ಕೊವಿಡ್ 19 ಚೇತರಿಕೆ ಸಂಖ್ಯೆ: ಭಾರತವನ್ನು ಹಿಂದಿಕ್ಕಿದ ಅಮೆರಿಕ
ಬೆಂಗಳೂರು, ಡಿ.11: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 7 ಕೋಟಿಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು 49,319,292ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 50,911,478 ಪ್ರಕರಣಗಳು ಮುಕ್ತಾಯಗೊಂಡಿವೆ. ಕನಿಷ್ಠ9 ದೇಶಗಳಲ್ಲಿ 10 ಲಕ್ಷಕ್ಕೂ ಅಧಿಕ ಸೋಂಕಿತರಿದ್ದಾರೆ.
ಭಾರತದಲ್ಲಿ ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 97,96,770 ಕ್ಕೇರಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ29,398 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿಗೆ 414ಜನರು ಬಲಿಯಾಗಿದ್ದು, ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 1,42,186 ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ಡಿಸೆಂಬರ್11ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು
ಡಿಸೆಂಬರ್ 11ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 70,920,559ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 1,592,186ಕ್ಕೇರಿದೆ. ಒಟ್ಟಾರೆ, 49,319,292 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 20,009,081 ಸಕ್ರಿಯ ಪಾಸಿಟಿವ್ 106,606 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 50,911,478 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು
ಯುಎಸ್ಎ: 16,055,427ಪ್ರಕರಣಗಳು
ಭಾರತ: 9,802,741
ಬ್ರೆಜಿಲ್: 6,783,543
ರಷ್ಯಾ: 2,597,711
ಫ್ರಾನ್ಸ್: 2,337,966
ಯುಕೆ: 1,787,783
ಇಟಲಿ: 1,787,147
ಟರ್ಕಿ: 1,748,567
ಸ್ಪೇನ್: 1,734,386
ಅರ್ಜೆಂಟೀನಾ: 1,482,216

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 299,877
ಬ್ರೆಜಿಲ್: 179,801
ಭಾರತ: 142,259
ಮೆಕ್ಸಿಕೋ: 112,326
ಯುಕೆ: 63,082
ಇಟಲಿ: 62,626
ಫ್ರಾನ್ಸ್: 56,940
ಇರಾನ್: 51,727
ಸ್ಪೇನ್: 47,344
ಅರ್ಜೆಂಟೀನಾ: 40,431

ಗುಣಮುಖರಾದವರು ಟಾಪ್ 10 ದೇಶ
ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ : ಗುಣಮುಖರಾದವರ ಸಂಖ್ಯೆ: 9,338,872
ಭಾರತ: 9,295,596
ಬ್ರೆಜಿಲ್: 5,931,777
ರಷ್ಯಾ: 2,059,840
ಅರ್ಜೆಂಟೀನಾ: 1,318,187
ಕೊಲಂಬಿಯಾ: 1,296,420
ಟರ್ಕಿ: 1,154,333
ಇಟಲಿ: 1,027,994
ಜರ್ಮನಿ: 942,100
ಪೆರು: 914,600












Click it and Unblock the Notifications