Ganesha Chaturthi 2023: ಗಣೇಶನ ಹಬ್ಬ ಯಾವಾಗ? ಸೆಪ್ಟೆಂಬರ್ 18? 19?

ಗಣೇಶ ಚತುರ್ಥಿ ಭಾರತದಾದ್ಯಂತ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಮುಖ್ಯವಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಭಾರತದ ಅನೇಕ ಭಾಗಗಳಲ್ಲಿ ಬಹಳ ಉತ್ಸಾಹ ಮತ್ತು ವೈಭವದಿಂದ ಆಚರಿಸಲಾಗುತ್ತದೆ.

ಗಣೇಶ ಚತುರ್ಥಿ ದಿನ ಗಣೇಶನನ್ನು ಬುದ್ಧಿವಂತಿಕೆ, ಸಮೃದ್ಧಿ, ಅದೃಷ್ಟ ಮತ್ತು ಯೋಗಕ್ಷೇಮಕ್ಕಾಗಿ ಪೂಜಿಸಲಾಗುತ್ತದೆ. ಆದರೆ ಈ ವರ್ಷ ಗಣೇಶ ಚತುರ್ಥಿ ಹಬ್ಬದ ದಿನಾಂಕದ ಬಗ್ಗೆ ಕೆಲವು ಗೊಂದಲಗಳಿವೆ. ಏಕೆಂದರೆ ಕೆಲವು ರಾಜ್ಯಗಳಲ್ಲಿ ಆಯಾ ಸರ್ಕಾರಗಳು ಸೆಪ್ಟೆಂಬರ್ 18 ರಂದು ಗಣೇಶ ಚತುರ್ಥಿ ರಜೆ ನೀಡಿವೆ, ಕೆಲವು ರಾಜ್ಯಗಳಲ್ಲಿ ಸೆಪ್ಟೆಂಬರ್ 19 ರಜೆ ನೀಡಲಾಗಿದೆ.

When Is Ganesha Chaturthi Festival Celebrated In 2023? Sept 18 Or 19?

ದೃಕ್ ಪಂಚಾಂಗದ ಪ್ರಕಾರ 2023ರಲ್ಲಿ ವಿನಾಯಕ ಚತುರ್ದಶಿಯ 10-ದಿನಗಳ ಹಬ್ಬ ಸೆಪ್ಟೆಂಬರ್ 18ರ ಸೋಮವಾರದಂದು ಮಧ್ಯಾಹ್ನ 12:39 ಕ್ಕೆ ಪ್ರಾರಂಭವಾಗಲಿದೆ. ಮೊದಲ ದಿನದ ಪೂಜೆ ಸೆಪ್ಟೆಂಬರ್ 19, 2023 ರಂದು ಮಂಗಳವಾರ ರಾತ್ರಿ 8:43 ಕ್ಕೆ ಮುಕ್ತಾಯಗೊಳ್ಳಲಿದೆ. ಇದಲ್ಲದೆ, ಮಧ್ಯಾಹ್ನ ಗಣೇಶ ಪೂಜೆ ಮುಹೂರ್ತವು ಬೆಳಿಗ್ಗೆ 11:01 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 1:28 ರವರೆಗೆ ವಿಸ್ತರಿಸಲ್ಪಡುತ್ತದೆ, ಒಟ್ಟು 2 ಗಂಟೆ 27 ನಿಮಿಷಗಳ ಕಾಲ ಇರುತ್ತದೆ.

