COVID-19: ಒಟ್ಟು 11,404,116 ಸೋಂಕಿತರು, ಯಾವ ದೇಶದಲ್ಲಿ ಎಷ್ಟು?

ಬೆಂಗಳೂರು, ಜುಲೈ 5: ಜಾಗತಿಕ ಮಹಾಮಾರಿ ಕೊವಿಡ್19 ಸೋಂಕಿನಿಂದ ಅಪಾರ ಪ್ರಮಾಣದಲ್ಲಿ ಸಾವು ನೋವು ಉಂಟಾಗುತ್ತಿದೆ. ಭಾರತದಲ್ಲಿ ಒಂದೇ ದಿನ 25 ಸಾವಿರದಷ್ಟು ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಭಾರತದ ಜೊತೆಗೆ ಹೆಚ್ಚು ಸೋಂಕಿತರನ್ನು ಹೊಂದಿದ್ದ ರಷ್ಯಾದಲ್ಲಿ ಒಂದೇ ದಿನ 6 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರುವುದು ಆತಂಕಕಾರಿಯಾಗಿದೆ.

ರಷ್ಯಾದಲ್ಲಿ ನಿನ್ನೆ ತನಕ ಮರಣ ಪ್ರಮಾಣ ತೀರಾ ಕಡಿಮೆಯಿತ್ತು, ಆದರೆ, ಈಗ 10 ಸಾವಿರಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ. ಭಾರತದಲ್ಲಿ ಸಾವಿನ ಸಂಖ್ಯೆ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಆದರೆ, ಸೋಂಕು ಪ್ರಮಾಣದಲ್ಲಿ ರಷ್ಯಾಕ್ಕೆ ಪೈಪೋಟಿ ನೀಡಿ ಮೂರನೇ ಸ್ಥಾನಕ್ಕೇರುವ ಎಲ್ಲಾ ಸಾಧ್ಯತೆಗಳಿವೆ. ಸೋಂಕು ನಿಯಂತ್ರಣ, ಸೋಂಕು ನಿವಾರಣೆಗಾಗಿ ಲಸಿಕೆ ತಯಾರಿ ನಡುವೆ ಜುಲೈ 5ಕ್ಕೆ ಸಾವು ನೋವಿನ ಅಂಕಿ ಅಂಶ ಇಲ್ಲಿದೆ..

ಜುಲೈ 5ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 11,404,116 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 533,970 ಕ್ಕೇರಿದೆ. ಒಟ್ಟಾರೆ, 6,455,317 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 4,414,829 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 58,477 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.

ಮೆಕ್ಸಿಕೋದಲ್ಲಿ ಒಂದೇ ದಿನ 6,914 ಪ್ರಕರಣ ಕಾಣಿಸಿಕೊಂಡು ಟಾಪ್ 10 ಪಟ್ಟಿಯೊಳಗೆ ಮತ್ತೆ ಸೇರಿದೆ. ಟಾಪ್ 11ಕ್ಕೆ ಇರಾನ್ ಕುಸಿದಿದ್ದು, ನಂತರ ಸ್ಥಾನದಲ್ಲಿ ಪಾಕಿಸ್ತಾನ, ಸೌದಿ ಅರೇಬಿಯಾದ ಇದ್ದು, ನಂತರದ ಸ್ಥಾನದಲ್ಲಿರುವ ಟರ್ಕಿ ಕೂಡಾ 2 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿವೆ.

ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5 ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ರಷ್ಯಾ (10,161), ಬೆಲ್ಜಿಯಂ ( 9,771), ಜರ್ಮನಿ (9,081), ಕೆನಡಾ (8,674), ನೆದರ್ಲೆಂಡ್ಸ್(6,113), ಚಿಲಿ (6,192), ಸ್ವೀಡನ್ (5,420), ಟರ್ಕಿ(5,206) ಕಾಣಿಸಿಕೊಂಡಿವೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...

COVID-19 Infographics: Countries With Most Number of Infected and Deaths July 05
COVID-19 Infographics: Countries With Most Number of Infected and Deaths July 05
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+