ಕೋವಿಡ್ 19: ಭಾರತದ ಚೇತರಿಕೆ ಪ್ರಮಾಣ ಶೇ. 97.63%, ತಲುಪಿದೆ
ಬೆಂಗಳೂರು, ಆಗಸ್ಟ್ 23: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 212,371,596ಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು 190,391,455 ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 194,839,351 ಪ್ರಕರಣಗಳು ಮುಕ್ತಾಯಗೊಂಡಿವೆ.
2021ರ ಜೂನ್ 21ರಿಂದ ಸಾರ್ವತ್ರಿಕ ಕೋವಿಡ್-19 ಲಸಿಕೀಕರಣದ ಹೊಸ ಹಂತ ಆರಂಭವಾಗಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಕೋವಿಡ್-19 ಲಸಿಕೀಕರಣ ವ್ಯಾಪ್ತಿ ಮತ್ತು ವೇಗವನ್ನು ವೃದ್ಧಿಸಲು ಬದ್ಧವಾಗಿದೆ.
ಕಳೆದ 24 ಗಂಟೆಗಳಲ್ಲಿ 44,157 ರೋಗಿಗಳು ಚೇತರಿಸಿಕೊಳ್ಳುವುದರೊಂದಿಗೆ (ಸಾಂಕ್ರಾಮಿಕ ಆರಂಭವಾದ ನಂತರ) ಒಟ್ಟು ಸೋಂಕಿತರ ಪೈಕಿ ಈಗಾಗಲೇ 3,16,80,626. ಸೋಂಕಿತರು ಗುಣಮುಖರಾಗಿದ್ದಾರೆ. ಇದರಿಂದಾಗಿ ಕ್ರಮೇಣ ಭಾರತದ ಚೇತರಿಕೆ ಪ್ರಮಾಣ ಶೇ. 97.63%, ತಲುಪಿದ್ದು, ಇದು ಕಳೆದ 2020 ರ ಮಾರ್ಚ್ ನಿಂದೀಚೆಗೆ ಅತ್ಯಧಿಕವಾಗಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಹಾಗೂ ಸಹಭಾಗಿತ್ವದ ಪ್ರಯತ್ನಗಳಿಂದಾಗಿ ಸತತ 57 ದಿನಗಳಿಂದ ಪ್ರತಿ ದಿನ ಹೊಸ ಪ್ರಕರಣಗಳ ಸಂಖ್ಯೆ 50,000ಕ್ಕಿಂತಲೂ ಕಡಿಮೆ ಇದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 25,072 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದು ಕಳೆದ 160 ದಿನಗಳಲ್ಲಿಯೇ ಅತಿ ಕಡಿಮೆ. ವಾರದ ಪಾಸಿಟಿವಿಟಿ ದರ ಇಳಿಕೆಯಾಗುತ್ತಿರುವುದು ಕಂಡುಬಂದಿದೆ. ವಾರದ ಪಾಸಿಟಿವಿಟಿ ದರ ಸದ್ಯ ಶೇ.1.91ರಷ್ಟಿದ್ದು, ಇದು ಕಳೆದ 59 ದಿನಗಳಲ್ಲಿ ಶೇ.3ಕ್ಕಿಂತ ಕಡಿಮೆಯಾಗಿದೆ. ದಿನದ ಪಾಸಿಟಿವಿಟಿ ದರ ಇಂದು ಶೇ1.94ರಷ್ಟಿದೆ. ದಿನದ ಪಾಸಿಟಿವಿಟಿ ದರ ಕಳೆದ 28 ದಿನಗಳಿಂದ ನಿರಂತರವಾಗಿ ಶೇ.3ಕ್ಕಿಂತ ಕಡಿಮೆ ಇದೆ ಮತ್ತು ಕಳೆದ 77 ದಿನಗಳಿಂದ ಶೇ.5ಕ್ಕಿಂತ ಕಡಿಮೆ ಮುಂದುವರಿದಿದೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್‌ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್10 ದೇಶಗಳ ವಿವರ (ಆಗಸ್ಟ್ 22) ಇಲ್ಲಿದೆ.

ಭಾರತದಲ್ಲಿ 24 ಗಂಟೆಗಳಲ್ಲಿ 44,103 ರೋಗಿಗಳು ಚೇತರಿಕೆ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 25, 420ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಒಟ್ಟಾರೆ ಸಂಖ್ಯೆಯು 32,453,540ಕ್ಕೇರಿದೆ. ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 434,898ಕ್ಕೆ ಏರಿಕೆಯಾಗಿದೆ, 31,680,626ಮಂದಿ ಚೇತರಿಕೆ ಹೊಂದಿದ್ದಾರೆ, ಕಳೆದ 24 ತಾಸುಗಳಲ್ಲೇ 44,103ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಚೇತರಿಕೆ ದರ ಒಟ್ಟಾರೆ 97.63%ಗೆ ಸುಧಾರಣೆ ಕಂಡಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.

ವಿಶ್ವದೆಲ್ಲೆಡೆ ಕೊವಿಡ್19 ಪ್ರಕರಣಗಳು
ಆಗಸ್ಟ್ 23ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 212,759,555 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 4,447,896ಕ್ಕೇರಿದೆ. ಒಟ್ಟಾರೆ, 190,391,455 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 17,920,204 ಸಕ್ರಿಯ ಪಾಸಿಟಿವ್ 112,001 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 194,839,351 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು
ಯುಎಸ್ಎ: 38,545,144ಪ್ರಕರಣಗಳು
ಭಾರತ: 32,449,306
ಬ್ರೆಜಿಲ್: 20,570,891
ರಷ್ಯಾ: 6,766,541
ಫ್ರಾನ್ಸ್: 6,619,611
ಯುಕೆ: 6,492,906
ಟರ್ಕಿ: 6,215,663
ಅರ್ಜೆಂಟೀನಾ: 5,133,831
ಕೊಲಂಬಿಯಾ: 4,889,537
ಸ್ಪೇನ್: 4,770,453

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 645,058
ಬ್ರೆಜಿಲ್: 574,574
ಭಾರತ: 434,784
ಮೆಕ್ಸಿಕೋ: 253,155
ರಷ್ಯಾ: 176,820
ಯುಕೆ: 131,640
ಇಟಲಿ: 128,751
ಕೊಲಂಬಿಯಾ: 124,216
ಫ್ರಾನ್ಸ್: 113,311
ಅರ್ಜೆಂಟೀನಾ: 110,352
Recommended Video

ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ
ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಭಾರತ: ಗುಣಮುಖರಾದವರ ಸಂಖ್ಯೆ: 31,680,626
ಯುಎಸ್ಎ: 30,472,804
ಬ್ರೆಜಿಲ್: 19,448,816
ಫ್ರಾನ್ಸ್: 6,065,321
ರಷ್ಯಾ: 6,034,867
ಟರ್ಕಿ: 5,708,549
ಯುಕೆ: 5,056,571
ಅರ್ಜೆಂಟೀನಾ: 4,814,020
ಕೊಲಂಬಿಯಾ: 4,718,500
ಇಟಲಿ: 4,220,924
(ಮಾಹಿತಿ ಕೃಪೆ: ವರ್ಲ್ಡ್‌ಮೀಟರ್)












Click it and Unblock the Notifications