ಕೊವಿಡ್ 19: ಅಮೆರಿಕದಲ್ಲಿ 50,369,285 ಸೋಂಕಿತರು, 6,442,094 ಚೇತರಿಕೆ

ಬೆಂಗಳೂರು, ನ.6: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 5 ಕೋಟಿಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು, 35,616,172 ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 36,874,109 ಪ್ರಕರಣಗಳು ಮುಕ್ತಾಯಗೊಂಡಿವೆ.

Recommended Video

      Joe Biden ಅಧ್ಯಕ್ಷರಾಗುತ್ತಿದ್ದ ಹಾಗೆಯೇ ಭಾರತೀಯರಿಗೆ ಸಂತಸದ ಸುದ್ದಿ | Oneindia Kannada

      ''ಅಮೆರಿಕದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ನೀಲನಕ್ಷೆ ರೂಪಿಸಲು ಪ್ರಮುಖ ವಿಜ್ಞಾನಿಗಳನ್ನು ಹಾಗೂ ತಜ್ಞರನ್ನೊಳಗೊಂಡ ತಂಡವೊಂದನ್ನು ಸೋಮವಾರ ಘೋಷಿಸಲಿದ್ದೇನೆ. 2021ರ ಜನವರಿ 20ರಿಂದ ಯೋಜನೆ ಅನುಷ್ಠಾನಕ್ಕೆ ಬರಲಿದೆ. ವಿಜ್ಞಾನದ ತಳಹದಿಯಲ್ಲೇ ಯೋಜನೆ ರೂಪಿಸಲಾಗುತ್ತದೆ'' ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

      ಅಮೆರಿಕದಲ್ಲಿ ಕೊರೊನಾ ನಿಯಂತ್ರಣ ಸಿಗದಂತೆ ಹಬ್ಬುತ್ತಿದೆ. ನವೆಂಬರ್ 8ರಂದು 10,185,012 ಸೋಂಕಿತರನ್ನು ಹೊಂದಿದ್ದು, 243,269 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರು ಹಾಗೂ ಸಾವಿನ ಸಂಖ್ಯೆಯಲ್ಲಿ ಯುಎಸ್ಎ ವಿಶ್ವದಲ್ಲೇ ಅಧಿಕವಾಗಿದೆ. 6,442,094 ಮಂದಿ ಗುಣಮುಖರಾಗಿದ್ದು, ಭಾರತ ಬಿಟ್ಟರೆ ಅಮೆರಿಕದಲ್ಲೇ ಚೇತರಿಕೆ ಕಂಡವರು ಹೆಚ್ಚು ಪ್ರಮಾಣದಲ್ಲಿದ್ದಾರೆ. ಸೋಂಕು ನಿಯಂತ್ರಣ ಜೊತೆಗೆ ಲಸಿಕೆ ಅಭಿವೃದ್ಧಿ ಬಗ್ಗೆ ಕಾರ್ಯಪಡೆ ನಿಗಾ ವಹಿಸಲಿದೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ನವೆಂಬರ್ 08ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

      ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು

      ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು

      ನವೆಂಬರ್ 08ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 50,369,285ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 1,257,937ಕ್ಕೇರಿದೆ. ಒಟ್ಟಾರೆ, 35,616,172 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 13,495,176 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 92,005 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 36,874,109ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

      ಯುಎಸ್ಎ: 10,185,012 ಪ್ರಕರಣಗಳು
      ಭಾರತ: 8,507,754
      ಬ್ರೆಜಿಲ್: 5,653,561
      ರಷ್ಯಾ: 1,774,334
      ಫ್ರಾನ್ಸ್: 1,748,705
      ಸ್ಪೇನ್: 1,388,411
      ಅರ್ಜೆಂಟೀನಾ: 1,236,851
      ಯುಕೆ: 1,171,441
      ಕೊಲಂಬಿಯಾ: 1,136,447
      ಮೆಕ್ಸಿಕೋ: 961,938

      ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು

      ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 241,026
      ಬ್ರೆಜಿಲ್: 162,286
      ಭಾರತ: 126,162
      ಮೆಕ್ಸಿಕೋ: 94,808
      ಯುಕೆ: 48,888
      ಇಟಲಿ: 41,063
      ಫ್ರಾನ್ಸ್: 40,169
      ಸ್ಪೇನ್: 38,833
      ಇರಾನ್: 38,291
      ಪೆರು: 34,840

      ಗುಣಮುಖರಾದವರು ಟಾಪ್ 10 ದೇಶ

      ಗುಣಮುಖರಾದವರು ಟಾಪ್ 10 ದೇಶ

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
      ಭಾರತ: ಗುಣಮುಖರಾದವರ ಸಂಖ್ಯೆ: 7,868,968
      ಯುಎಸ್ಎ: 6,442,094
      ಬ್ರೆಜಿಲ್: 5,064,344
      ರಷ್ಯಾ: 1,324,419
      ಅರ್ಜೆಂಟೀನಾ: 1,053,313
      ಕೊಲಂಬಿಯಾ: 1,029,082
      ಪೆರು: 843,600
      ಮೆಕ್ಸಿಕೋ: 710,940
      ದಕ್ಷಿಣ ಆಫ್ರಿಕಾ: 678,738
      ಚಿಲಿ: 495,852

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+