ಏಪ್ರಿಲ್ 25ರ ಅಂಕಿ-ಅಂಶ: ವಿಶ್ವದ ಯಾವ ದೇಶದಲ್ಲಿ ಎಷ್ಟು ಕೊವಿಡ್ ಸೋಂಕಿತರು ಗುಣಮುಖ?
ನವದೆಹಲಿ, ಏಪ್ರಿಲ್ 25: ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಮತ್ತೆ ಶುರುವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಜಗತ್ತಿನಲ್ಲಿ ವರದಿ ಆಗುತ್ತಿರುವ ಕೊವಿಡ್-19 ಪ್ರಕರಣಗಳು, ಒಟ್ಟು ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖರಾದವರ ಅಂಕಿ ಅಂಶಗಳ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ವಿಶ್ವದೆಲ್ಲೆಡೆ ಒಟ್ಟು 509,615,095ಕ್ಕೂ ಅಧಿಕ ಸೋಂಕಿತ ಪ್ರಕರಣಗಳು ವರದಿಯಾಗಿದ್ದು 6,243,570 ಮಂದಿ ಸೋಂಕಿತರು ಸಾವಿನ ಮನೆ ಸೇರಿದ್ದಾರೆ. ಜಾಗತಿಕವಾಗಿ ಈವರೆಗೆ 462,518,876 ಪ್ರಕರಣಗಳಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲೇ ದಕ್ಷಿಣ ಕೊರಿಯಾ ಅತಿಹೆಚ್ಚು ಎಂದರೆ 64 ಸಾವಿರ, ಫ್ರ್ಯಾನ್ಸ್ 58 ಸಾವಿರ ಹಾಗೂ ಇಟಲಿ 56 ಸಾವಿರ ಸೋಂಕಿತ ಪ್ರಕರಣಗಳನ್ನು ವರದಿ ಮಾಡಿವೆ.
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಚಿತ್ರಣ ಬದಲಾಗಿದೆ. ಒಂದು ದಿನದಲ್ಲಿ ದಾಖಲಾಗುತ್ತಿದ್ದ ಪ್ರಕರಣಗಳ ಸಂಖ್ಯೆಯು ಒಂದು ಸಾವಿರದ ಆಸುಪಾಸಿಗೆ ಬಂದು ನಿಂತಿದೆ. ಇದರ ಮಧ್ಯೆ ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್‌ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್10 ದೇಶಗಳ ವಿವರ (ಏಪ್ರಿಲ್ 25ರ ಪ್ರಕಾರ) ಇಲ್ಲಿದೆ.

ದೇಶದಲ್ಲಿ ಒಂದೇ ದಿನ 2,541 ಮಂದಿಗೆ ಕೊವಿಡ್
ಭಾರತದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಎರಡು ಸಾವಿರದ ಗಡಿ ದಾಟುತ್ತಿದೆ. ಕಳೆದ 24 ಗಂಟೆಗಳಲ್ಲಿ 2,541 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 30 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 1,862 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 43,060,086ಕ್ಕೆ ಏರಿಕೆಯಾಗಿದೆ. ಈ ಪೈಕಿ 42,521,341 ಸೋಂಕಿತರು ಗುಣಮುಖರಾಗಿದ್ದರೆ, 522,223 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 16,522 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ವಿಶ್ವದಲ್ಲಿ ಹೇಗಿದೆ ಕೊವಿಡ್-19 ಲೆಕ್ಕಾಚಾರ?
ವಿಶ್ವದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಲವು ರಾಷ್ಟ್ರಗಳಲ್ಲಿ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಈವರೆಗೂ 509,615,095 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 6,243,570 ಮಂದಿ ಪ್ರಾಣ ಬಿಟ್ಟಿದ್ದಾರೆ. 462,518,8766 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 40,852,649 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಇದರ ಹೊರತಾಗಿ ಅತಿಹೆಚ್ಚು ಕೊವಿಡ್-19 ಬಾಧಿತ, ಅತಿಹೆಚ್ಚು ಸಾವಿನ ಪ್ರಕರಣ ದಾಖಲಿಸಿದ, ಅತಿಹೆಚ್ಚು ಗುಣಮುಖರ ಸಂಖ್ಯೆಯನ್ನು ದಾಖಲಿಸಿರುವ ಟಾಪ್-10 ರಾಷ್ಟ್ರಗಳ ವಿವರವನ್ನು ಮುಂದೆ ನೋಡೋಣ.

ಕೊವಿಡ್-19 ಬಾಧಿತ ಟಾಪ್ 10 ದೇಶಗಳು
ಯುಎಸ್ಎ: 8,26,62,748
ಭಾರತ: 4,30,60,086
ಬ್ರೆಜಿಲ್: 3,03,49,463
ಫ್ರಾನ್ಸ್: 2,83,03,931
ಜರ್ಮನಿ: 2,41,40,700
ಯುಕೆ: 2,1933,206,
ರಷ್ಯಾ: 1,81,44,788
ದಕ್ಷಿಣ ಕೊರಿಯಾ: 1,69,29,564
ಇಟಲಿ: 1,61,36,057
ಟರ್ಕಿ: 1,50,18,547

ಅತಿಹೆಚ್ಚು ಸಾವಿನ ಪ್ರಕರಣ ದಾಖಲಿಸಿದ ಟಾಪ್-19 ರಾಷ್ಟ್ರಗಳು
ಕೊರೊನಾವೈರಸ್ ಸೋಂಕಿನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: 10,18,335
ಬ್ರೆಜಿಲ್: 6,62,701
ಭಾರತ: 5,22,223
ರಷ್ಯಾ: 3,75,061
ಮೆಕ್ಸಿಕೋ: 3,24,129
ಪೆರು: 2,12,742
ಯುಕೆ: 1,73,352
ಇಟಲಿ: 1,62,688
ಇಂಡೋನೇಷಿಯಾ: 1,56,133
ಫ್ರಾನ್ಸ್: 1,45,060

ಅತಿಹೆಚ್ಚು ಗುಣಮುಖ ಸಂಖ್ಯೆಯನ್ನು ಹೊಂದಿರುವ ದೇಶಗಳು
ಕೊರೊನಾವೈರಸ್ ಸೋಂಕಿನಿಂದ ಅತಿ ಹೆಚ್ಚು ಗುಣಮುಖರಾದವರನ್ನು ಹೊಂದಿರುವ ಟಾಪ್ 10 ದೇಶ:
ಯುಎಸ್ಎ: 8,04,65,351
ಭಾರತ: 4,25,21,341
ಬ್ರೆಜಿಲ್: 2,93,84,354
ಫ್ರಾನ್ಸ್: 2,58,80,440
ಜರ್ಮನಿ: 2,14,25,200
ಯುಕೆ: 2,08,75,063
ರಷ್ಯಾ: 1,74,83,483
ಟರ್ಕಿ: 1,48,70,422
ಅರ್ಜೆಂಟೀನಾ: 88,95,999
ಇರಾನ್: 69,66,954
(ಮಾಹಿತಿ ಕೃಪೆ: ವರ್ಲ್ಡ್‌ಮೀಟರ್)












Click it and Unblock the Notifications