ಅ.18ರಂದು ಚಿನ್ನದ ಬೆಲೆ ಯಾವ ನಗರದಲ್ಲಿ ಸ್ಥಿರ? ಎಲ್ಲಿ ಏರಿಕೆ?
ನವದೆಹಲಿ, ಅಕ್ಟೋಬರ್ 18: ದೇಶದ ಹಲವೆಡೆ ಕೋವಿಡ್ 19 ನಿರ್ಬಂಧ ಸಡಿಲಗೊಳಿಸಲಾಗುತ್ತಿದ್ದು, ವಾರಾಂತ್ಯದ ಕರ್ಫ್ಯೂ ಕೂಡಾ ತೆರವುಗೊಂಡಿದ್ದು, ದಸರಾ ಹಬ್ಬದ ಋತುವಿನಲ್ಲಿ ಚಿನಿವಾರ ಪೇಟೆಯಲ್ಲಿ ವಹಿವಾಟಿನಲ್ಲಿ ಒಂದಷ್ಟು ಏರಿಳಿತ ಕಾಣಲಾಯಿತು.ಆದರೆ, ಕೆಲವೆಡೆ ವಹಿವಾಟು ಹೆಚ್ಚಿನ ಪ್ರಗತಿ ಕಾಣುತ್ತಿಲ್ಲ. ಅಕ್ಟೋಬರ್ 18ರಂದು ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಏರಿಳಿತವಾಗಿದ್ದು, ದೇಶದ ಪ್ರಮುಖ ನಗರದಲ್ಲಿ ಬೆಲೆ ಎಷ್ಟಿದೆ ಎಂಬುದರ ಸಚಿತ್ರ ವರದಿ ಇಲ್ಲಿದೆ.
ಎಂಸಿಎಕ್ಸ್ನಲ್ಲಿ ಚಿನ್ನದ ದರ ದಿನದ ವಹಿವಾಟಿನ ಅಂತ್ಯಕ್ಕೆ ಪ್ರತಿ 10 ಗ್ರಾಂಗೆ ಏರಿಕೆಯಾಗಿ 47,263ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ತಗ್ಗಿ 63,265ರು ನಷ್ಟಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.30ರಷ್ಟು ಇಳಿಕೆಯಾಗಿ 1,765.72ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.51ರಷ್ಟು ಇಳಿಕೆಯಾಗಿ 23.24 ಯುಎಸ್ ಡಾಲರ್ ಆಗಿದೆ.
ಕಳೆದ 30 ದಿನಗಳಲ್ಲಿ ಸ್ಪಾಟ್ ಗೋಲ್ಡ್ ಗರಿಷ್ಠ 1803.78 ಡಾಲರ್ ಹಾಗೂ ಕನಿಷ್ಠ 1728.92 ಡಾಲರ್ ತಲುಪಿತ್ತು. ಇದೇ ಅವಧಿಯಲ್ಲಿ ಬೆಳ್ಳಿ ದರ ಗರಿಷ್ಠ 23.90 ಡಾಲರ್ ಹಾಗೂ ಕನಿಷ್ಠ 21.57 ಡಾಲರ್ ಮುಟ್ಟಿತ್ತು.
ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್, ಪುಣೆ, ಬರೋಡಾ, ಅಹಮದಾಬಾದ್, ಜೈಪುರ, ಲಕ್ನೋ, ಕೊಯಮತ್ತೂರು, ಮಧುರೈ, ವಿಜಯವಾಡ, ಪಾಟ್ನಾ, ನಾಗಪುರ, ಚಂಡೀಗಢ, ನಾಸಿಕ್, ಭುವನೇಶ್ವರ ಮುಂತಾದ ನಗರಗಳಲ್ಲಿ ಅಕ್ಟೋಬರ್ 18ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಏರಿಳಿತ
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಏರಿಳಿತ ಪ್ರಮುಖ ಕಾರಣ ಯುರೋಪಿಯನ್ ಸೆಂಟ್ರಲ್ ಬ್ಯಾಂಕಿನ ಮುಂದಿನ ನಿರ್ಣಯದ ಬಗ್ಗೆ ಉಂಟಾಗಿರುವ ನಿರೀಕ್ಷೆ ಎನ್ನಬಹುದು, ಅ.18ರಂದು ಬೆಳಗ್ಗೆ ಎಂಸಿಎಕ್ಸ್ನಲ್ಲಿ 47,220ರು ನಂತೆ ವಹಿವಾಟು ಆರಂಭಿಸಿ ಹಳದಿ ಲೋಹ ದಿನದ ಅಂತ್ಯಕ್ಕೆ ಸ್ವಲ್ಪ ಚೇತರಿಕೆ ಕಂಡಿದೆ. ಬೆಳ್ಳಿ ಆರಂಭದಲ್ಲಿ 63,235ರು ನಂತೆ ಆರಂಭವಾಗಿ ದಿನದ ಅಂತ್ಯಕ್ಕೆ ಏರಿಕೆಯಾಗಿದೆ.

ಚಿನ್ನದ ಏರಿಳಿತಕ್ಕೆ ಕಾರಣ
ಜಾಗತಿಕ ರಾಜಕೀಯ ವಿದ್ಯಮಾನ, ಡಾಲರ್ ಮೌಲ್ಯ ಏರಿಕೆ, ಕೊರೊನಾ ಲಸಿಕೆ ಅಭಿಯಾನ, ಕೊರೊನಾ ಲಾಕ್ ಡೌನ್, ಹವಾಮಾನ ವೈಪರೀತ್ಯ, ಜಾಗತಿಕ ಆರ್ಥಿಕ ಚೇತರಿಕೆ, ಹಲವು ಪ್ರಮುಖ ಬ್ಯಾಂಕುಗಳ ಆರ್ಥಿಕ ನೀತಿ ಎಲ್ಲವೂ ಚಿನ್ನದ ಏರಿಳಿತಕ್ಕೆ ಕಾರಣವಾಗಿವೆ ಎಂದು ಕೋಟಕ್ ಸೆಕ್ಯುರಿಟೀಸ್ ಉಪಾಧ್ಯಕ್ಷ ರವೀಂದ್ರ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಚಿನ್ನದ ಆಮದು ಹೆಚ್ಚಿನ ಪ್ರಮಾಣದಲ್ಲಿದ್ದರೂ ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಹಿಗ್ಗಿಲ್ಲ, ಹಬ್ಬದ ಋತುವಿನಲ್ಲಿ ಹೆಚ್ಚಿನ ಹೂಡಿಕೆ, ವ್ಯವಹಾರದ ನಿರೀಕ್ಷೆಯಂತೂ ಇದ್ದೇ ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ ದರ
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 100 ರು ಏರಿಕೆಯಾಗಿ 44,300ರು ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 120 ರು ಏರಿಕೆಯಾಗಿ 48,330 ರು ನಷ್ಟಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ಏರಿಕೆಯಾಗಿ 1. ಕೆ.ಜಿಗೆ: ಚೆನ್ನೈ, ಹೈದರಾಬಾದ್ನಲ್ಲಿ 67,500ರು, ಮುಂಬೈ, ದೆಹಲಿ, ಬೆಂಗಳೂರು ಪ್ರತಿ 1 ಕೆ.ಜಿಗೆ 63,600ರು ನಷ್ಟಿದೆ. ಉಳಿದ ನಗರಗಳ ಧಾರಣೆ ವಿವರ ಇಲ್ಲಿದೆ (https://kannada.goodreturns.in/silver-rates/)

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
-
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
Arecanut Price: ಶಿವಮೊಗ್ಗ ಮಾರುಕಟ್ಟೆಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾರ್ಚ್ 23ರ ದರಪಟ್ಟಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications