ, ರೆಡ್ಡಿಗೊಲ್ಲವಾರಹಳ್ಳಿ, ಪರೇಸಂದ್ರ ಗ್ರಾಮದ ಸುತ್ತ-ಮುತ್ತ ಸ್ಫೋಟದ ಸದ್ದು ಸಹ ಕೇಳಿ ಬಂದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

 Infographics: Earthquakes Of Magnitude 3 Hit Chikkaballapura Near Bengaluru

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿ, ಬೋಗೇನಹಳ್ಳಿ, ಭೋಗಪರ್ತಿ, ಹೊಸಹಳ್ಳಿ, ದೊಡ್ಡ ಹಳ್ಳಿ ಮುಂತಾದ ಕಡೆ ಎರಡು ಬಾರಿ ಲಘು ಭೂಕಂಪನ ಉಂಟಾಗಿದೆ ಎಂದು ವರದಿಯಾಗಿದೆ. ಭೂಕಂಪನದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

 Infographics: Earthquakes Of Magnitude 3 Hit Chikkaballapura Near Bengaluru

ಡಿ. 21ರ ರಾತ್ರಿ 2.38ರ ಸುಮಾರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್‌ಬ್ಲೇರ್‌ನ 172 ಕಿಮೀ ದೂರದಲ್ಲಿ 4.3 ತೀವ್ರತೆಯಲ್ಲಿ ಭೂಕಂಪ ಉಂಟಾಗಿದೆ. ಮಂಗಳವಾರ ಅರುಣಾಚಲ ಪ್ರದೇಶದ ಚಂಗ್ಲಾಂಗ್‌ನಲ್ಲಿ 4.3 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿತ್ತು.

English summary
Infographics, Chikkaballapura district in Karnataka was hit by two 3.0 magnitude earthquakes on Wednesday, December 22. Chikkaballapura district is located approximately 61 kilometers away from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X