ಕೊವಿಡ್ 19: 12,856,236 ಪ್ರಕರಣದಲ್ಲಿ 74 ಲಕ್ಷ ಮಂದಿ ಗುಣಮುಖ

ಬೆಂಗಳೂರು, ಜುಲೈ 12: ಜಾಗತಿಕ ಮಹಾಮಾರಿ ಕೊವಿಡ್19 ಸೋಂಕಿನಿಂದ ಸಾವು ನೋವಿನ ಇಂದಿನ ಲೆಕ್ಕಾಚಾರದ ಸಚಿತ್ರ ವರದಿ ಇಲ್ಲಿದೆ. ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಭಾರತ ಎಂಟೂವರೆ ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿದೆ.

ಇನ್ನೊಂದೆಡೆ ರಷ್ಯಾದಲ್ಲಿ ಸತತವಾಗಿ ಸರಾಸರಿ 6 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ರಷ್ಯಾದಲ್ಲಿ ಮರಣ ಪ್ರಮಾಣವೂ ಏರಿಕೆಯಾಗಿದೆ. ಸದ್ಯ 11 ಸಾವಿರಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ. ಭಾರತದಲ್ಲಿ ಸಾವಿನ ಸಂಖ್ಯೆ ಪ್ರಮಾಣದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ ಜುಲೈ 12ಕ್ಕೆ ಸಾವು ನೋವಿನ ಅಂಕಿ ಅಂಶ ಇಲ್ಲಿದೆ..

ಜುಲೈ 12ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 12,856,236 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 567,913ಕ್ಕೇರಿದೆ. ಒಟ್ಟಾರೆ, 7,487,895ಮಂದಿ ಗುಣಮುಖರಾಗಿದ್ದಾರೆ. ಒಟ್ಟು 4,800,428 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 58,773 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.

ಮೆಕ್ಸಿಕೋದಲ್ಲಿ ಒಂದೇ ದಿನ 6,094 ಪ್ರಕರಣ ಕಾಣಿಸಿಕೊಂಡು ಟಾಪ್ 10 ಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದ್ದರೆ, ಟಾಪ್ 10 ಸ್ಥಾನದಲ್ಲಿ ದಕ್ಷಿಣ ಆಫ್ರಿಕಾವಿದೆ. ಇಟಲಿ ಕೆಳಗೆ ಕುಸಿದಿದ್ದು, ಟಾಪ್ 11ಕ್ಕೆ ಇರಾನ್ ಕ್ಕೇರಿದೆ. ನಂತರ ಸ್ಥಾನದಲ್ಲಿ ಪಾಕಿಸ್ತಾನ, ಇಟಲಿ, ಸೌದಿ ಅರೇಬಿಯಾ, ಟರ್ಕಿ 2 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿವೆ.

ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5 ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ರಷ್ಯಾ (10,667), ಬೆಲ್ಜಿಯಂ ( 9,776), ಜರ್ಮನಿ (9,103), ಕೆನಡಾ (8,711), ಚಿಲಿ (6,434), ನೆದರ್ಲೆಂಡ್ಸ್(6,132), ಸ್ವೀಡನ್ (5,447), ಟರ್ಕಿ(5,260) ಕಾಣಿಸಿಕೊಂಡಿವೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...

COVID-19 Infographics: Countries With Most Number of Infected and Deaths July 12

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 3,355,781 ಪ್ರಕರಣಗಳು
ಬ್ರೆಜಿಲ್: 1,840,812
ಭಾರತ: 850,827
ರಷ್ಯಾ: 727,162
ಪೆರು: 322,710
ಚಿಲಿ: 312,029
ಸ್ಪೇನ್: 300,988
ಮೆಕ್ಸಿಕೋ: 295,268
ಯುಕೆ: 288,953
ದಕ್ಷಿಣ ಆಫ್ರಿಕಾ: 264,184

COVID-19 Infographics: Countries With Most Number of Infected and Deaths July 12

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 137,403
ಬ್ರೆಜಿಲ್: 71,492
ಯುಕೆ: 44,798
ಇಟಲಿ: 34,945
ಮೆಕ್ಸಿಕೋ: 34,730
ಫ್ರಾನ್ಸ್: 30,004
ಸ್ಪೇನ್: 28,403
ಭಾರತ: 22,696
ಇರಾನ್: 12,635
ಪೆರು: 11,682

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+