Get Updates
Get notified of breaking news, exclusive insights, and must-see stories!

Infographics: ಅಕ್ಟೋಬರ್ 23 ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ ಏರಿಳಿತ

ನವದೆಹಲಿ, ಅಕ್ಟೋಬರ್ 23: ದೇಶದಲ್ಲಿ ಅಕ್ಟೋಬರ್ 23ರಂದು ಶನಿವಾರ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಏರಿಳಿತ ಕಂಡಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ, ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಜಾಗತಿಕ ರಾಜಕೀಯ ವಿದ್ಯಮಾನ, ಡಾಲರ್ ಮೌಲ್ಯ ಏರಿಕೆ, ಕೊರೊನಾ ಲಸಿಕೆ ಅಭಿಯಾನ, ಕೊರೊನಾ ಲಾಕ್ ಡೌನ್, ಹವಾಮಾನ ವೈಪರೀತ್ಯ, ಜಾಗತಿಕ ಆರ್ಥಿಕ ಚೇತರಿಕೆ, ಹಲವು ಪ್ರಮುಖ ಬ್ಯಾಂಕುಗಳ ಆರ್ಥಿಕ ನೀತಿ ಎಲ್ಲವೂ ಚಿನ್ನದ ಏರಿಳಿತಕ್ಕೆ ಕಾರಣವಾಗಿವೆ ಎಂದು ಕೋಟಕ್ ಸೆಕ್ಯುರಿಟೀಸ್ ಉಪಾಧ್ಯಕ್ಷ ರವೀಂದ್ರ ರಾವ್ ಅಭಿಪ್ರಾಯಪಟ್ಟಿದ್ದಾರೆ.

Gold And Silver Rate Decreased In Indias Major Cities On October 23 2021

ಸೆಪ್ಟೆಂಬರ್ ತಿಂಗಳಲ್ಲಿ ಚಿನ್ನದ ಆಮದು ಹೆಚ್ಚಿನ ಪ್ರಮಾಣದಲ್ಲಿದ್ದರೂ ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಹಿಗ್ಗಿಲ್ಲ, ಹಬ್ಬದ ಋತುವಿನಲ್ಲಿ ಹೆಚ್ಚಿನ ಹೂಡಿಕೆ, ವ್ಯವಹಾರದ ನಿರೀಕ್ಷೆಯಂತೂ ಇದ್ದೇ ಇದೆ.

ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್, ಪುಣೆ, ಬರೋಡಾ, ಅಹಮದಾಬಾದ್, ಜೈಪುರ, ಲಕ್ನೋ, ಕೊಯಮತ್ತೂರು, ಮಧುರೈ, ವಿಜಯವಾಡ, ಪಾಟ್ನಾ, ನಾಗಪುರ, ಚಂಡೀಗಢ, ನಾಸಿಕ್, ಭುವನೇಶ್ವರ ಮುಂತಾದ ನಗರಗಳಲ್ಲಿ ಅಕ್ಟೋಬರ್ 23ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ.

22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,450 ರೂ ಆಗಿದ್ದು, 10 ರೂ. ಕಡಿಮೆಯಾಗಿದೆ. ಇನ್ನು 24 ಕ್ಯಾರೆಟ್‌ನ ಅಪರಂಜಿ ಚಿನ್ನ 47,450 ರೂ. ಆಗಿದ್ದು 10 ರೂ. ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 44,750 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 48,820 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,700 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 50,950 ರೂ. ಇದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು.

ವಿಶ್ವ ಚಿನ್ನ ಪರಿಷತ್ತು, ಭಾರತೀಯ ಚಿನ್ನ ಮಾರುಕಟ್ಟೆಯ ಆಳ - ವಿಸ್ತೃತ ವಿಶ್ಲೇಷಣೆಯ ಸರಣಿಯ ಮೊದಲ ಕಂತಾದ 'ಭಾರತೀಯ ಚಿನ್ನ ಬೇಡಿಕೆಯ ಚಾಲಕರು' ಎಂಬ ವರದಿಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ.

