ಕೊವಿಡ್ 19: ವಿಶ್ವದಲ್ಲಿ ಅತಿ ಹೆಚ್ಚು ಚೇತರಿಕೆ ಕಂಡ ಟಾಪ್ 10 ದೇಶಗಳು

ಬೆಂಗಳೂರು, ನ.19 : ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 5.6 ಕೋಟಿಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು, 39,496,039 ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 40,853,716 ಪ್ರಕರಣಗಳು ಮುಕ್ತಾಯಗೊಂಡಿವೆ. ಟಾಪ್ 10ರಲ್ಲಿರುವ ಎಲ್ಲಾ ದೇಶಗಳಲ್ಲಿ ಕನಿಷ್ಠ 10 ಲಕ್ಷ ಸೋಂಕಿತರಿದ್ದಾರೆ.

ಭಾರತದಲ್ಲಿ ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 8,958,484ಕ್ಕೇರಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 45,576 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿಗೆ 585ಜನರು ಬಲಿಯಾಗಿದ್ದು, ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 1,31,578ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ನವೆಂಬರ್ 19ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು

ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು

ನವೆಂಬರ್ 19ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 56,713,975ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 1,357,677ಕ್ಕೇರಿದೆ. ಒಟ್ಟಾರೆ, 39,496,039ಮಂದಿ ಗುಣಮುಖರಾಗಿದ್ದಾರೆ. ಒಟ್ಟು 15,860,259ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 101,351 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 40,853,716 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಯುಎಸ್ಎ: 11,876,240 ಪ್ರಕರಣಗಳು
ಭಾರತ: 8,960,098
ಬ್ರೆಜಿಲ್: 5,947,403
ಫ್ರಾನ್ಸ್: 2,065,138
ರಷ್ಯಾ: 2,015,608
ಸ್ಪೇನ್: 1,542,467
ಯುಕೆ: 1,430,341
ಅರ್ಜೆಂಟೀನಾ: 1,339,337
ಇಟಲಿ: 1,272,352
ಕೊಲಂಬಿಯಾ: 1,218,003

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 256,311
ಬ್ರೆಜಿಲ್: 167,497
ಭಾರತ: 131,639
ಮೆಕ್ಸಿಕೋ: 99,528
ಯುಕೆ: 53,274
ಇಟಲಿ: 47,217
ಫ್ರಾನ್ಸ್: 46,698
ಇರಾನ್: 43,417
ಸ್ಪೇನ್: 42,039
ಪೆರು: 35,402

ಗುಣಮುಖರಾದವರು ಟಾಪ್ 10 ದೇಶ

ಗುಣಮುಖರಾದವರು ಟಾಪ್ 10 ದೇಶ

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಭಾರತ: ಗುಣಮುಖರಾದವರ ಸಂಖ್ಯೆ: 8,383,602
ಯುಎಸ್ಎ: 7,168,482
ಬ್ರೆಜಿಲ್: 5,389,863
ರಷ್ಯಾ: 1,526,656
ಅರ್ಜೆಂಟೀನಾ: 1,156,474
ಕೊಲಂಬಿಯಾ: 1,125,184
ಪೆರು: 869,165
ಮೆಕ್ಸಿಕೋ: 762,025
ದಕ್ಷಿಣ ಆಫ್ರಿಕಾ: 701,534
ಇರಾನ್: 583,704

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+