ಚತುರ್ಥಿ ತಿಥಿ ಆರಂಭ: ಸೆಪ್ಟೆಂಬರ್ 18, 2023 ರಂದು ಮಧ್ಯಾಹ್ನ 12:39

ಚತುರ್ಥಿ ತಿಥಿ ಕೊನೆಗೊಳ್ಳುತ್ತದೆ: ಸೆಪ್ಟೆಂಬರ್ 19, 2023 ರಂದು ಮಧ್ಯಾಹ್ನ 01:43 ಕ್ಕೆ

ಚಂದ್ರನ ದರ್ಶನವನ್ನು ತಪ್ಪಿಸುವ ಸಮಯ - 09:45 ಬೆಳಿಗ್ಗೆ ರಿಂದ 08:44 ರಾತ್ರಿ

ಸಾಂಆನ್ಯವಾಗಿ ಬಹುತೇಕ ಕಡೆ ಗಣೇಶನ ವಿಗ್ರಹವನ್ನು ಒಂದು ದಿನ ಮಾತ್ರ ಇಟ್ಟು ಪೂಜೆ ಮಾಡಲಾಗುತ್ತದೆ. ಬಳಿಕ ವಿಸರ್ಜನೆ ಮಾಡಲಾಗುತ್ತದೆ. ಒಂದು ದಿನ ಪೂಜೆ ಮಾಡುವವರಿಗೆ ಮೇಲೆ ನೀಡಿದ ಸಮಯ ಸೂಕ್ತವಾಗಿದೆ.

ಇನ್ನೂ ಹಲವೆಡೆ ಗಣೇಶ ಚತುರ್ಥಿ ಮತ್ತು ಗಣೇಶನ ಹಬ್ಬವು ಅನಂತ ಚತುರ್ದಶಿಯ 10 ನೇ ದಿನದಂದು ಕೊನೆಗೊಳ್ಳುತ್ತದೆ. ಈ ದಿನ ಗಣೇಶನ ವಿಗ್ರಹವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಲಾಗುತ್ತದೆ. ಕೆಲವರು ಗಣೇಶನನ್ನು ಒಂದು ದಿನ ಕೂಡಿಸಿದರೆ ಇನ್ನೂ ಕೆಲವರು ಹತ್ತು, ಒಂದು ತಿಂಗಳವರೆಗೂ ಗಣೇಶನನ್ನು ಇಟ್ಟು ಪೂಜೆ ಮಾಡುತ್ತಾರೆ. ಹಲವೆಡೆ ಒಂದೇ ಬಾರಿ ಪ್ರದೇಶದ ಎಲ್ಲಾ ಗಣೇಶನನ್ನು ಮೆರವಣಿಗೆ ಮಾಡುವ ಮೂಲಕ ವಿಸರ್ಜನೆ ಮಾಡಲಾಗುತ್ತದೆ.

When Is Ganesha Chaturthi Festival Celebrated In 2023? Sept 18 Or 19?

ಬ್ಯಾಂಕ್ ರಜೆ

ಕರ್ನಾಟಕ, ತಮಿಳುನಾಡು ಮತ್ತು ಹೈದರಾಬಾದ್‌ಗೆ ಸೆಪ್ಟೆಂಬರ್ 18 ರಂದು ಬ್ಯಾಂಕ್ ರಜೆ ಇದೆ. ಮಹಾರಾಷ್ಟ್ರ, ಗುಜರಾತ್ ಮತ್ತು ಒಡಿಶಾ ಸೇರಿದಂತೆ ಬಹುತೇಕ ರಾಜ್ಯಗಳಿಗೆ ಸೆಪ್ಟೆಂಬರ್ 19 ರಂದು ಬ್ಯಾಂಕ್ ರಜೆ ಇದೆ.

ದೇಶದೆಲ್ಲೆಡೆ ಹಬ್ಬದ ತಯಾರಿ

ಈಗಾಗಲೇ ಮುಂಬೈನಂತಹ ಪ್ರದೇಶಗಳಲ್ಲಿ ಬೃಹತ್ ಗಣೇಶನ ಮೂರ್ತಿಗಳು ಪೂಜಾ ಸ್ಥಳವನ್ನು ತಲುಪಿವೆ. ಅದಕ್ಕೆ ತಕ್ಕಂತೆ ಅಲಂಕಾರಗಳನ್ನು ಸಿದ್ಧಪಡಿಸಲಾಗುತ್ತಿದೆ. ರಸ್ತೆ ಬದಿ, ಅಂಗಡಿಗಳಲ್ಲಿ ಬೃಹತ್ ಗಾತ್ರದ ಗಣೇಶನ ಮೂರ್ತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಈಗಾಗಲೇ ಹಬ್ಬದ ತಯಾರಿಯಲ್ಲಿರುವ ಜನ ಹಬ್ಬದ ದಿನ ಬರುವಿಕೆಯನ್ನು ಕಾತುರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+