ಕೊರೊನಾವೈರಸ್ ಸೋಂಕಿನಿಂದ ಯಾವ ದೇಶದಲ್ಲಿ ಎಷ್ಟು ಮಂದಿ ಗುಣಮುಖ?
ನವದೆಹಲಿ, ಆಗಸ್ಟ್ 26: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗುರುವಾರ ಒಂದೇ ದಿನ 46,164 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 34,159 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 607 ಜನರು ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4,36,365 ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಗುರುವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,25,58,530ಕ್ಕೆ ಏರಿಕೆಯಾಗಿದೆ. ಈವರೆಗೂ 3,17,88,440 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 3,33,725 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಕೊವಿಡ್-19 ಸೋಂಕಿನಿಂದ ಗುಣಮುಖರಾದವರ ಶೇಕಡಾವಾರು ಪ್ರಮಾಣ 97.63ರಷ್ಟಿದ್ದು, ಇದರ ಹೊರತಾಗಿ 3,33,725 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ವಿಶ್ವದಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣ
ಆಗಸ್ಟ್ 26ರ ಅಂಕಿ-ಅಂಶಗಳ ಪ್ರಕಾರ, ವಿಶ್ವದೆಲ್ಲೆಡೆ 21,51,80,084 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಸಾವಿನ ಸಂಖ್ಯೆ 4,483,081ಕ್ಕೇರಿದೆ. ಒಟ್ಟಾರೆ, 192,487,242 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 18,209,761 ಸಕ್ರಿಯ ಪ್ರಕರಣಗಳಿದ್ದು, 112,625 ಗಂಭೀರ ಪರಿಸ್ಥಿತಿಯಲ್ಲಿ ಸೋಂಕಿತರಿದ್ದಾರೆ. 192,487,242 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್‌ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್10 ದೇಶಗಳ ವಿವರ (ಆಗಸ್ಟ್ 24) ಇಲ್ಲಿದೆ.

ಕೊವಿಡ್-19 ಬಾಧಿತ ಟಾಪ್ 10 ದೇಶಗಳು
ಯುಎಸ್ಎ: 3,91,57,249
ಭಾರತ: 3,25,58,530
ಬ್ರೆಜಿಲ್: 2,06,45,537
ರಷ್ಯಾ: 68,04,910
ಫ್ರಾನ್ಸ್: 66,73,336
ಯುಕೆ: 65,90,747
ಟರ್ಕಿ: 62,73,681
ಅರ್ಜೆಂಟೀನಾ: 51,55,079
ಕೊಲಂಬಿಯಾ: 48,97,150
ಸ್ಪೇನ್: 48,15,205

ಕೊವಿಡ್-19 ಸಾವಿನ ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳು
ಯುಎಸ್ಎ: 6,49,680
ಬ್ರೆಜಿಲ್: 5,76,730
ಭಾರತ: 4,36,396
ಮೆಕ್ಸಿಕೋ: 2,55,452
ಪೆರು: 1,98,031
ರಷ್ಯಾ: 1,78,423
ಯುಕೆ: 1,32,003
ಇಟಲಿ: 1,28,914
ಇಂಡೋನೆಷ್ಯಾ: 1,29,293
ಕೊಲಂಬಿಯಾ: 1,24,474

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಭಾರತ: 3,17,88,440
ಯುಎಸ್ಎ: 3,06,78,283
ಬ್ರೆಜಿಲ್: 1,95,77,135
ರಷ್ಯಾ: 60,73,157,
ಟರ್ಕಿ: 57,56,406
ಯುಕೆ: 51,97,140
ಕೊಲಂಬಿಯಾ: 47,27,307
ಇಟಲಿ:42,37,758
ಸ್ಪೇನ್: 42,17,444
ಜರ್ಮನಿ: 37,14,400












Click it and Unblock the Notifications