Infographics; ಮೈಸೂರಿನಿಂದ ಸಂಚರಿಸುವ ವಿಮಾನಗಳ ವೇಳಾಪಟ್ಟಿ
ಮೈಸೂರು, ಮೇ 06; ಸಾಂಸ್ಕೃತಿಕ ನಗರಿ ಮೈಸೂರಿನಿಂದ ಹಲವು ವಿಮಾನಗಳು ಹಾರಾಟ ನಡೆಸುತ್ತಿವೆ. ಇದರಿಂದಾಗಿ ಪ್ರವಾಸೋಸದ್ಯಮಕ್ಕೆ ಉತ್ತೇಜನ ಸಿಕ್ಕಿದ್ದು, ದೇಶ-ವಿದೇಶದ ಪ್ರವಾಸಿಗರು ಭೇಟಿ ನೀಡಲು ಅನುಕೂಲವಾಗಿದೆ.
ಮೈಸೂರು ಮತ್ತು ಉತ್ತರ ಕರ್ನಾಟಕ ಹುಬ್ಬಳ್ಳಿ ನಡುವೆ ಸಂಪರ್ಕ ಕಲ್ಪಿಸುವ ವಿಮಾನಕ್ಕೆ ಇದೇ ವಾರ ಚಾಲನೆ ಸಿಕ್ಕಿದೆ. ರಾಜ್ಯ, ದೇಶದ ವಿವಿಧ ನಗರಗಳಿಂದ ಈಗಾಗಲೇ ಮೈಸೂರಿಗೆ ವಿಮಾನ ಸೇವೆ ಇದೆ.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರು, ಕೊಚ್ಚಿನ್, ಗೋವಾ, ಹೈದರಾಬಾದ್, ಚೆನ್ನೈ ಮುಂತಾದ ನಗರಗಳಿಗೆ ವಿಮಾನ ಸೇವೆ ಇದೆ. ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ವಾರದ 6 ದಿನ, ವಾರದ ಎಲ್ಲಾ ದಿನ, ವಾರದಲ್ಲಿ ಮೂರು ದಿನ ಹೀಗೆ ವಿವಿಧ ವಿಮಾನಯಾನ ಸಂಸ್ಥೆಗಳು ಮೈಸೂರಿನಿಂದ ಸೇವೆಯನ್ನು ನೀಡುತ್ತಿವೆ. ಈ ಮೂಲಕ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಲು ಸಹಾಯಕವಾಗಿವೆ.

ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಮಾಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆ ಆಗಿತ್ತು. ಕರ್ನಾಟಕ ಸರ್ಕಾರ ಈ ಪ್ರಸ್ತಾವನೆಗೂ ಒಪ್ಪಿಗೆ ನೀಡಿದೆ. ರನ್ ವೇ ವಿಸ್ತರಣೆ ಭೂ ಸ್ವಾಧೀನಕ್ಕೆ 319 ಕೋಟಿ ರೂ. ಅನುದಾನ ನೀಡಿದೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅನುದಾನ ಬಿಡುಗಡೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ, "ರನ್‌ವೇ ವಿಸ್ತರಣೆ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ 319 ಕೋಟಿ ರೂ. ಬಿಡುಗಡೆ ಮಾಡಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ" ಎಂದು ಹೇಳಿದ್ದಾರೆ.
ಮೈಸೂರು ನಗರದಿಂದ ಹಾರಾಟ ನಡೆಸುವ ವಿಮಾನಗಳ ವೇಳಾಪಟ್ಟಿ ಇಲ್ಲಿದೆ. ವಿವಿಧ ನಗರಗಳಿಗೆ ಮೈಸೂರಿನಿಂದ ಸಂಚಾರ ನಡೆಸುವವರು, ಮೈಸೂರಿನಿಂದ ಸಂಚಾರ ನಡೆಸುವ ಜನರಿಗೆ ಉಪಯೋಗವಾಗುವಂತೆ ವೇಳಾಪಟ್ಟಿಯ ವಿವರಗಳನ್ನು ಇಲ್ಲಿ ನೀಡಲಾಗಿದೆ.












Click it and Unblock the Notifications