Infographics: ಆಗಸ್ಟ್ 21ರಂದು ದೇಶದಲ್ಲಿ ಚಿನ್ನ ಬೆಳ್ಳಿ ಬೆಲೆ ಇಳಿಕೆ
ನವದೆಹಲಿ, ಆಗಸ್ಟ್ 21: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಹಲವು ಏರಿಳಿತಗಳಿಗೆ ಆಗಸ್ಟ್ ತಿಂಗಳು ಸಾಕ್ಷಿಯಾಗಿದೆ. ಆಗಸ್ಟ್ ತಿಂಗಳ ಆರಂಭದಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಕುಸಿತ ಕಂಡಿದ್ದು, ಹತ್ತು ದಿನಗಳ ನಂತರ ಮತ್ತೆ ಚೇತರಿಕೆ ಕಂಡಿದೆ.
ಆಗಸ್ಟ್ ಮಧ್ಯದಲ್ಲಿ ನಿರಂತರವಾಗಿ ಬೆಲೆ ಏರಿಳಿತ ಕಾಣುತ್ತಿದೆ. ಹಬ್ಬದ ಸಮಯ ಚಿನ್ನ ಖರೀದಿದಾರರಿಗೂ ಆಗಸ್ಟ್ ತಿಂಗಳು ಒಳ್ಳೆ ಅವಕಾಶ ಮಾಡಿಕೊಟ್ಟಿದೆ. ಶುಕ್ರವಾರ ಬೆಲೆ ಏರಿಕೆ ಮತ್ತೆ ಶನಿವಾರ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್‌ನಲ್ಲಿ ಬೆಲೆ ಇಳಿಕೆಯಾಗಿದೆ.
ದೇಶದ ರಾಜಧಾನಿ ನವದೆಹಲಿಯಲ್ಲಿ ಶನಿವಾರ, ಆಗಸ್ಟ್ 21ರಂದು 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 46,390 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 50,610 ರೂ ಆಗಿದೆ. ಬೆಂಗಳೂರು ನಗರದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 44,150 ರೂ ಹಾಗೂ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 48,170 ರೂ ಆಗಿದೆ.
ಬೆಳ್ಳಿ ಬೆಲೆಯಲ್ಲಿಯೂ ಗಣನೀಯ ಇಳಿಕೆ ಕಂಡುಬಂದಿದೆ. ಚಿನ್ನದ ಬೆಲೆ ಏರಿಕೆಯಾದರೂ ಬೆಳ್ಳಿ ಬೆಲೆಯಲ್ಲಿ ನಿರಂತರ ಕುಸಿತ ದಾಖಲಾಗಿದೆ. ಶನಿವಾರದಂದು ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್‌ನಲ್ಲಿ ಒಂದು ಕೆ.ಜಿ. ಬೆಳ್ಳಿಗೆ 61,700 ರೂ, ಚೆನ್ನೈನಲ್ಲಿ 66,600 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.15% ರಷ್ಟು ಏರಿಕೆಯಾಗಿ 1,781.77 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.87%ರಷ್ಟು ಇಳಿಕೆಯಾಗಿ 23.02 ಯುಎಸ್ ಡಾಲರ್ ಆಗಿದೆ.
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಕಳೆದ ತ್ರೈಮಾಸಿಕದಲ್ಲಿ ಚಿನ್ನಕ್ಕೆ ಬೇಡಿಕೆ ಹೀಗಿತ್ತು...
ಏಪ್ರಿಲ್ ಮತ್ತು ಜೂನ್ ನಡುವೆ, ಗ್ರಾಹಕರ ಚಿನ್ನದ ಖರೀದಿ ಸಕಾರಾತ್ಮಕವಾಗಿವೆ. ಚಿಲ್ಲರೆ ಹೂಡಿಕೆದಾರರು ಅತಿಯಾಗಿ ಖರೀದಿಸಿದ ಚಿನ್ನದ ಉತ್ಪನ್ನಗಳಲ್ಲಿ ಚಿನ್ನದ ಬಾರ್‌ಗಳು ಮತ್ತು ನಾಣ್ಯಗಳು ಪ್ರಮುಖವಾದವು. ಭಾರತದಲ್ಲಿ ಮೂರು ತಿಂಗಳ ಅವಧಿಯಲ್ಲಿ 243.8 ಟನ್ ಚಿನ್ನ ಖರೀದಿಸಲಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಸತತ ನಾಲ್ಕನೇ ತ್ರೈಮಾಸಿಕ ಲಾಭ ಕಂಡಿದೆ. ಈ ನಡುವೆ ಗ್ರಾಹಕರು ಒಟ್ಟು 390.7ಟನ್ ತೂಕದ ಚಿನ್ನದ ಆಭರಣಗಳನ್ನು 390 ಖರೀದಿಸಿದ್ದಾರೆ . ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.60ರಷ್ಟು ಹೆಚ್ಚಾಗಿದೆ.
ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್, ಪುಣೆ, ಬರೋಡಾ, ಅಹಮದಾಬಾದ್, ಜೈಪುರ, ಲಕ್ನೋ, ಕೊಯಮತ್ತೂರು, ಮಧುರೈ, ವಿಜಯವಾಡ, ಪಾಟ್ನಾ, ನಾಗಪುರ, ಚಂಡೀಗಢ,ನಾಸಿಕ್, ಭುವನೇಶ್ವರ ಮುಂತಾದ ನಗರಗಳಲ್ಲಿ ಆಗಸ್ಟ್ 21ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ...
ಚಿತ್ರ ವಿನ್ಯಾಸ: ಭರತ್ ಎಚ್.ಸಿ.
-
Gold Price Update: ಆಭರಣಪ್ರಿಯರೇ ಗಮನಿಸಿ, ಅಕ್ಷಯ ತೃತೀಯ ಮುನ್ನವೇ ಗಗನಕ್ಕೇರಿದ ಚಿನ್ನದ ದರ -
Akshaya Tritiya Special: ಅಕ್ಷಯ ತೃತೀಯ ಸ್ಪೆಷಲ್: ಪುರುಷರ ಚಿನ್ನದ ಆಭರಣಗಳಲ್ಲಿ ಹೊಸ ಟ್ರೆಂಡ್ಸ್ ವಿವರ -
ಪೆಟ್ರೋಲ್ ಪ್ರತಿ ಲೀಟರ್ಗೆ 18 ರೂ, ಡೀಸೆಲ್ 35 ರೂಪಾಯಿ ದರ ಹೆಚ್ಚಳ ಸಾಧ್ಯತೆ: ಭಾರತೀಯರಲ್ಲಿ ಗಾಬರಿ ಹುಟ್ಟಿಸಿದೆ ಈ ಲೆಕ್ಕಾಚಾರ -
Gold: ಹಟ್ಟಿ ಚಿನ್ನದ ಗಣಿ ಐತಿಹಾಸಿಕ ಸಾಧನೆ, ದಾಖಲೆ ಮಟ್ಟದ ಚಿನ್ನ ಉತ್ಪಾದನೆ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ? ಇಲ್ಲಿದೆ ಏಪ್ರಿಲ್ 13ರ ದರಪಟ್ಟಿ -
Akshaya Tritiya 2026: ಅಕ್ಷಯ ತೃತೀಯ ವಿಶೇಷ: ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಒಪ್ಪುವ ಟಾಪ್ 5 ಆಭರಣಗಳ ಬಗ್ಗೆ ತಿಳಿಯಿರಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ












Click it and Unblock the Notifications