Infographics: ಸೆಪ್ಟೆಂಬರ್ 25ರಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಾಗಿದೆ?
ನವದೆಹಲಿ, ಸೆಪ್ಟೆಂಬರ್ 25: ಭಾರತೀಯ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ ಆರಂಭದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ನಂತರ ನಿರಂತರ ಇಳಿಕೆ ದಾಖಲಿಸಿತ್ತು. ಸೆಪ್ಟೆಂಬರ್ 17ರಂದು ಕುಸಿತ ಕಂಡು, ಎರಡು ದಿನಗಳ ಹಿಂದಷ್ಟೆ ಏಕಾಏಕಿ ಏರಿಕೆಯಾಗಿತ್ತು.
ಮತ್ತೆ ಇಳಿದ ಚಿನ್ನದ ಬೆಲೆ ಶನಿವಾರ ಸ್ಥಿರತೆ ಕಾಯ್ದುಕೊಂಡಿದೆ. ದೆಹಲಿ, ಚೆನ್ನೈ ಹೊರತುಪಡಿಸಿ ಭಾರತದ ಬಹುಪಾಲು ನಗರಗಳಲ್ಲಿ ಸೆಪ್ಟೆಂಬರ್ 25ರಂದು ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.
ಶನಿವಾರ, ಸೆಪ್ಟೆಂಬರ್ 25ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 10 ಗ್ರಾಂ ಚಿನ್ನದ ಬೆಲೆ 2000 ರೂ ಇಳಿಕೆಯಾಗಿ 43,350 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 49,480 ರೂ ಆಗಿದೆ. ಬೆಂಗಳೂರು ನಗರದಲ್ಲಿ 10 ಗ್ರಾಂ ಚಿನ್ನದ ಬೆಲೆ 43,200 ರೂ ಇದ್ದು, ಅಪರಂಜಿ ಚಿನ್ನದ ಬೆಲೆ 47,130 ರೂ ಆಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ಕುಸಿದಿದ್ದು, ಬೆಲೆ ಇಳಿಕೆ ನಿರಂತರವಾಗಿದೆ. ಹಬ್ಬದ ಸಮಯವಾಗಿದ್ದರೂ ಚಿನ್ನದ ಖರೀದಿ ತಗ್ಗಿರುವುದು ಕಂಡುಬಂದಿದೆ. ದೇಶದಲ್ಲಿ ಚಿನ್ನದ ಬೆಲೆ ಕುಸಿತಕ್ಕೆ ಹಲವು ಕಾರಣಗಳಿವೆ. ಕೊರೊನಾ ಸೋಂಕಿನಿಂದಾಗಿ ಹಲವೆಡೆ ಹೇರಿರುವ ನಿರ್ಬಂಧಗಳು, ದೇಶದಲ್ಲಿ ಕುಸಿದಿರುವ ಆರ್ಥಿಕತೆ, ಜನರ ಹಣಕಾಸಿನ ಸ್ಥಿತಿಗತಿ ಚಿನ್ನದ ವಹಿವಾಟಿನ ಮೇಲೆ ಪರಿಣಾಮ ಬೀರಿರುವ ಅಂಶಗಳಾಗಿವೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.56ರಷ್ಟು ಏರಿಕೆಯಾಗಿ 1,755.83 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.46% ಏರಿಕೆಯಾಗಿ 22.67 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. 1 ಕೆ.ಜಿ.ಗೆ ಸೆಪ್ಟೆಂಬರ್ 25ರ ದರದಂತೆ: ಚೆನ್ನೈ 60,600, ಹೈದರಾಬಾದ್‌ನಲ್ಲಿ 64,100 ರೂ, ಮುಂಬೈ, ದೆಹಲಿ, ಬೆಂಗಳೂರು, ಕೋಲ್ಕತ್ತಾದಲ್ಲಿ 59,900 ರೂ ನಷ್ಟಿದೆ. ಉಳಿದ ನಗರಗಳ ಧಾರಣೆ ವಿವರ ಮುಂದಿದೆ...
ಚಿನ್ನದ ವಹಿವಾಟು ಕುಸಿತ:
ಹಬ್ಬದ ಋತುವಾಗಿದ್ದರೂ ಹಲವು ಕಾರಣಗಳಿಂದಾಗಿ ಚಿನ್ನದ ವಹಿವಾಟು ಚೇತರಿಸಿಕೊಂಡಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಏರಿಳಿತಕ್ಕೆ ಪ್ರಮುಖ ಕಾರಣ ಯುರೋಪಿಯನ್ ಸೆಂಟ್ರಲ್ ಬ್ಯಾಂಕಿನ ಮುಂದಿನ ನಿರ್ಣಯದ ಬಗ್ಗೆ ಉಂಟಾಗಿರುವ ನಿರೀಕ್ಷೆ ಎನ್ನಬಹುದು. 30 ದಿನಗಳ ಹಿಂದೆ ಸ್ಪಾಟ್ ಗೋಲ್ಡ್ ಶೇ 0.36ರಷ್ಟು ಏರಿಕೆ ಕಂಡು 6.40 ಡಾಲರ್ ಮೌಲ್ಯ ಹೆಚ್ಚಿಸಿಕೊಂಡಿದೆ. ಇದೇ ಅವಧಿಯಲ್ಲಿ ಬೆಳ್ಳಿ ದರ ಶೇ 0.29ರಷ್ಟು ಇಳಿಕೆ ಕಂಡು 0.07 ಡಾಲರ್ ಮೌಲ್ಯ ವ್ಯತ್ಯಾಸ ಕಂಡಿದೆ. ಆಗಸ್ಟ್ ತಿಂಗಳಲ್ಲಿ ಚಿನ್ನದ ಆಮದು ಹೆಚ್ಚಿನ ಪ್ರಮಾಣದಲ್ಲಿದ್ದರೂ ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಹಿಗ್ಗಿಲ್ಲ.
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್, ಪುಣೆ, ಬರೋಡಾ, ಅಹಮದಾಬಾದ್, ಜೈಪುರ, ಲಕ್ನೋ, ಕೊಯಮತ್ತೂರು, ಮಧುರೈ, ವಿಜಯವಾಡ, ಪಾಟ್ನಾ, ನಾಗಪುರ, ಚಂಡೀಗಢ, ನಾಸಿಕ್, ಭುವನೇಶ್ವರ ಮುಂತಾದ ನಗರಗಳಲ್ಲಿ ಸೆಪ್ಟೆಂಬರ್ 25 ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ.
ಚಿತ್ರ ವಿನ್ಯಾಸ: ಭರತ್ ಎಚ್.ಸಿ.












Click it and Unblock the Notifications