ಎಕನೋಮೆಟ್ರಿಕ್‌ ಮಾದರಿಯನ್ನು ಬಳಸಿ ತಯಾರಾಗಿರುವ ಈ ವರದಿ, 1990 ರಿಂದ 2020 ರವರೆಗಿನ ಮೂರು ದಶಕಗಳ ವಾರ್ಷಿಕ ದತ್ತಾಂಶಗಳ ಮೇಲೆ ಬೆಳಕು ಚೆಲ್ಲಿದ್ದು, ಭಾರತದ ಚಿನ್ನದ ಬೇಡಿಕೆಯ ಮೇಲಿನ ಕೆಲ ಪ್ರಮುಖ ಪ್ರಭಾವಗಳ ಕುರಿತು ವಿಶ್ಲೇಷಿಸಿದೆ.

ಭಾರತದಲ್ಲಿ ಹೆಚ್ಚು ಜನಸಂಖ್ಯೆ ಇರುವ ಹಾಗೆ ಆಭರಣ ಪ್ರಿಯರ ಜನಸಂಖ್ಯೆಯೂ ಕಡಿಮೆ ಏನಿಲ್ಲ. ಈ ಹಿನ್ನೆಲೆ ಆಪತ್ಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 48 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಈ ವರದಿಯು ಪ್ರಮಾಣ ಹಾಗೂ ಗುಣಮಟ್ಟ ಎರಡೂ ದೃಷ್ಟಿಕೋನದಿಂದ ಚಿನ್ನದ ಬೇಡಿಕೆಯನ್ನು ವಿಶ್ಲೇಷಿಸಿದೆ. ಭಾರತದಲ್ಲಿ ದೀರ್ಘಾವಧಿ ಹಾಗೂ ಅಲ್ಪಾವಧಿಯ ಚಿನ್ನದ ಬೇಡಿಕೆಯ ಸಮಗ್ರ ವಿಶ್ಲೇಷಣೆಯ ಜೊತೆಗೆ, ಈ ಬೇಡಿಕೆಯನ್ನು ರೂಪಿಸುವ ಜನಸಂಖ್ಯಾ ಶಾಸ್ತ್ರ, ಸಾಮಾಜಿಕ - ಆರ್ಥಿಕ ಮತ್ತು ಸಂಬಂಧಿಸಿದ ಬೆಳವಣಿಗೆಗಳನ್ನು ಪರಿಶೀಲಿಸುತ್ತದೆ. ಇದು ಭವಿಷ್ಯದ ಬೇಡಿಕೆಯ ಏರುಪೇರಿನ ಮೇಲೆ ಕೂಡ ಬೆಳಕು ಚೆಲ್ಲುತ್ತದೆ.

ವೈರಸ್ ಹೆಚ್ಚಾದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್ ಎಸ್ಟೇಟ್ ಸೇರಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಲಾಕ್‌ಡೌನ್‌ ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಚಿನ್ನ ಖರೀದಿಯ ವಿಚಾರದಲ್ಲಿ ಜಿಎಸ್‌ಟಿ ಅಥವಾ ಸೇವಾ ತೆರಿಗೆ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ.

ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ದರ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 23: 44, 750 ರೂ ,( 200 ರೂ ಏರಿಕೆ) 48,820 ರೂ(200 ರೂ ಏರಿಕೆ)
ಅಕ್ಟೋಬರ್ 22: 44, 550 ರೂ, 48,600 ರೂ(-)
ಅಕ್ಟೋಬರ್ 21: 44, 550 ರೂ, 48,600ರೂ
ಅಕ್ಟೋಬರ್ 20:44, 300 ರೂ, 48,330 ರೂ(-)
ಅಕ್ಟೋಬರ್ 19:44, 300 ರೂ, 48,330 ರೂ
ಅಕ್ಟೋಬರ್ 18:44, 300 ರೂ, 48,330 ರೂ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+